ದಿನಕ್ಕೊಂದು ಆಸನದ ಪರಿಚಯ ಆಸನದ ಹೆಸರು: ಗೋಮುಖಾಸನ(ಆಕಳ ಮುಖದ ಭಂಗಿ )

Ravi Talawar
ದಿನಕ್ಕೊಂದು ಆಸನದ ಪರಿಚಯ  ಆಸನದ ಹೆಸರು: ಗೋಮುಖಾಸನ(ಆಕಳ ಮುಖದ ಭಂಗಿ )
WhatsApp Group Join Now
Telegram Group Join Now

 

ಅಭ್ಯಾಸದ ವಿಧಾನ:
ಕಲ್ಲು ಚಾಚಿ ಕುಳಿತುಕೊಳ್ಳಿ. ಎಡಮಣಕಾಲು ಮಡಿಸಿ ಎಡ ಹಿಮ್ಮಡಿಯನ್ನು ಬಲಪೃ?ದ ಬಳಿಗೆ ತನ್ನಿ. ಬಲಮಣ ಕಾಲನ್ನು ಮಡಿಸಿ ಅದನ್ನು ಎಡಮಣ ಕಾಲದ ಮೇಲೆ ಬರುವಂತೆ ಇರಿಸಿ. ಬಲ ಹಿಮ್ಮಡಿಯನ್ನು ಎಡಪೃ?ದ ಬಳಿಗೆ ತನ್ನಿ. ಎಡ ಮೊಣ ಕೈಯನ್ನು ಬಾಗಿಸಿ ಅದು ನೆಲವನ್ನು ನೋಡುವಂತಿರಲಿ. ಎಡ ತೋಳಿನ ಕೆಳ ಭಾಗವನ್ನು ಬೆನ್ನಿನ ಹಿಂದೆ ಇಡಿ. ಎಡ ಹಸ್ತವು ಹೊರಮುಖವಾಗಿ ಚಾಚಿರಲಿ. ಬಲಗೈಯನ್ನು ಮೇಲಕ್ಕೆ ಎತ್ತರಿಸಿ. ಬಲ ಮೊಣ ಕೈಯನ್ನು ಬಾಗಿಸಿ ಅದು ಛಾವಣಿಯಂತೆ ನೋಡಲಿ. ಬಲ ಹಸ್ತವನ ಎಡ ಹಸ್ತದ ಮೇಲಿಟ್ಟು ಬೆರಳುಗಳನ್ನು ಬಂಧಿಸಲು ಪ್ರಯತ್ನಿಸಿ. ಬಲ ತೋಳಿನ ಮೇಲ್ಭಾಗವನ್ನು ತಲೆಯ ಹಿಂದೆ ತಂದು ತೋಳಿನ ಮೇಲ್ಭಾಗವನ್ನು ತಲೆಯ ಸಹಾಯದಿಂದ ತಳ್ಳಿರಿ. ಗಲ್ಲವನ್ನು ಎತ್ತಿ ಚಾವಣಿ ಕಡೆಗೆ ನೋಡಲು ಪ್ರಯತ್ನಿಸಿ. ಭುಜ ಮತ್ತು ಕೈಗಳಲ್ಲಿ ಆಗುವ ಹಿಂಗುವಿಕೆಯನ್ನು ಅನುಭವಿಸಿ. ಕೈ ಕಾಲುಗಳನ್ನು ಬದಲಾಯಿಸಿ ಸಮ ಉಸಿರಾಟದ ಪ್ರಮಾಣದಲ್ಲಿ ಮಾಡಿ.

ಪ್ರಯೋಜನಗಳು:
ಭುಜಗಳು, ತೋಳಿನ ಮೇಲ್ಭಾಗದಲ್ಲಿರುವ ಸೆಳೆತವನ್ನು ಬಿಡಿಸುತ್ತದೆ. ಭುಜದ ಸ್ನಾಯುಗಳನ್ನು ಬಾಗಿಸುತ್ತದೆ. ಪ್ರೋಜನ್ ಸೋಲ್ಡರ್, ಗೂನು ಬೆನ್ನು ಮತ್ತು ಉಸಿರಾಟದ ತೊಂದರೆಯಿರುವವರಿಗೆ ಉಪಯುಕ್ತವಾಗಿದೆ.

ಎಚ್ಚರಿಕೆ:
ಕುತ್ತಿಗೆ ಮತ್ತು ಭುಜದ ನೋವಿರುವವರು ಎಚ್ಚರಿಕೆಯಿಂದ ಮಾಡಬೇಕು.

WhatsApp Group Join Now
Telegram Group Join Now
Share This Article