ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕವಿಗೋಷ್ಠಿ ಕಾರ್ಯಕ್ರಮ

A B
By A B
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕವಿಗೋಷ್ಠಿ ಕಾರ್ಯಕ್ರಮ
WhatsApp Group Join Now
Telegram Group Join Now

ಬೆಳಗಾವಿ: ಮಾನಸಿಕ ಪರಿವರ್ತನೆಯ ವೈಚಾರಿಕ ಮನೋಧರ್ಮವೇ ಸ್ತ್ರೀವಾದದ ಆಶಯವಾಗಿದೆ. ಸಮಾನತೆ ಅದರ ಗುರಿ, ಸೋಲಿಸುವವರನ್ನು ಸೋಲಿಸುವುದೇ ಹೋರಾಟದ ದಾರಿ ಎಂದು  ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.

ನಗರದ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ  ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಬೆಳಗಾವಿಯ ಜಿಲ್ಲಾ ಮತ್ತು ತಾಲೂಕಾ ಘಟಕಗಳು ಸಂಯುಕ್ತವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ  ವರ್ತಮಾನದಲ್ಲಿ ಮಹಿಳಾ ತಲ್ಲಣಗಳು ಮತ್ತು ಅಭ್ಯುದಯ  ಎನ್ನುವ ವಿಶೇಷ ಉಪನ್ಯಾಸ ಕುರಿತು ಮಾತನಾಡಿದರು.

ಸ್ಥಗಿತವಾದುದನ್ನು ತಿರಸ್ಕರಿಸುವುದು ಚಲನಶೀಲವಾದುದನ್ನು ಸ್ವೀಕರಿಸುವುದು ಎಲ್ಲ ಚಳುವಳಿಗಳ ಸಮಾನ ಧೋರಣೆ. ಮಹಿಳಾ ಚಳುವಳಿಯು ಪುರುಷ ಮನೋಧರ್ಮ ಮತ್ತು ಪರಿಭಾಷೆಯನ್ನು ಮುರಿದು ಕಟ್ಟದಿದ್ದರೆ, ಯಥಾಸ್ಥಿತಿವಾದ ಮುಂದುವರಿಯುತ್ತದೆ. ದೌರ್ಜನ್ಯಕ್ಕೊಳಗಾಗುವ ಸ್ತ್ರೀ ಸಮುದಾಯವು ‘ನಾವೂ ನಿಮ್ಮಂತೆ ಮನುಷ್ಯರಲ್ಲವೇ?’ ಎಂದು ಕೇಳುವ ಬದಲಿಗೆ ‘ನೀವೂ ನಮ್ಮಂತೆ ಮನುಷ್ಯರಲ್ಲವೇ?’ ಎಂದು ಪ್ರಶ್ನಿಸಬೇಕು ಅಂದಾಗ ಶೋಷಕರು ದಿಗಿಲುಗೊಳ್ಳುತ್ತಾರೆ, ಮಾನಸಿಕ ಪರಿವರ್ತನೆಗೆ ಒಳಗಾಗುತ್ತಾರೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷೆ ಸುಶೀಲಾ ಗುರವ ಅವರು ಮಾತನಾಡಿ,  ಹೆಣ್ಣು ಮಕ್ಕಳ ಸ್ಥಾನ ಮಾನ ಹಾಗೂ ಅವರಿಗೆ ಪ್ರೋತ್ಸಾಹ ನೀಡುವಂತಹ ಸಮಾಜ ನಿರ್ಮಾಣವಾಗಬೇಕಿದೆ ಒಂದು ದಿನದ ಮಹಿಳಾ ದಿನಾಚರಣೆಯ ಅಲ್ಲ ಅದು ದಿನ ನಿತ್ಯ ವಿಚಾರಗಳಲ್ಲಿ ಕೃತಿಗಳಲ್ಲಿ ಮೂಡಿಬರುವಂತಹ ಭಾವನೆ ಎಲ್ಲರೂ ಬೆಳೆಸಿಕೊಳ್ಳಬೇಕೆಂದು  ಎಂದರು.

