ನಾಗಮೋಹನದಾಸ ವರದಿ ಜಾರಿಗೆ ವಿರೋಧಿಸಿ ಬಲಗೈ ಸಮುದಾಯದಿಂದ ಸರ್ಕಾರಕ್ಕೆ ಒತ್ತಾಯ

Ravi Talawar
ನಾಗಮೋಹನದಾಸ ವರದಿ ಜಾರಿಗೆ ವಿರೋಧಿಸಿ ಬಲಗೈ ಸಮುದಾಯದಿಂದ ಸರ್ಕಾರಕ್ಕೆ ಒತ್ತಾಯ
WhatsApp Group Join Now
Telegram Group Join Now
ಕಾಗವಾಡ:ಒಳ‌ಮೀಸಲಾತಿಗೆ ಸಂಭಂದಿಸಿದ ನಾಗಮೋಹನದಾಸ ವರದಿಯಿಂದ ಹೊಲೆಯ,ಚಲವಾದಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ದಲಿತ ಮುಖಂಡ ವೆಂಕಟೇಶ ಕಾಂಬ್ಳೆ ಆರೋಪಿಸಿದರು.
ಅವರು ಸೋಮವಾರ ದಿ.11 ರಂದು ಕಾಗವಾಡ ತಹಶಿಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ,ಒಳ ಮೀಸಲಾತಿ ಜಾರಿಗೆ ಸಂಭಂದ ನ್ಯಾಯಮೂರ್ತಿ ನಾಗಮೋಹನದಾಸ ಅಧ್ಯಕ್ಷತೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.ಆದರೆ ಆ ವರದಿಯಲ್ಲಿ ಬಲಗೈ ಸಮುದಾಯಕ್ಕೆ ಸೇರುವ ಪರಯೈ,ಪರವನ್ ಜಾತಿಯನ್ನು ಎಗಡೈ ಪಂಗಡಕ್ಕೆ ಸೇರಿಸಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದಲ್ಲದೇ ಜಾತಿಯೇ ಅಲ್ಲದ ಆದಿ ಕರ್ನಾಟಕ,ಆದಿ ಕರ್ನಾಟಕ, ಆದಿ ಆಂಧ್ರ ಸಮೂಹಕ್ಕೆ ಶೇ 1% ನಿಗದಿಪಡಿಸಿದ ಮೀಸಲಾತಿಯನ್ನು ರದ್ದುಪಡಿಸಿ ,ಸದರಿ ಮೀಸಲಾತಿಯನ್ನು ಸಂಭಂದಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದೆ ವೇಳೆ ಅನೇಕ ದಲಿತ ಸಂಘಟನೆಗಳಿಂದ ತಹಶಿಲ್ದಾರ ರವೀಂದ್ರ ಹಾದಿಮನಿ ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಜಯ ಕಾಂಬಳೆ,ಸಚೀನ ಕಾಂಬಳೆ,ಚೇತನ ಕಾಂಬಳೆ,ಬಾಬು ಕಾಂಬಳೆ,ವಿಶಾಲ್ ದೊಂಡಾರೆ,ರೋಹಿತ್ ಬಸನಾಯಕ,ಗಣೇಶ್ ಹಿಮೇಕರ್ ,ಪ್ರಶಾಂತ್ ಕಾಂಬಳೆ,ರಾಜಣ್ಣ ಕಾಂಬಳೆ,ಮಾಂತೇಶ ಕಾಂಬಳೆ,ರಾಹುಲ ಕಾಂಬಳೆ ಇನ್ನುಳಿದ ಎಲ್ಲಾ ಹೊಲೆಯ (ಛಲವಾದಿ) ಸಮಾಜದವರು ಇದ್ದರು.
WhatsApp Group Join Now
Telegram Group Join Now
Share This Article