ಹೈದರಾಬಾದ್: ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾರತ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಮಣಿಸಿವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ವಿಶೇಷ ಸಾಧನೆ ಮಾಡಿದ ಭಾರತೀಯ ಸಿಂಹಿಣಿಗಳಿಗೆ ಪ್ರಶಂಸೆಯ ಮಹಾಪೂರ ಹರಿದು ಬರುತ್ತಿದೆ.
ಅಧ್ಯಕ್ಷೆ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ತಂಡಕ್ಕೆ ಅಭಿನಂದನೆ ಕೋರಿದ್ದಾರೆ. ಮಹಿಳಾ ತಂಡದ ಅಪ್ರತಿಮ ಪ್ರತಿಭೆ ಮತ್ತು ವಿಶೇಷ ಪ್ರದರ್ಶನವು ಸೂಕ್ತವಾದ ಫಲಿತಾಂಶವನ್ನು ನೀಡಿದೆ ಎಂದು ಪ್ರಧಾನಿ ಮೋದಿ ಗುಣಗಾನ ಮಾಡಿದ್ದಾರೆ.


