ಬಳ್ಳಾರಿ:20. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ದೇಶದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ 108 ನೇ ಜಯಂತಿಯನ್ನು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಂದಿರಾ ಗಾಂಧಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮಗಳು ಹಾಕುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಮುಖ ಮುಖಂಡರು ತಮ್ಮ ಭಾಷಣಗಳಲ್ಲಿ ಮಾತನಾಡಿ, ಇಂದಿರಾ ಗಾಂಧಿ ರವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು, ಅವರ ಸಾಧನೆ ಕೇವಲ ನಮ್ಮ ದೇಶಕ್ಕೆ ಮೀಸಲಿರದೆ 1971ರಲ್ಲಿ ನೆರೆಯ ದೇಶ ರಾಷ್ಟ್ರವಾದ ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ವಿಮೋಚನೆ ಮಾಡಿದ ಅವರ ಧೈರ್ಯ ಸಾಹಸಗಳನ್ನು ನಾವು ಎಂದಿಗೂ ಮರೆಯುವ ಹಾಗಿಲ್ಲ ಎಂದು ತಿಳಿಸಿದರು.
ಈ ವೇಳೆ ಬಳ್ಳಾರಿ ಜಿಲ್ಲಾ ಮಹಾನಗರ ಪಾಲಿಕೆ ನೂತನ ಮಹಾಪೌರರಾಗಿ ಆಯ್ಕೆಯಾಗಿರುವ ಪಿ.ಗಾದೆಪ್ಪ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಸನ್ಮಾನಿಸಿ, ಅಭಿನಂದನೆಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕಲ್ಲುಕಂಭ ಪಂಪಪಾತಿ, ಎಲ್.ಮಾರೆಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಯೂನ್ ಖಾನ್, ಕಾರ್ಯಾಧ್ಯಕ್ಷ ಭೊಯಪಾಟಿ ವಿಷ್ಣುವರ್ಧನ್,
ಡಿಸಿಸಿ ಉಪಾಧ್ಯಕ್ಷ ಕೆ.ಶ್ರೀನಿವಾಸುಲು, ಮುಂಚೂಣಿ ಘಟಕಗಳ ಅಧ್ಯಕ್ಷ ಎರಕುಲ ಸ್ವಾಮಿ, ಕನೇಕಲ್ ಮಾಬುಸಾಬ್, ಶೇಕ್ ಅಫಾಕ್ ಹುಸ್ಸೇನ್, ಪಿ. ಮಂಜುನಾಥ್, ಮುಖಂಡರುಗಳಾದ ಗುಜ್ಜಲ ಗಾದಿ ಲಿಂಗಪ್ಪ, ಸಂಗಣಕಲ್ ವಿಜಯ್ ಕುಮಾರ್, ಸಿದ್ದೇಶ್, ಮುಸ, ಬಿ.ಎ.ಮಲ್ಲೇಶ್ವರಿ, ಅತ್ತವುಲ್ಲ, ಗೌಸಿಯ, ಗಂಗಾಧರ್, ಗೀತಾ, ಕೌಶಿಕ್, ಕೊಳಗಲ್ ಅಂಜಿ, ವಂಶಿ ಸಾಯಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.


