ನವಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

A B
By A B
ನವಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
WhatsApp Group Join Now
Telegram Group Join Now
ಧಾರವಾಡ ಡಿ 27., :- ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ನವ ಕರ್ನಾಟಕ ಫಿಲ್ಮ್ ಅಕ್ಯಾಡೆಮಿ ಹಮ್ಮಿಕೊಂಡಿದ್ದ ‘ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅತ್ಯಂತ ಯಶಸ್ವಿಯಾಗಿ ಜರುಗಿತು.
ಸಾಂಸ್ಕೃತಿಕ ನಗರಿಯಲ್ಲಿ ನಡೆದ ಈ ಚಲನಚಿತ್ರೋತ್ಸವವು ಯುಎಸ್‌ಎ, ಮಾಲ್ಡಿಂವ್ಸ್, ದೆಹಲಿ, ಕಾಶ್ಮೀರ, ಕೇರಳ, ಆಂದ್ರಪ್ರದೇಶ ಹೀಗೆ ಜಾಗತಿಕ ಮಟ್ಟದ ಸಿನೆಮಾ ಮತ್ತು ಪ್ರತಿಭೆಗಳಿಗೆ ಅದ್ಭುತ ವೇದಿಕೆ ಕಲ್ಪಿಸಿತು.
ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳ ತಜ್ಞರಾದ ಡಾ.ರಾಜನ ದೇಶಪಾಂಡೆ ಅವರು ಮಾತನಾಡಿ ಧಾರವಾಡ ಕಲೆ ಸಾಹಿತ್ಯ ಮತ್ತು ಮತ್ತು ಸಾಂಸ್ಕೃತಿಕ ತವರೂರು ಇಲ್ಲಿ ಚಲನಚಿತ್ರೋತ್ಸವ ನಡೆಯುತ್ತಿರುವದು ಸಂತೋಷ ಸಂಗತಿ. ಗ್ರಾಮೀಣ ಕಥೆಯನ್ನು ಇಟ್ಟುಕೊಂಡು ಸಿನೆಮಾ ಮಾಡುವ ಬಗ್ಗೆ ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಅನಿಲಕುಮಾರ್ ಪಾಟೀಲ,ಮಾತನಾಡಿಅದರ ಉತ್ತರ ಕರ್ನಾಟಕದ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಈ ಭಾಗದ ಕಲಾವಿದರನ್ನು ಬೆಳೆಸುವಂತೆ  ಸಿನೆಮಾ ನಿರ್ದೇಶಕರಿಗೆ ಸಲಹೆ ನೀಡಿದರು.
ನಿರ್ದೇಶಕ ಹಾಗೂ ನಟ ಮುನಿಕೃಷ್ಣ ಮಾತನಾಡಿ, ಹೊಸದಾಗಿ ಎರಡು ಸಿನೆಮಾಗಳು ಮಾಡುತ್ತಿರುವೆ. ಈ ಭಾಗದ ಆಸಕ್ತ ಕಲಾವಿದರಿಗೆ ಅವಕಾಶ ನೀಡಲಿದ್ದು, ಸದ್ಬಳಕೆ ಮಾಡಿಕೊಳ್ಳಲು ಕಲಾವಿದರಿಗೆ ಕೋರಿದರು.
ಪ್ರತಿಭೆಗಳಿಗೆ ಗೌರವ: ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿರುವ ಕಲಾವಿದರು ಮತ್ತು ತಂತ್ರಜ್ಞರನ್ನು ನವ ಕರ್ನಾಟಕ ಫಿಲ್ಮ್ ಅಕ್ಯಾಡೆಮಿ ವತಿಯಿಂದ ಪ್ರಶಸ್ತಿ ನೀಡುವುದರ ಮೂಲಕ ಗೌರವಿಸಲಾಯಿತು.
ದೇಶ-ವಿದೇಶಗಳ ವಿವಿಧ ಭಾಷೆಗಳ ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಹಾಗೂ ಫೀಚರ್ ಫಿಲ್ಮ್ಗಳನ್ನು ಪ್ರದರ್ಶಿಸಲಾಯಿತು. ವಿಶೇಷವಾಗಿ ಕನ್ನಡ ಚಿತ್ರರಂಗದ ಹೊಸ ಅಲೆಗೆ ಈ ವೇದಿಕೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಸಂಯೋಜಕ ರಾಹುಲ್ ದತ್ತಪ್ರಸಾದ, ಕಲಾವಿದರಾದ ಡಾ.ಕಲ್ಮೇಶ ಹಾವೇರಿಪೇಟ, ಗೀತಾ ಚಿಕ್ಕಮಠ, ಪ್ರಭು ಹಂಚಿನಾಳ, ರವೀಂದ್ರ ಪಾವಸ್ಕರ್, ಪ್ರೇಮಾ ನಡುವಿನಮನಿ, ಎಲ್.ಆರ್.ಬೂದಿಹಾಳ ಇದ್ದರು.
WhatsApp Group Join Now
Telegram Group Join Now
Share This Article