ಪಾಕ್‌ನಲ್ಲಿ ಬಂಧನವಾಗಿದ್ದ ಭಾರತೀಯ ಬಿಎಸ್‌ಎಫ್‌ ಯೋಧ ವಾಪಸ್‌

Ravi Talawar
ಪಾಕ್‌ನಲ್ಲಿ ಬಂಧನವಾಗಿದ್ದ ಭಾರತೀಯ ಬಿಎಸ್‌ಎಫ್‌ ಯೋಧ ವಾಪಸ್‌
WhatsApp Group Join Now
Telegram Group Join Now

ನವದೆಹಲಿ, ಮೇ 14: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಯೋಧ ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಭೂಪ್ರದೇಶಕ್ಕೆ ಬಿಎಸ್‌ಎಫ್ ಕಾನ್‌ಸ್ಟೆಬಲ್ ಆಕಸ್ಮಿಕವಾಗಿ ದಾಟಿಹೋಗಿದ್ದು ರಾಜತಾಂತ್ರಿಕ ಅಂತ್ಯವಾಗಿದೆ, ಪಾಕಿಸ್ತಾನ ರೇಂಜರ್‌ಗಳು ಭಾರತೀಯ ಪಡೆಗಳೊಂದಿಗಿನ ಎಲ್ಲಾ ಧ್ವಜ ಸಭೆಗಳನ್ನು ಸ್ಥಗಿತಗೊಳಿಸಿದ್ದು, ಏಪ್ರಿಲ್ 24 ರಿಂದ ಬಂಧನಕ್ಕೊಳಗಾದ ಕಾನ್‌ಸ್ಟೆಬಲ್ ಪೂರ್ಣಮ್ ಕುಮಾರ್ ಶಾ ಅವರು ಮರಳಿದ್ದಾರೆ.

ಸಿಂಗ್ ಸೇನಾ ಸಮವಸ್ತ್ರ ಧರಿಸಿದ್ದರು ಹಾಗೂ ಸೇವಾ ಬಂದೂಕು ಹೊಂದಿದ್ದರು. ರೈತರೊಂದಿಗೆ ಇದ್ದ ಇವರು, ವಿಶ್ರಾಂತಿಗಾಗಿ ನೆರಳು ಅರಸಿ ಹೊರಟಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ ಸಿಂಗ್ ಅವರನ್ನು ಪಾಕಿಸ್ತಾನಿ ಸೇನೆ ವಶಕ್ಕೆ ಪಡೆದಿದೆ ಎಂದು ಮೂಲಗಳು ಹೇಳಿವೆ.

WhatsApp Group Join Now
Telegram Group Join Now
Share This Article