ಶೇಖ್​ ಹಸೀನಾಗೆ ತಾತ್ಕಾಲಿಕ ಆಶ್ರಯ ನೀಡಲು ಭಾರತ ಸರ್ಕಾರ ಅವಕಾಶ?!

Ravi Talawar
ಶೇಖ್​ ಹಸೀನಾಗೆ ತಾತ್ಕಾಲಿಕ ಆಶ್ರಯ ನೀಡಲು ಭಾರತ ಸರ್ಕಾರ ಅವಕಾಶ?!
WhatsApp Group Join Now
Telegram Group Join Now

ನವದೆಹಲಿ: ಬಾಂಗ್ಲಾದೇಶದಲ್ಲಿ ತಮ್ಮ ಸರ್ಕಾರ ಪತನದ ಬಳಿಕ ದೇಶ ತೊರೆದಿರುವ ಶೇಖ್​ ಹಸೀನಾಗೆ ತಾತ್ಕಾಲಿಕ ಆಶ್ರಯ ನೀಡಲು ಭಾರತ ಸರ್ಕಾರ ಅವಕಾಶ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯುಕೆಯಲ್ಲಿ ಆಶ್ರಯ ಪಡೆಯುವವರೆಗೆ ಅವರು ಭಾರತದಲ್ಲಿ ಇರಲಿದ್ದು, ಎಲ್ಲಾ ರೀತಿಯ ಬೆಂಬಲ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಸೀನಾ ವಾಸ್ತವ್ಯ ತಾತ್ಕಾಲಿಕವಾಗಿರಲಿದೆ. ಬ್ರಿಟನ್​ಗೆ ಸ್ಥಳಾಂತರವಾಗುವವರೆಗೆ ಅವರು ನವದೆಹಲಿಯಲ್ಲಿ ಇರಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬಾಂಗ್ಲಾದೇಶದಲ್ಲಿ ತಮ್ಮ ಸರ್ಕಾರದ ವಿರುದ್ಧ ವ್ಯಕ್ತವಾದ ಭಾರೀ ಪ್ರತಿಭಟನಾ ಹಿಂಸಾಚಾರದ ಹಿನ್ನಲೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ಅವರು ಲಂಡನ್​ನಲ್ಲಿ ನೆಲೆಯೂರುವ ಚಿಂತನೆ ನಡೆಸಿದ್ದಾರೆ. ಆದರೆ, ಅವರಿಗೆ ರಾಜಕೀಯ ಆಶ್ರಯ ನೀಡುವ ಬಗ್ಗೆ ಯುನೈಟೆಡ್​ ಕಿಂಗಡಮ್​ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ ಎನ್ನಲಾಗಿದೆ. ಅವರ ಸಹೋದರಿ ಯುಕೆ ಪೌರತ್ವ ಹೊಂದಿದ ಹಿನ್ನಲೆ ಅವರ ಜೊತೆಗೆ ನೆಲೆಸಲು ಬ್ರಿಟನ್​ ಆಶ್ರಯ ಕೋರುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಬಾಂಗ್ಲಾದೇಶದ ಪಿತಾಮಹ ಶೇಖ್​ ಮಜಿಬುರ್​ ರೆಹಮಾನ್​ ಮತ್ತು ಶೇಖ್ ಫಜಿಲತುನ್ ನೆಚಾ ಮುಜಿಬ್ ಅವರ ಕಿರಿಯ ಮಗಳು ರೆಹನಾ ಶೇಖ್​ ಹಸೀನಾ ಕಿರಿಯ ಸಹೋದರಿಯಾಗಿದ್ದಾರೆ. ಇವರ ಮಗಳು ಟುಲಿಪ್​ ಸಿದ್ಧಿಕ್​ ಬ್ರಿಟನ್​ ಸಂಸತ್​ನಲ್ಲಿ ಲೇಬರ್​ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article