ಎಸ್.ಸಿ.ಎಸ್.ಪಿ-ಟಿ.ಎಸ್.ಪಿ-೨೦೧೩ ರ ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯ

Ravi Talawar
ಎಸ್.ಸಿ.ಎಸ್.ಪಿ-ಟಿ.ಎಸ್.ಪಿ-೨೦೧೩ ರ ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯ
WhatsApp Group Join Now
Telegram Group Join Now

ವಿಜಯಪುರ – ಕರ್ನಾಟಕ ದಲಿತ ಸಂಘ? ಸಮಿತಿ ಮಹಾತ್ಮ ಪ್ರೊ ಬಿ ಕೃ?ಪ್ಪ ಸ್ಥಾಪಿತ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ನಗರದ ಡಾ.ಅಂಬೇಡ್ಕರ್ ವೃತ್ತದಿಂದ ವಿ?ಯ:- “ಪರಿಶಿ?ರ ಹಣ ಪರಿಶಿ?ರಿಗೆ ಮಾತ್ರ” ಎಸ್.ಸಿ.ಎಸ್.ಪಿ-ಟಿ.ಎಸ್.ಪಿ-೨೦೧೩ ರ ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯಿಸಿ ಹಾಗೂ ಬ್ಯಾಕ್ಲಾಕ್ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವ ಕುರಿತು ಬೃಹತ್ ಪ್ರತಿಭಟನಾ ಧರಣಿ ಮುಖಾಂತರ ಅಪರ ಜಿಲ್ಲಾ ಅಧಿಕಾರಿಗಳಾದ ಸೋಮನಿಂಗ ಗೆನ್ನೂರ ಅವರಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಅಶೋಕ ಚಲವಾದಿ ಮಾತನಾಡಿದ ಎಸ್.ಸಿ.ಎಸ್.ಪಿ.- ಟಿ.ಎಸ್.ಪಿ ಕಾಯ್ದೆ ೨೦೧೩ ಪರಿಶಿ? ಜಾತಿ ಮತ್ತು ಪರಿಶಿ? ಪಂಗಡಗಳ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ದವಾಗಿ ಹೊಂದಲು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಿದೆ ಈ ಕಾಯ್ದೆಯ ಕಲಂ ೭ಡಿ ಮತ್ತು ೭ಸಿ ರಲ್ಲಿ ಕಾಯ್ದೆಯಡಿ ನಿಗಧಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿ? ಜಾತಿ ಮತ್ತು ಪರಿಶಿ? ಪಂಗಡಗಳನ್ನು ಸರ್ಕಾರಗಳು ವಂಚಿಸುತ್ತಿವೆ. ಆದ್ದರಿಂದ ೭ಡಿ ಮತ್ತು ೭ಸಿ ಕಲಂಗಳನ್ನು ರದ್ದು ಪಡಿಸುವಂತೆ ಹಲವಾರು ದಲಿತರ ಹೋರಾಟಗಳ ಫಲದಿಂದ ೭ಡಿ ರದ್ದು ಮಾಡಿ ೭ಸಿಯನ್ನು ಯಥಾಪ್ರಕಾರ ಉಳಿಸಿಕೊಂಡು ಅನ್ಯ ಕಾರ್ಯಗಳಿಗೆ ಬಳಸುತ್ತಿದೆ. ಉದಾಹರಣೆಗೆ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಬಳಕೆಮಾಡಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಮತ್ತೆ ೨೦೨೪-೨೫, ೨೦೨೫-೨೬ ನೇ ಸಾಲಿನಲ್ಲಿ ಕೂಡ ಗ್ಯಾರಂಟಿಯೋಜನೆಗಳನ್ನು ಒಳಗೊಂಡಂತೆ ಅನ್ಯ ಯೋಜನೆಗಳಿಗೆ ಎಸ್.