ಭಾರತೀಯ ಸಂಸ್ಕೃತಿ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು: ಡಾ ಮೀನಾ ಚಂದಾವರ್ಕರ್

Ravi Talawar
ಭಾರತೀಯ ಸಂಸ್ಕೃತಿ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು: ಡಾ ಮೀನಾ ಚಂದಾವರ್ಕರ್
WhatsApp Group Join Now
Telegram Group Join Now
ವಿಜಯಪುರ: ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪುನರುತ್ಥಾನದ ಉದ್ದೇಶದಿಂದ ಭಾರತೀಯ ಶಿಕ್ಷಣ ಮಂಡಲ  ಕಾರ್ಯನಿರ್ವಹಿಸುತ್ತಿದ್ದು, ಇದು ಸಮಗ್ರ ಭಾರತೀಯ ದೃಷ್ಟಿಕೋನದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಕ್ರಮ, ವ್ಯವಸ್ಥೆ ಮತ್ತು ವಿಧಾನಗಳನ್ನು ವಿಕಸಿಸುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಹಕಾರ್ಯದರ್ಶಿ ಡಾ.ಮೀನಾ ಚಂದಾವರ್ಕರ್ ಹೇಳಿದರು.
       ಅವರು ನಗರದ ದರಬಾರ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಭಾರತೀಯ ಶಿಕ್ಷಣ ಮಂಡಲ ವತಿಯಿಂದ ಜರುಗಿದ ಶಿಕ್ಷಣ ಮಂಡಲ ಪರಿಚಯ ಹಾಗೂ ಜಿಲ್ಲಾ ಘಟಕದ ಕಾರ್ಯಕಾರಿಣಿ ಘೋಷಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
          ಸಂಶೋಧನೆ, ತರಬೇತಿ, ಮೇಲ್ವಿಚಾರಣೆ, ಪ್ರಕಟಣೆ, ಸಂಘಟನೆ ಎಂಬ ಐದು ಹಂತಗಳೊಂದಿಗೆ ಮಂಡಲವು ದೇಶದ ಎಲ್ಲಾ ಭಾಗಗಳಲ್ಲಿ ಹಲವಾರು ಶೈಕ್ಷಣಿಕ, ಬೌದ್ಧಿಕ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.
ಭಾರತೀಯ ಸಂಸ್ಕೃತಿಯು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು. ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಮಹಿಳೆಯರು ಮತ್ತು ಪೋಷಕರು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
           ದರಬಾರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಿನಾಯಕ ಗ್ರಾಮಪುರೋಹಿತ, ಪ್ರಾಂತ ಸಹಕಾರ್ಯದರ್ಶಿ ಸಿದ್ದು ಮದರಖಂಡಿ ಉಪಸ್ಥಿತರಿದ್ದರು.
         ಭಾರತೀಯ ಶಿಕ್ಷಣ ಮಂಡಲದ ವಿಜಯಪುರ ಜಿಲ್ಲಾ ನೂತನ ಅಧ್ಯಕ್ಷರಾಗಿ ಬಿ ಎಸ್ ಬಾಪಗೊಂಡ, ಉಪಾಧ್ಯಕ್ಷ ರಾಗಿ ಪ್ರೋ.ರಾಜಕುಮಾರ ಮಾಲಿಪಾಟೀಲ,ಶೀಲಾ ಬಿರಾದಾರ, ಬಸವರಾಜ ಕೌಲಗಿ, ಜಿ ಎಚ್ ಮಣೂರ, ಕಾರ್ಯದರ್ಶಿ ಮಲ್ಲಿಕಾರ್ಜುನ ಗುಡ್ಡದ, ಸಹ ಕಾರ್ಯದರ್ಶಿ ಗಳಾಗಿ ಸಂತೋಷ ಬಂಡೆ, ರಾಜಶ್ರೀ ಜುಗತಿ, ಕೋಶ ಪ್ರಮುಖ ಸಂತೋಷ ಕಳ್ಳಿಗುಡ್ಡ, ಅನುಸಂಧಾನ ಪ್ರಮುಖ ಡಾ.ಅಶೋಕ ಸಜ್ಜನ, ಸಹ ಪ್ರಮುಖರಾಗಿ ಡಾ ವಿನೀತ್ ಪಾಟೀಲ,ಡಾ ಜಾಯ್ ಹೊಸಕೇರಿ, ಶೈಕ್ಷೀಕ ಪ್ರಕೋಷ್ಠ ಪ್ರಮುಖ ಡಾ ಮಲ್ಲಿಕಾರ್ಜುನ ಮೇತ್ರಿ, ಸಹ ಪ್ರಮುಖರಾಗಿ ಡಾ ವಿಷ್ಣು ಶಿಂಧೆ,ಡಾ ದಯಾನಂದ ಕುಂಬಾರ,ಮಹಿಳಾ ಪ್ರಕಲ್ಪ ಪ್ರಮುಖ ಡಾ ಎಸ್ ಟಿ ಬೋಳರಡ್ಡಿ ಸೇರಿದಂತೆ ಅನೇಕರನ್ನು ವಿವಿಧ ವಿಭಾಗಗಳಿಗೆ ಆಯ್ಕೆ ಮಾಡಲಾಯಿತು.   ಇದೇ ಸಂದರ್ಭದಲ್ಲಿ ವಿಜನ್ ಫಾರ್ ವಿಕಸಿತ ಭಾರತದ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು.
WhatsApp Group Join Now
Telegram Group Join Now
Share This Article