ನೇಗಿನಹಾಳ,11: ಛತ್ರಪತಿ ಶಿವಾಜಿ ಮಹಾರಾಜರು ಭಾರತ ದೇಶದ ಹೆಮ್ಮೆಯ ಸುಪುತ್ರ, ಅವರ ಶೌರ್ಯ ಪರಾಕ್ರಮದಿಂದ ಇಂದು ನಮ್ಮ ನಾಗರೀಕತೆ,
ಸಂಸ್ಕೃತಿ ಉಳಿದಿದೆ. ಮರಾಠ ಸಾಮ್ರಾಜ್ಯ ಸ್ಥಾಪಿಸುವ ಮೂಲಕ ದೇಶದಲ್ಲಿ ನಡೆದಿದ್ದ ಮತಾಂತರ ಪದ್ದತಿಯನ್ನು ತಡೆದು ಹಿಂದೂ ಧರ್ಮವನ್ನು ರಕ್ಷಿಸಿದ ಕೀರ್ತಿ
ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಧುರೀಣ ಪಿಕೆಪಿಎಸ್ ಅಧ್ಯಕ್ಷ ನಾನಾಸಾಹೇಬ ಪಾಟೀಲ ಹೇಳಿದರು.

brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
ಗ್ರಾಮದ ಶಿವಾಜಿ ಚೌಕನಲ್ಲಿ ಮರಾಠಾ ಸಮಾಜದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ದೇಶದಲ್ಲಿ ಹಿಂದೂ ಧರ್ಮ ಉಳಿಯಲು ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಅವರ ದೇಶಭಕ್ತಿ, ತ್ಯಾಗ ಮನೋಭಾವಗಳನ್ನು
ನಾವೆಲ್ಲರೂ ಮೈಗೂಡಿಸಿಕೊಳ್ಳೊಣ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುಹಾಸ ಕುಲ್ಲೋಳ್ಳಿ, ಕೃಷ್ಣಾಜಿ ಕುಲಕರ್ಣಿ, ವೆಂಕಪ್ಪ ಗಾಡದ, ಭೀಮಪ್ಪ ರುಮೋಜಿ, ನಿಂಗಪ್ಪ ಬೆಳಗಾವಿ,
ಪ್ರಲ್ಹಾದ ಘಂಟಿ, ಸುಭಾಷ ರುಮೋಜಿ, ಚಿದಾನಂದ ಬೆಳಗಾವಿ, ವಿಠ್ಠಲ ಗಾಡದ, ವಿನಾಯಕ ಕರಿಮುದಕ್ಕನವರ, ನಿಂಗಪ್ಪ ಬೆಳಗಾವಿ, ಅರುಣ ಗಾಡದ ಹಾಗೂ ಮರಾಠ ಸಮಾಜದ ಹಿರಿಯರು, ನೂರಾರು ಯುವಕರು ಉಪಸ್ಥಿತರಿದ್ದರು.
ನೇಗಿನಹಾಳ ಗ್ರಾಮದ ಮರಾಠಾ ಸಮುದಾಯದಿಂದ ಅದ್ದೂರಿಯಾಗಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಜರುಗಿತು.
ಗ್ರಾಮದ ಮರಾಠಾ ಸಮುದಾಯದ ಮುಖಂಡರಿಂದ ಪಿಕೆಪಿಎಸ್ ಅದ್ಯಕ್ಷ ನಾನಾಸಾಹೇಬ ಪಾಟೀಲ ಅವರಿಗೆ ಸತ್ಕರಿಸಿ ಅಭಿನಂದಿಸಲಾಯಿತು.