ಬಿಕ್ಲು ಶಿವ ಕೊಲೆ ಕೇಸ್‌: ಭೈರತಿಗೆ ಮಧ್ಯಂತರ ರಿಲೀಫ್‌

Ravi Talawar
ಬಿಕ್ಲು ಶಿವ ಕೊಲೆ ಕೇಸ್‌: ಭೈರತಿಗೆ ಮಧ್ಯಂತರ ರಿಲೀಫ್‌
WhatsApp Group Join Now
Telegram Group Join Now

 

ಬೆಂಗಳೂರು, ಆಗಸ್ಟ್​ 13: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್​ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಶಾಸಕ ಭೈರತಿ ಬಸವರಾಜ್​ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾ. ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ. ಪ್ರಕರಣದ ತನಿಖೆಗೆ ಸಹಕರಿಸಲು ಭೈರತಿ ಬಸವರಾಜ್​ಗೆ ಸೂಚನೆ ನೀಡಿದೆ. ಪ್ರಕರಣ ರದ್ದು ಕೋರಿ ಶಾಸಕ ಭೈರತಿ ಬಸವರಾಜ್ ಅರ್ಜಿ ಸಲ್ಲಿಸಿದ್ದರು. ಭೈರತಿ ಬಸವರಾಜ್​ ಈವರೆಗೆ ವಿಚಾರಣೆಗೆ ಸಹಕರಿಸಿದ್ದಾರೆಂದು ಭೈರತಿ ಬಸವರಾಜ್ ಪರ ವಕೀಲರು ವಾದಿಸಿದರು.

ಕಳೆದ ತಿಂಗಳು ಜುಲೈ 15 ರಂದು ನಡೆದ ಬಿಕ್ಲು ಶಿವ ಕೊಲೆಗೆ ಭೈರತಿ ಸುರೇಶ್​ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತಿನಗರ ಪೊಲೀಸರು ಕೊಲೆ ಪ್ರಕರಣ ಸಂಬಂಧ ಜಗದೀಶ್, ವಿಮಲ್, ಕಿರಣ್, ಅನಿಲ್ ಸೇರಿದಂತೆ ಶಾಸಕ ಭೈರತಿ ಬಸವರಾಜ್​ ವಿರುದ್ಧವೂ ಎಫ್ಐಆರ್​ ದಾಖಲಿಸಿದ್ದಾರೆ.

WhatsApp Group Join Now
Telegram Group Join Now
Share This Article