ಹೊಂಬೆಳಕು ಇನ್ಫೋಟೆಕ್ ಉಚಿತ ಕಂಪ್ಯೂಟರ್ ತರಬೇತಿ ಪ್ರಾರಂಭ ಶ್ಲಾಘಾನಿಯ : ಶ್ರೀ ಚನ್ನಬಸವ ಕಲ್ಲೋಳಿಕರ

Ravi Talawar
ಹೊಂಬೆಳಕು ಇನ್ಫೋಟೆಕ್ ಉಚಿತ ಕಂಪ್ಯೂಟರ್ ತರಬೇತಿ ಪ್ರಾರಂಭ ಶ್ಲಾಘಾನಿಯ : ಶ್ರೀ ಚನ್ನಬಸವ ಕಲ್ಲೋಳಿಕರ
WhatsApp Group Join Now
Telegram Group Join Now
ಧಾರವಾಡ : ಹೊಂಬೆಳಕು ಪ್ರತಿಷ್ಠಾನ ಧಾರವಾಡ ಇದರ ಅಂಗ ಸಂಸ್ಥೆ  ಹೊಂಬೆಳಕು ಇನ್ಫೋಟೆಕ್ ನವ ಯುಗಾದಿಗೆ ಉಚಿತ ಕಂಪ್ಯೂಟರ್ ತರಬೇತಿ ಹೊಸ ಯೋಜನೆಯ ಜೊತೆಗೆ ಉದ್ಘಾಟನೆ ಆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀ ಚನ್ನಬಸವ ಕಲ್ಲೋಳಿಕರ ನಿವೃತ್ತ ವ್ಯವಸ್ಥಾಪಕರು, ಭಾರತೀಯ ಜೀವ ವಿಮಾ ನಿಗಮ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಕಂಪ್ಯೂಟರ್ ತರಬೇತಿ,  ಅದರ  ಜ್ಞಾನ ಅತ್ಯವಶ್ಯವಾಗಿದೆ ಹಾಗೂ  ಕಂಪ್ಯೂಟರ್ ಕಲಿಕೆಯು ಅತ್ಯಂತ ವೆಚ್ಚದಾಯಕವಾಗಿ ಕೂಡಿದೆ. ಈ ಸಂದರ್ಭದಲ್ಲಿ ಉಚಿತವಾದ ಕಂಪ್ಯೂಟರ್ ತರಬೇತಿಯನ್ನು ಡಾ. ವೀಣಾ ಬಿರಾದಾರ ಅವರು ಮಾಡುತ್ತಿರುವುದು ಶ್ಲಾಘನೀಯ ಅವರ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಬಸವರಾಜ ಕುಂದರಗಿ ನಿವೃತ್ತ ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ಇಲಾಖೆ ಅವರು ಮಾತನಾಡಿ ಹೊಸ ತಂತ್ರಜ್ಞಾನ ಯುಗ ಪ್ರಾರಂಭವಾಗಿದೆ, ರೋಬೋರ್ಟ್ ಜೊತೆಗೆ AI ಮುಂಚೂಣಿಯಲ್ಲಿದೆ. ಎಲ್ಲರೂ ಕಂಪ್ಯೂಟರ ಕಲಿಯುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಈ ಸಂದರ್ಭದಲ್ಲಿ ಬಡವರಿಗೆ ಮತ್ತು ಅನಾನುಕೂಲತೆ ಇದ್ದವರಿಗೆ ಉಚಿತ ಕಂಪ್ಯೂಟರ್ ತರಬೇತಿ ವ್ಯವಸ್ಥೆಯನ್ನು ಮಾಡಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೊಂಬೆಳಕು ಇನ್ಫೋಟೆಕ್ ಸಂಸ್ಥಾಪಕರಾದ ಡಾ. ವೀಣಾ ಬಿರಾದಾರ ಅವರು ಮಾತನಾಡಿ ಒಂದು ಕನಸು ಇತ್ತು , ಬದ ಮಕ್ಕಳಿಗೆ  ಹಾಗೂ ಮಹಿಳೆಯರಿಗೆ,  ಗ್ರಾಮೀಣ ಭಾಗದ ಮಹಿಳೆಯರಿಗೆ ಹಾಗೂ ವೀರ ಯೋಧರ ಪತ್ನಿಯರಿಗೆ ಕಂಪ್ಯೂಟರ್ ಜ್ಞಾನವನ್ನು ನೀಡಬೇಕು, women empowerment ಆಗ್ಬೇಕು, ಅವರೆಲ್ಲ ಸ್ವಾವಲಂಬಿಗಳಾಗಿ ಜೀವನದಲ್ಲಿ ಮುಂದೆ ಬರಬೇಕು ಅನ್ನುವ ಉದ್ದೇಶದಿಂದ, ಹೊಂಬೆಳಕು ಇನ್ಫೋಟೆಕ್ ಸಂಸ್ಥೆಯನ್ನು ಯುಗಾದಿಯ ದಿನ ಪ್ರಾರಂಭ ಮಾಡಿದ್ದೇವೆ. ಈ ಯುಗದಲ್ಲಿ ಹೊಸ ತಂತ್ರಜ್ಞಾನವನ್ನು ನಾವು ಕಲಿಯದೆ ಇದ್ರೆ,  ತಂತ್ರಜ್ನಾನದ ಹೊಸ  ವ್ಯವಸ್ಥೆಗೆ ನಾವು ಹೊಂದಿಕೊಳ್ಳದೆ ಇದ್ರೆ,  ನಾವು ಮುಂದೆ ಹೋಗಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಎಲ್ಲರಿಗೂ ಅನುಕೂಲ ಆಗಲಿ ಅನ್ನುವ ದೃಷ್ಟಿಯಿಂದ  ಉಚಿತ ಕಂಪ್ಯೂಟರ್ ತರಬೇತಿಯನ್ನು ಪ್ರಾರಂಭ ಮಾಡಿದ್ದೇವೆ. 2025 ರ ಏಪ್ರಿಲ್ ತಿಂಗಳಿನಲ್ಲಿ  ತರಗತಿಗಳು ಪ್ರಾರಂಭವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಡಾ. ಎಸ್ ಬಿ ಗಾಡಿ ಹಾಗೂ ಹನುಮಂತಪ್ಪ ಚಿಕ್ಕನಾಳ ಹೈಕೋರ್ಟ್ ನ್ಯಾಯವಾದಿಗಳು, ನಾಗರಾಜ ಶಿರೂರ , ಡಾ ಬಾಪು ಮೊರಂಕರ ,  ಅರ್ಚನಾ ಅಳಗವಾಡಿ, ಹಾಗೂ 50ಕ್ಕೂ ಹೆಚ್ಚು ಮಹಿಳೆಯರು, ಕಂಪ್ಯೂಟರ ಕಲಿಕೆಯ ಅಭಿಲಾಶಿಗಳು, ಕಾಲೇಜಿನ ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article