ಈ ವೇಳೆ  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶಾಂತಾದೇವಿ ಹುಲೆಪ್ಪನವರಮಠ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಲಾ ರಾಜೇಂದ್ರ ಮಠದ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ  ಜಿಲ್ಲಾ ಘಟಕದ ನೂತನ ಸದಸ್ಯರಿಗೆ ಪದಗ್ರಹಣ ಮಾಡಲಾಯಿತು. ಈ ವೇಳೆ ಕೆಎಚ್ .ಪಿ .ಎಸ್ ನಂಬರ್ 15 ಮಲಪ್ರಭಾ ನಗರ್  ಶಾಲೆಯ ಮಕ್ಕಳಿಂದ ಪ್ರಾರ್ಥನಾ ಗೀತೆ ಹಾಗೂ ಜನಪದ ನೃತ್ಯ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕೊಟ್ರೇಶ್ ಉಪ್ಪಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ತಾಲೂಕಾ ಅಧ್ಯಕ್ಷೆ ಡಾ. ಪಾರ್ವತಿ ಪಾಟೀಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ವೇದಿಕೆಯ ಗೌರವಾಧ್ಯಕ್ಷರಾದ  ಬಸವರಾಜ ಗಾರ್ಗಿ , ಸಾಹಿತಿ ಗುರುದೇವಿ ಹುಲೆಪ್ಪನವರಮಠ, ರತ್ನ ಪ್ರಭಾ ಬೆಲ್ಲದ, ಧಾರವಾಡದ  ಎ. ಎ. ದರ್ಗಾ, ಈರಣ್ಣ ದೇಯನ್ನವರ , ರಮೇಶ ಮಗದುಮ್ಮ, ರಮೇಶ ಇಂಗಳಗಿ, ವಿಜಯ ಬಡಿಗೇರ, ಹಣಮಂತ ನಾಯಕ, ಬಿ. ಯು. ಭೈರಕದಾರ, ಸುಧಾ ಸಾಬಣ್ಣವರ, ಗೀತಾ ಜಮಖಂಡಿ, ಗೌರಿ ರಾಮಗುರವಾಡಿ ಹಾಗೂ ಸರೋಜಿನಿ ಸಮಾಜೆ ಸ್ವಾಗತಿಸಿದರು.  ಪ್ರಕಾಶ ಗಾಣಿಗಿ ವಂದಿಸಿದರು. ಪ್ರೀತಿ ಕುಲಕರ್ಣಿ ನಿರೂಪಿಸಿದರು.

ಕವಿಗೋಷ್ಠಿ ಕಾರ್ಯಕ್ರಮ:

ನಂತರ ಕವಯತ್ರಿ ಡಾ. ಸುಮಾ ಕಿತ್ತೂರ ಅವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ  ಅವರು ಮಾತನಾಡಿ, ಒಬ್ಬ ಚಿಂತಕ ,ಒಬ್ಬ ಕವಿ ತನ್ನ ಕವನದಲ್ಲಿ ಅಂತರಂಗದ ತುಡಿತದ ಸಂದೇಶಗಳನ್ನು ಗಟ್ಟಿಯಾಗಿ ಸಮಾಜಕ್ಕೆ, ಕೇಳುಗರಿಗೆ ಸಾರ್ಥಕ ಎನ್ನುವ ಮಟ್ಟಿಗೆ ಕವನ ರಚಿಸಬೇಕಾಗಿದೆ. ಹೆಣ್ಣು ಮಕ್ಕಳ ಇಂದಿನ ಜೀವನದ ರೀತಿ-ನೀತಿ ಪದ್ಧತಿಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಅನಸುಯಾ ಸಾವಳಿ ಪೂರ್ಣಿಮಾ ಪಾಟೀಲ್, ಭಾರತಿ ಕಿತ್ತೂರಮಠ, ದೀಪ ಪಾಟೀಲ,  ಪ್ರೀತಿ ಕುಲಕರ್ಣಿ,  ಚೆನ್ನಮ್ಮ ಜಕ್ಕವಾಳ,  ವೈಷ್ಣವಿ ಬೆಳಗಾವಿ, ಶಿಲ್ಪಾ ಹೂಗಾರ,  ಶಿವಲೀಲಾ ಹುಣಸಿಕಟ್ಟಿ, ಗೋದಾವರಿ ಪಾಟೀಲ, ಸ್ನೇಹ ಗುರವ, ಶೈಲಜಾ ಮಠಪತಿ, ಸುಜಾತ ಚೌಗಲಾ, ಜ್ಯೋತಿ ಗುರವ, ಗಂಗಮ್ಮ ಪಾಟೀಲ್, ಸಾವಿತ್ರಿ ಉಪ್ಪಿನ್, ಪ್ರಣಿತಾ ವಸ್ತ್ರದ ಮಠ ಕವನ ವಾಚನ ಮಾಡಿದರು.  ಸುಧಾ ಸಾಬಣ್ಣವರ್ ಪ್ರಾರ್ಥನಾ ಗೀತೆ ಹಾಡಿದರು. ಗೀತಾ ಜಮಖಂಡಿ ಸ್ವಾಗತಿಸಿದರು. ಡಾ ಪಾರ್ವತಿ ದೇವಿ ಪಾಟೀಲ್ ಆಶಯ ನುಡಿಗಳನ್ನಾಡಿದರು. ಪ್ರೊ ಸರೋಜನಿ ಸಮಾಜೆ ನಿರೂಪಿಸಿದರು. ಗೌರಿ ರಾಮಗುರವಾಡಿ ವಂದಿಸಿದರು.

WhatsApp Group Join Now
Telegram Group Join Now
Share This Article