ಸಿ.ಎಸ್.ಪಿ-ಟಿ.ಎಸ್.ಪಿ. ಹಣ ಉಪಯೋಗಿಸುವಂತೆ ಅವಕಾಶ ನೀಡುವ ಮೂಲಕ ಪರಿಶಿ?ರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರಗಳೇ ನೇರವಾಗಿ ಅಸ್ಪೃಶ್ಯ ಆಚರಣೆ ಮಾಡುತ್ತಿದೆ ಮತ್ತೆ ಮೊಸಳೆ ಕಣ್ಣೀರನ್ನು ಸುರಿಸುತ್ತಿರುವುದನ್ನು ನಿಲ್ಲಿಸಿ ನಯ ವಂಚನೆ ಮಾಡದೆ ಪರಿಶಿ?ರ ಹಣವನ್ನು ಪರಿಶಿ?ರಿಗೆ ಮೀಸಲಿಡಬೇಕೆಂದು ಕ.ದ.ಸಂ.ಸ ಒತ್ತಾಯಿಸುತ್ತಾ ಅನ್ಯ ಕಾರ್ಯಗಳಿಗೆ ಬಳಸಿರುವ ಹಣವನ್ನು ವಾಪಸ್ ಪಡೆದು ಪರಿಶಿ? ಅಭಿವೃದ್ಧಿಗಾಗಿ ಉಪಯೋಗಿಸಬೇಕೆಂದು ಒತ್ತಾಯಿಸುತ್ತದೆ. ಅಲ್ಲದೆ ೩೮ ಇಲಾಖೆಗಳಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬುವ ಮೂಲಕ ದಲಿತರ ಏಳಿಗೆಗಾಗಿ ಕ.ದ.ಸಂ.ಸ ಒತ್ತಾಯಿಸುತ್ತದೆ. ಪರಿಶಿ?ರ ಹಣವನ್ನು ಬಳಕೆ ಮಾಡದೆ ನಿರ್ಲಕ್ಷತೆ ವಹಿಸಿ ಸರ್ಕಾರಕ್ಕೆ ವಾಪಸ್ ಕಳುಹಿಸುವ ಮತ್ತು ಅನ್ಯಕಾರ್ಯಗಳಿಗೆ ಬಳಸುವ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಮುಖ್ಯಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತದೆ.
ರಾಜ್ಯ ಸಂ. ಸಂಚಾಲಕರಾದ ರಮೇಶ ಆಸಂಗಿ ಮಾತನಾಡಿ ಕಳೆದ ೨೦೨೩ ರ ಚುನಾವಣೆಯಲ್ಲಿ ಹಿಂದಿನ ಬಿ.ಜೆ.ಪಿ. ಸರ್ಕಾರ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದರಿಂದ ಬಹುತೇಕ ಎಲ್ಲಾ ಒಳ ಮೀಸಲಾತಿ ಹೋರಾಟಗಾರರು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ ಕಾರಣ ಸರ್ಕಾರ ರಚನೆಯಾಗಿರುವುದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು. ಇನ್ನಾದರೂ ಎಚ್ಚಚೆತ್ತು ಕಲಂ ೭ಸಿ ರದ್ದು ಪಡಿಸಿ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಅನುದಾನ ನೀಡುತ್ತಿರುವುದನ್ನು ತತ್‌ಕ್ಷಣ ತಡೆಯುವಂತೆ ಒತ್ತಾಯಿಸಿ ಎಸ್.ಸಿ.ಎಸ್.ಪಿ- ಟಿ.ಎಸ್.