ಹಸಿರು ಕ್ರಾಂತಿ ವರದಿಜಮಖಂಡಿ: ಎಲ್ಲದರಲ್ಲೂ ಸ್ವಾವಲಂಬನೆ ಹೊಂದಿರುವ ಯಾವುದೇ ರಾಷ್ಟç ಜಗತ್ತಿನಲ್ಲಿಲ್ಲ. ಎಲ್ಲ ರಾಷ್ಟçಗಳಿಗೂ ಆಮದು-ರಫ್ತು ಅನಿವಾರ್ಯ ಪ್ರಕ್ರಿಯೆ. ಆ ನಿಟ್ಟಿನಲ್ಲಿ ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿ ಭಾರತ ಹೊರಹೊಮ್ಮಿದೆ ಎಂದು ಅರ್ಥಶಾಸ್ತç ಉಪನ್ಯಾಸಕ ಎಸ್.ಆರ್. ಗಣಿ ಹೇಳಿದರು.
ಇಲ್ಲಿನ ವಿಜಯಪುರ ರಸ್ತೆ ಪಕ್ಕದ ರೋಟರಿ ಭವನದಲ್ಲಿ ಶುಕ್ರವಾರ ಸಂಜೆ ಜಮಖಂಡಿಯ ರೋಟರಿ ಸಂಸ್ಥೆ ಆಯೋಜಿಸಿದ್ದ ವಾರದ ಸಭೆಯ ಮುಖ್ಯ ಅತಿಥಿಯಾಗಿ ‘ಪ್ರಚಲಿತ ಆರ್ಥಿಕತೆಯ ವಿದ್ಯಮಾನಗಳು’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್, ಡಿಜಿಟಲ್ ಇಂಡಿಯಾದAತಹ ಯೋಜನೆಗಳಿಂದ ಭಾರತದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಬದಲಾವಣೆ ಮತ್ತು ಬೆಳವಣಿಗೆಯ ವೇಗ ಶೇ ೧೦೩ ರಷ್ಟು ಹೆಚ್ಚಾಗಿದೆ. ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟçಗಳ ಪಟ್ಟಿಗೆ ಸೇರುವ ಗುರಿ ಹೊಂದಿದೆ ಎಂದರು.
ಭಾರತ ದೇಶದಲ್ಲಿ ೫.೨೭ ಲಕ್ಷ ಹಳ್ಳಿಗಳಿವೆ. ಹಳ್ಳಿಗಳಿಗೆ ವಿದ್ಯುಚ್ಛಕ್ತಿ, ನೀರಾವರಿ, ರಸ್ತೆ, ಸಾರಿಗೆ ವ್ಯವಸ್ಥೆ, ರಸಗೊಬ್ಬರ, ಬೀಜೋಪಚಾರ ಇತ್ಯಾದಿ ಮೂಲ ಸೌಕರ್ಯಗಳನ್ನು ಹೆಚ್ಚಿನ ಆದ್ಯತೆ ಮೇಲೆ ಒದಗಿಸಬೇಕಾದ ಅಗತ್ಯವಿದೆ. ನಿರುದ್ಯೋಗ, ಅತಿಯಾದ ವಿದೇಶಿ ಅವಲಂಬನೆ ಅಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಜಮಖಂಡಿ ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಕೋವಳ್ಳಿ ಸ್ವಾಗತಿಸಿದರು. ಮಲ್ಲಪ್ಪ ಬುಜರುಕ ರೋಟರಿ ಸಂಸ್ಥೆಯ ‘ದಿ ಫೋರ್ ವೇ ಟೆಸ್ಟ್’ ಓದಿದರು. ಪ್ರವೀಣ ಝಾಡ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಎಂ.ಎಚ್. ಕಡ್ಲಿಮಟ್ಟಿ ವಂದಿಸಿದರು. ಆರಂಭದಲ್ಲಿ ಜಾಗತಿಕ ಶಾಂತಿಗಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು.


