ಪ್ಯಾರಿಸ್ (ಫ್ರಾನ್ಸ್): ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಪೊಸಿಶನ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಪದಕ ಜಯಿಸಿದೆ. ಅವರು 451.4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಪ್ಯಾರಿಸ್ ಒಲಿಂಪಿಕ್ಸ್ನ ಆರನೇ ದಿನವಾದ ಇಂದು ಭಾರತದ ಏಕೈಕ ಪದಕದ ಭರವಸೆ ಅವರ ಮೇಲಿತ್ತು. ಅದರಂತೆ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಪ್ನೀಲ್ ತನ್ನ ಮೊದಲ ಶಾಟ್ನಲ್ಲಿ 9.6 ಅಂಕಗಳನ್ನು ಕಲೆಹಾಕಿಉತ್ತಮ ಆರಂಭವನ್ನು ಪಡೆದರು. ನಂತರ ಮೊಣಕಾಲಿನ ಭಂಗಿಯ ಹಂತದ ಮೊದಲ ಸರಣಿಯ ಸುತ್ತುಗಳಲ್ಲಿ 10 ಕ್ಕೂ ಹೆಚ್ಚು ಹೊಡೆತಗಳನ್ನು ಹೊಡೆದರು. ಎರಡನೇ ಸರಣಿಯನ್ನು 10.1 ಪಾಯಿಂಟರ್ನೊಂದಿಗೆ ಪ್ರಾರಂಭಿಸಿದರು, ಆದರೆ ಇದೇ ವೇಗವನ್ನು ಕಾಯ್ದುಕೊಳ್ಳಲು ವಿಫಲರಾದ ಅವರು ಮುಂದಿನ ಹಂತದಲ್ಲಿ 9.9-ಪಾಯಿಂಟ್ ಅಂಕ ಗಳಿಸಿದರು. ಆದಾಗ್ಯೂ, ಮಂಡಿಯೂರಿ ಹಂತದ ಮೂರನೇ ಮತ್ತು ಅಂತಿಮ ಸರಣಿಯಲ್ಲಿ ಅವರು ಕಮ್ ಬ್ಯಾಕ್ ಮಾಡಿದರು. ಈ ಸುತ್ತಿನ ಬಳಿಕ 153.3 ಅಂಕಗಳೊಂದಿಗೆ ಆರನೇ ಸ್ಥಾನಕ್ಕೇರಿ ಅರ್ಹತಾ ಹಂತದಲ್ಲೂ ಸ್ಥಾನ ಪಡೆದರು.
ಬಳಿಕ ಅಂತಿಮ ಹಂತದ ಮೊದಲ ಪ್ರಯತ್ನದಲ್ಲಿ 9.9-ಪಾಯಿಂಟ ಸಾಧಿಸಿದರು, ನಂತರ 10.7-ಪಾಯಿಂಟ್ ಶಾಟ್ನೊಂದಿಗೆ ಅದ್ಭುತ ಪುನರಾಗಮನ ಮಾಡಿದರು. ಅವರು ಮೊದಲ ಸುತ್ತಿನಿಂದ 51.1 ಅಂಕ ಮತ್ತು ನಂತರ ಎರಡನೇ ಸುತ್ತಿನಿಂದ 50.4 ಅಂಕ ಕಲೆ ಹಾಕಿದರು. ಒಟ್ಟಾರೇ 411.6 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು ಎಲಿಮಿನೇಷನ್ ಸರಣಿಯನ್ನು ಪ್ರವೇಶಿಸಿದರು.
ಮೂರನೇ ಮತ್ತು ಅಂತಿಮ ಎಲಿಮಿನೇಷನ್ ಸುತ್ತಿನಲ್ಲಿ, ಅವರು ಮೊದಲ ಹಂತದಲ್ಲಿ 10.5 ಅಂಕ ಕಲೆಹಾಕಿ ಮೂರನೇ ಸ್ಥಾನ ಭದ್ರಪಡಿಸಿಕೊಂಡರು. ಕೊನೆಯಲ್ಲಿ 451.4 ಅಂಕಗಳೊಂದಿಗೆ ಕಂಚಿನ ಪದಕವನ್ನು ವಶಪಡಿಸಿಕೊಂಡರು.