ಪಿ. ೨೦೧೩ಕಾಯ್ದೆಯ ಕಲಂ ೭ಸಿ ಕೂಡಲೇ ರದ್ದುಗೊಳಿಸಬೇಕು ಹಾಗೂ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಉಪ ಯೋಗಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾಯ್ದೆ ಕಲಂ ೨೪ ರಡಿಯಲ್ಲಿ ಪ್ರಕರಣ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಬೇಕು. ಸರ್ಕಾರದ ೩೮ ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳ ಕುರಿತಂತೆ ಅಂಕಿ ಅಂಶ ನೀಡದಿರುವ ಇಲಾಖಾ ಮುಖ್ಯಸ್ಥರ ಮೇಲೆ ಪರಿಶಿ? ಜಾತಿ ಪರಿಶಿ? ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ ಸುಪ್ರೀಂ ಕೋರ್ಟ್ ನಿರ್ಧೆಶನದಂತೆ (ದತ್ತಾಂಶ) ಪಡೆದ ತಕ್ಷಣವೇ ೧೦೧ ಪರಿಶಿ? ಜಾತಿಗಳ ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಬೇಕು ಎಂದರು
ಈ ಸಂದರ್ಭದಲ್ಲಿ ವಿನಾಯಕ ಗುಣಸಾಗರ ಬೆಳಗಾಂವ ವಿಭಾಗಿ ಸಂಚಾಲಕರು ಸಂ ಸಂಚಾಲಕರು ಶರಣು ಶಿಂದೆ ಜಿಲ್ಲಾ ಸಂ ಸಂಚಾಲಕರು ಪ್ರಕಾಶ ಗುಡಿಮನಿ ಜಿಲ್ಲಾ ಸಂ ಸಂಚಾಲಕರು ಪರಶುರಾಮ ದಿಂಡವಾರ ಜಿಲ್ಲಾ ಸಂ ಸಂಚಾಲಕರು ಲಕ್ಕಪ್ಪ ಬಡಿಗೇರ ಜಿಲ್ಲಾಸಂ ಸಂಚಾಲಕರು ಅನಿಲ ಕೊಡತೆ ಜಿಲ್ಲಾ ಸಂ ಸಂಚಾಲಕರು ಸುರೇಶ ನಡಗಡ್ಡಿ ಜಿಲ್ಲಾ ವಿಒ ಸಂಚಾಲಕರು ರೇಣಕಾ ಮಾದರ ರಾಜ್ಯ ಸಂಚಾಲಕಿ ಯಶೋದಾ ಮೇಲಿನಕ್ಕೆ ಜಿಲ್ಲಾ ಸಂಚಾಲಕಿ ಸುಭದ್ರ ಮೇಲಿನಮನಿ ಜಿಲ್ಲಾ ಸಂ ಸಂಚಾಲಕಿ ಚಂದ್ರಕಲಾ ಮಸಳಿಕೇರಿ ?????? ಸಂ ಸಂಚಾಲಕಿ ಬಿ.ಎಸ. ತಳವಾರ ಜಿಲ್ಲಾ, ಕಾ.ನಿ ಸದಸ್ಯರು ರಾಜು ತೋರವಿ ನಗರ ಸಂಚಾಲಕರು, ಮಳಸಿದ್ದ ನಾಯ್ಕೋಡಿ ವಾಲ್ಕೀಕಿ ಸಮಾಜದ ಅಧ್ಯಕ್ಷರು, ರವಿ ಮ್ಯಾಗೇರಿ. ತಾ. ಸಂಚಾಲಕರು, ಶಿವು ಮೂರಮಣ ತಾ. ಸಂಚಾಲಕರು, ಕಾಶಿನಾಥ ಬನಸೋಡೆ ತಾ.ಸಂಚಾಲಕರು, ರಾಜಕುಮಾರ ಸಿಂದಗೇರಿ, ಮಂಜುನಾತ ಎಂಟಮಾನ, ಬಸವರಾಜ ಹೊಸಮನಿ, ಲಕ್ಷ್ಮಣ ಹಾರಿಹಾಳ, ರವೀಂದ್ರ ಚಲವಾದಿ, ಸಂಜೀವನ ಜಾನಕರ, ಸೂರ್ಯಕಾಂತ ಜಾನಕರ, ಶಿವಕುಮಾರ ಗುಣಮಿ, ಮುತ್ತು ಸುಲ್ಪಿ, ಉಮೇಶ ಚಲವಾದಿ, ಚಿದಾನಂದ ಪರನಾರ, ಲಕ್ಷ್ಮೀಕಾಂತ ಏಳಗೆ, ಮೋಹನ ಬಿರಗಲ್ ಉಪಸ್ತಿತರಿದ್ದರು.

WhatsApp Group Join Now
Telegram Group Join Now
Share This Article