ಬೆಂಗಳೂರು, (ಜನವರಿ 24): 600 ಶಿಬಿರಾರ್ಥಿಗಳು ಹಾಗೂ ವೈವಿಧ್ಯಮಯ ಕಲಾಕ್ಷೇತ್ರಗಳ ದಿಗ್ಗಜರು ಭಾವ್ 2025: ದಿ ಎಕ್ಸ್ಪ್ರೆಷನ್ಸ್ ಸಮ್ಮಿಟ್ ನಲ್ಲಿ, ಜನವರಿ 23ರಿಂದ 26ರವರೆಗೆ ಸೇರಲಿದ್ದಾರೆ. ಈ ಸಮಾವೇಶವು ಭಾರತದ ಅತೀ ದೊಡ್ಡ ಕಲೆಯ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂಭ್ರಮವಾಗಿದ್ದು, ಮೂರು ದಿವಸಗಳ ಈ ಸಮಾವೇಶದಲ್ಲಿ ಕಲಾವಿದರು ಹಾಗೂ ಘನ ಸಾಂಸ್ಕೃತಿಕ ಧ್ವನಿಗಳಾಗಿರುವ ಮಂಜಮ್ಮ ಜೋಗತಿ, ಸುನಂದಾ ದೇವಿ, ಬನ್ನಂಜೆ ಸುವರ್ಣರವರು ಭಾಗವಹಿಸಲಿದ್ದಾರೆ. ತಮ್ಮ ಜೀವನವನ್ನೇ ರಾಜ್ಯದ ಭವ್ಯ ಸಾಂಸ್ಕೃತಿಕ ಹಾಗೂ ಜನಪದ ಪರಂಪರೆಗೆ ಮುಡಿಪಾಗಿಟ್ಟಿರುವ ಇವರು, ಅವರ ಪಯಣಗಳ ಹಾದಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತ ಕಲಾಕಾರರು ಮತ್ತು ಸಮುದಾಯಗಳು ಭಾರತದ ಕಲೆ ಮತ್ತು ಸಂಸ್ಕೃತಿಗೆ ನೀಡಿರುವ ಅನುಪಮವಾದ ಕಾಣಿಕೆಯ ಬಗ್ಗೆ ಪದ್ಮಶ್ರೀ ಮಂಜಮ್ಮ ಜೋಗತಿಯವರೊಡನೆ ಚರ್ಚೆ ಮತ್ತು ಪ್ರದರ್ಶನ, 70 ದಿಗ್ಗಜರ ಕಲಾಪ್ರದರ್ಶನ, ಉಪನ್ಯಾಸ, ಪ್ರಾಯೋಗಿಕ ಪ್ರದರ್ಶನ – ಪದ್ಮ ವಿಭೂಷಣ ಸೋನಲ್ ಮನ್ ಸಿಂಗ್, ಕುಚುಪುಡಿಯ ದಂತಕಥೆಯಾದ ಸುನಂದಾ ದೇವಿ, ಪದ್ಮಶ್ರೀ ಉಮಾ ಮಹೇಶ್ವರಿ, ಯಕ್ಷಗಾನದ ದಂತಕಥೆ ಬನ್ನಂಜೆ ಸುವರ್ಣ, ಹೀಗೆ ಭಾವ್ – ದಿ ಎಕ್ಸ್ಪ್ರೆಷನ್ ಸಮ್ಮಿಟ್ 2025 ಒಂದು ಅನುಪಮವಾದ, ಮನಸೆಳೆವ ಅನುಭವವಾಗಲಿದ್ದು, ದಿ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಇದು ನಡೆಯಲಿದೆ.
ಸಂಸ್ಕೃತಿಗಳ ಈ ಬೃಹತ್ ಸಂಭ್ರಮಕ್ಕೆ ಮಾರ್ಗದರ್ಶಕರಾಗಿರುವ ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರಾಗಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರು, “ಒಂದೇ ಒಂದು ಸಂಸ್ಕೃತಿ, ಧರ್ಮ ಅಥವಾ ನಾಗರಿಕತೆಯು ಮಾಯವಾದರೂ ಸಹ, ಜಗತ್ತು ಅದರಿಂದ ಬಡವಾಗುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಸಹ ಜಗತ್ತಿನ ಪರಂಪರೆಯ ಭಾಗವಾಗಿದೆ ಮತ್ತು ಅವೆಲ್ಲವನ್ನೂ ನಾವು ಉಳಿಸಿ ಸಂರಕ್ಷಿಸಲೇಬೇಕು” ಎನ್ನುತ್ತಾರೆ.