ಉಪ ಮೇಯರ್ ಡಿ.ಸುಕುಂ ರವರಿಗೆ ಸನ್ಮಾನಿಸಿದ  ಅಂತಾರಾಷ್ಟ್ರೀಯ ಚಿತ್ರ ಕಲಾವಿದ  ಮಹಮ್ಮದ್ ರಫೀಕ್

Ravi Talawar
ಉಪ ಮೇಯರ್ ಡಿ.ಸುಕುಂ ರವರಿಗೆ ಸನ್ಮಾನಿಸಿದ  ಅಂತಾರಾಷ್ಟ್ರೀಯ ಚಿತ್ರ ಕಲಾವಿದ  ಮಹಮ್ಮದ್ ರಫೀಕ್
WhatsApp Group Join Now
Telegram Group Join Now
ಬಳ್ಳಾರಿ ಜು 04   ಇತ್ತೀಚಿಗೆ ನಡೆದ ಮಹಾನಗರ ಪಾಲಿಕೆ ಮೇಯರ್ ಉಪ ಮೇಯರ್ ಚುನಾವಣೆಯಲ್ಲಿ ಕೌಲ್ ಬಜಾರ್ ನ 26 ನೇ ವಾರ್ಡಿನ ಪಾಲಿಕೆ ಸದಸ್ಯೆ ಡಿ.ಸುಕುಂ ರವರು ಉಪಮೇಯರ್ ಆಯ್ಕೆಯಾದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ  ಚಿತ್ರಕಲಾವಿದ ಮಹಮ್ಮದ್  ರಫೀಕ್ ರವರಿಗೆ ಪ್ರೀತಿಯ ಆಹ್ವಾನ ನೀಡಿದರು ಉಪಮೇಯರ್ ಡಿ.ಸುಕುಂ ರವರಿಗೆ ಸನ್ಮಾನಿಸಿ ಗೌರವಿಸಿ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ  ಚಿತ್ರ ಕಲಾವಿದ ಮಹಮ್ಮದ್  ರಫೀಕ್ ಸೃಷ್ಟಿ ಕರ್ತ ಅಲ್ಲಾಹನ ಕೃಪೆಯಿಂದ ಬಳ್ಳಾರಿ ಮಹಾನಗರ ಪಾಲಿಕೆಯ ಉಪ ಮೇಯರ್ ಆಗಿ ಆಯ್ಕೆಯಾಗಿದ್ದೀರಿ ಜನರ ಸೇವೆ ಮಾಡುವ ಸುವರ್ಣ ಅವಕಾಶ ತಮಗೆ ಸಿಕ್ಕಿದೆ ಇದರ ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಜನಸೇವೆ ಮಾಡಲಿ ನಾಡು, ನುಡಿ,ಜಲ . ಸಂಸ್ಕೃತಿಯ
ಜೊತೆಗೆ ಜಾತಿ ಧರ್ಮ ಮೇಲೂ ಕೀಳುಗಳೆಂಬ ಭೇದ ಭಾವನೆ ಇಲ್ಲದೇ ಸಮ ಸಮಾಜದ ನಿರ್ಮಾಣದ ಜೊತೆಗೆ ಜನರ ಅಭಿವೃದ್ಧಿಗಾಗಿ ನಿಮ್ಮ ಪರಿಕಲ್ಪನೆ ಸಕಾರಗೊಳ್ಳಲಿ ಎಂದು  ಅಂತರರಾಷ್ಟ್ರೀಯ ಚಿತ್ರ ಕಲಾವಿದ ಮತ್ತು ಅಮೆರಿಕದ  ನಾಸಾ ವಿಜೇತ  ರಫೀಕ್ ಮತ್ತು ಅವರ ಕುಟುಂಬ  ತುಂಬು ಹೃದಯದಿಂದ ಹಾರೈಸಿ ಉಪ ಮೇಯರ್‌ರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪ ಮೇಯರ್ ಡಿ.ಸುಕುಂ, ಪತಿ ಡಿ.ರಿಯಾಜ್ ಅಹ್ಮದ್,  ಮಹಮ್ಮದ್ ರಫೀಕ್ ಧರ್ಮಪತ್ನಿ  ವಾಹಿದ್ ಬಾನು,   ಕನ್ನಡ ರಣಧೀರರ ಪಡೆಯ ಜಿಲ್ಲಾಧ್ಯಕ್ಷರಾದ ಜಿಲಾನ್, ಪುಷ್ಪವತಿ ಏರಿಸ್ವಾಮಿ ಮಸ್ತಾನ್ ವಲಿ  ಆಸೀಫ್  ಸೇರಿದಂತೆ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article