ಅಥಣಿ: ಹುಬ್ಬಳ್ಳಿ ಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಥಣಿ ರಾಣಿ ಚೆನ್ನಮ್ಮ ಆತ್ಮ ಸಮರಕ್ಷಣೆ ಮತ್ತು ಕರಾಟೆ ಕ್ರೀಡಾ ಸಂಘ ಕರಾಟೆ ಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕುಮಿಟೆ ವಿಭಾಗದಲ್ಲಿ ಪ್ರಿಯದರ್ಶಿನಿ ಸವದಿ ಚಿನ್ನದ ಪದಕ ನಿಷಿಗಂದ ಮಲಗಾರ ಚಿನ್ನದ ಪದಕ ಪ್ರಥಮ ಶೇಡಬಾಲೆ ಕಂಚಿನ ಪದಕ ರಜತ್ ರುದ್ರಗೌಡರ್ ಚಿನ್ನದ ಪದಕ ಅನಿತಾ ಪಡನಾಡ ಬೆಳ್ಳಿ ಪದಕ ತ್ರಿಷಾ ಪವಾರ ಕಂಚಿನ ಪದಕ ಶ್ರವಣ ತಿಪ್ಪಿಮನಿ ಕಂಚಿನ ಪದಕ ಸ್ಥಾನ ಪಡೆದಿದ್ದಾರೆ.
ಕಟಾ ವಿಭಾಗದಲ್ಲಿ ಪ್ರಿಯದರ್ಶಿನಿ ಸವದಿ ಕಂಚಿನ ಪದಕ ನಿಷಿಗಂದ ಮಲಗಾರ ಚಿನ್ನದ ಪದಕ ಪ್ರಥಮ ಶೇಡಬಾಲೆ ಕಂಚಿನ ಪದಕ ರಜತ್ ರುದ್ರಗೌಡರ್ ಕಂಚಿನ ಪದಕ ಅನಿತಾ ಪಡನಾಡ ಕಂಚಿನ ಪದಕ ತ್ರಿಷಾ ಪವಾರ ಕಂಚಿನ ಪದಕ ಶ್ರವಣ ತಿಪ್ಪಿಮನಿ ಕಂಚಿನ ಪದಕ ಸ್ಥಾನ ಪಡೆದಿದ್ದಾರೆ. ಈ ಸಾಧನೆಗೆ ಅಕಾಡೆಮಿಯ ಮುಖ್ಯ ತರಬೇತಿಧಾರರು ಆದ ಸಂತೋಷ ಮೋಳೆ ಅಭಿನಂದನೆ ಸಲ್ಲಿಸಿದ್ದಾರೆ.