ದಿನಕ್ಕೊಂದು ಯೋಗಾಸನದ ಪರಿಚಯ

Ravi Talawar
ದಿನಕ್ಕೊಂದು ಯೋಗಾಸನದ ಪರಿಚಯ
WhatsApp Group Join Now
Telegram Group Join Now

 

ಯೋಗಾಸನದ ಹೆಸರು: ಪದ್ಮ ಶಲಭಾಸನ (ಪದ್ಮ ಅಂದರೆ ಕಮಲ ಪು?, ಶಲಭ ಅಂದರೆ ಮಿಡತೆ)

ಅಭ್ಯಾಸದ ವಿಧಾನ:ಪದ್ಮಾಸನದಲ್ಲಿ ಕುಳಿತುಕೊಳ್ಳಿ, ಬೋರಲಾಗಿ ಮಲಗಿ. ಗಲ್ಲು ನೆಲಕ್ಕೆ ತಾಗಿರಲಿ, ಕಾಲುಗಳು ಸೂಪ್ತ ಪದ್ಮಾಸನದಲ್ಲಿರಲಿ. (ಪದ್ಮಾಸನದಲ್ಲಿ ಮಲಗುವ ಭಂಗಿ) ತೊಡೆಯ ಕೆಳಗೆ ಕೈಗಳನ್ನು ಮುದುರಿಕೊಳ್ಳಿ. ಅಂಗೈಗಳು ಕೆಳಮುಖವಾಗಿರಲಿ. ಉಚ್ಛ್ವಾಸ ಮಾಡುತ್ತಾ ಎರಡು ಮಂಡಿಗಳನ್ನು ಮೇಲಕ್ಕೆ ಎತ್ತಿ. ಗದ್ದವನ್ನು ನೆಲದ ಮೇಲಿರಿಸಿ.
ಪೃ?ದ ಮೇಲ್ಭಾಗ, ಬೆನ್ನಿನ ಕೆಳಭಾಗ ಮತ್ತು ಸೊಂಟದ ಪ್ರದೇಶದಲ್ಲಿಯ ಅತಿಯಾದ ಹಿಗ್ಗುವಿಕೆಯನ್ನು ಅನುಭವಿಸಿ. ನಿಮಗೆ ಸಾಧ್ಯವಾದ? ಕಾಲ ಈ ಬಂಗಿಯಲ್ಲಿರಿ. ಕಾಲುಗಳನ್ನು ನೆಲಕ್ಕೆ ತಂದು ವಿರಮಿಸಿ.

ಪ್ರಯೋಜನಗಳು:
ಶಲಭಾಸನಕ್ಕಿಂತಲೂ ಇದು ಹೆಚ್ಚು ತೀಕ್ಷ್ಣವಾದ ಭಂಗಿ. ಬೆನ್ನಿನ ಕೆಳಭಾಗ ಮತ್ತು ಸೊಂಟದಲ್ಲಿ ಬಿಗಿತದಂತಹ ಸಮಸ್ಯೆ ಇರುವವರಿಗೆ ಸಹಕಾರಿ. ಗದ್ದದ ಮತ್ತು ಕುತ್ತಿಗೆಯ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಪೃ?ಭಾಗದ ಸ್ನಾಯುಗಳು ಮತ್ತು ವಸ್ತಿಕುಹರದ (ಠಿeಟviಛಿ ಡಿegioಟಿ) ಪ್ರದೇಶಗಳಿಗೆ ಬಲವರ್ಧಕವಾಗಿದೆ.

ಎಚ್ಚರಿಕೆ:
ಬೆನ್ನಿನ ಕೆಳ ಭಾಗದಲ್ಲಿ ತೀವ್ರವಾದ ತೊಂದರೆ ಉಳ್ಳವರು. ಈ ಆಸನವನ್ನು ಎಚ್ಚರಿಕೆಯಿಂದ ಅಥವಾ ಯೋಗ ಮಾರ್ಗದರ್ಶಕ ಉಪಸ್ಥಿತಿಯಲ್ಲಿ ಮಾಡಬೇಕು.

 

WhatsApp Group Join Now
Telegram Group Join Now
Share This Article