ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಮರಗಳನ್ನು ನೆಟ್ಟು ಹೊಸ ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ. ರಾಜ್ಯದ ಇಂದೋರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು, ನಂತರ ರಾಜ್ಯದ ಮುಖ್ಯಮಂತ್ರಿ ಮೋಹನ್ ಯಾದವ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ತಂಡದಿಂದ ಪ್ರಮಾಣಪತ್ರವನ್ನು ಪಡೆದರು.
ಈ ಅಭಿಯಾನದ ಅಡಿಯಲ್ಲಿ, ದೇಶದಾದ್ಯಂತ ಸರಿಸುಮಾರು 140 ಕೋಟಿ ಮರಗಳನ್ನು ನೆಡಲಾಗುವುದು, ಮಧ್ಯಪ್ರದೇಶದಲ್ಲಿ 5.5 ಕೋಟಿ ಮರಗಳನ್ನು ನೆಡಲಾಗುವುದು. ಸ್ವಚ್ಛ ಸರ್ವೇಕ್ಷಣೆಯ ಪ್ರಕಾರ ಹಲವಾರು ವರ್ಷಗಳಿಂದ ದೇಶದ ಸ್ವಚ್ಛ ನಗರ ಎಂದು ಗುರುತಿಸಿಕೊಂಡಿರುವ ಇಂದೋರ್‌ನಲ್ಲಿ ಈ ಅಭಿಯಾನದಲ್ಲಿ 51 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂಬತ್ತು ವಲಯಗಳು ಮತ್ತು 100 ಉಪ ವಲಯಗಳಾಗಿ ವಿಂಗಡಿಸಲಾದ ಬಿಎಸ್‌ಎಫ್ ಅಕಾಡೆಮಿಯ ರೇವತಿ ರೇಂಜ್‌ನಲ್ಲಿ ನೆಡುತೋಪು ಅಭಿಯಾನವನ್ನು ನಡೆಸಲಾಯಿತು. 2,000 ಬಿಎಸ್‌ಎಫ್ ಜವಾನರಲ್ಲದೆ, 100 ಕ್ಕೂ ಹೆಚ್ಚು ಎನ್‌ಆರ್‌ಐಗಳು, 50 ಶಾಲೆಗಳ ಎನ್‌ಸಿಸಿ ಕೆಡೆಟ್‌ಗಳು, ಹೆಚ್ಚಿನ ಸಂಖ್ಯೆಯ ನಾಗರಿಕರು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರು ಈ ನೆಡುತೋಪು ಅಭಿಯಾನದಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.