ಮೂಡಲಗಿ: ಶತಶತಮಾನಗಳಿಂದ ದಾಸ್ಯರ ಸಂಕೋಲೆಯನ್ನು ಕಿತ್ತೊಗೆದು ಬ್ರಿಟಿಷರಿಂದ ಸ್ವಾತಂತ್ರ ಪಡದು 79 ವರ್ಷಗಳು ಕಳೆದಿವೆ. 2047ರ ಸ್ವಾತಂತ್ರೋತ್ಸವ ಅದು ಶತಮಾನದ ಸ್ವಾತಂತ್ರೋತ್ಸವ. ಸ್ವಾತಂತ್ರ ಶತಮಾನೋತ್ಸವದ ವೇಳೆಗೆ ಆತ್ಮನಿರ್ಭರ ಭಾರತ ಆಗುವುದರ ಜೊತೆಗೆ ಭಾರತದ ಆರ್ಥಿಕತೆ ಜಗತ್ತಿನ ನಂ. 1 ಹಂತ ಬರುವ ಗುರಿಯನ್ನು ಇಡೇರಿಸುವುದು ನಮ್ಮಲ್ಲರ ಸಂಕಲ್ಪವಾಗಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ, ಶ್ರೀ ಮಹಾಲಕ್ಷ್ಮೀ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಶ್ರೀ ಮಹಾಲಕ್ಷ್ಮೀ ಪಿಕೆಪಿಎಸ್ ಇವುಗಳ ಆಡಳಿತ ಕಚೇರಿ ಮೇಲೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತ ಹಳ್ಳಿಗಳ ದೇಶ, ರೈತ ಈ ದೇಶದ ಬೆನ್ನೆಲುಬು ಎಂದವರು ಗಾಂಧಿ ಆದರೆ ರೈತರ ಬದುಕನ್ನು ಚೈತನ್ಯ ಪೂರ್ಣಗೊಳಿಸುವ ನಿಟ್ಟಿನಲ್ಲಿ ಈವರೆಗಿನ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿಲ್ಲ. ಜಗತ್ತಿನ ಅನೇಕ ದೇಶಗಳು ಎದುರಿಸುತ್ತಿರುವ ಆಹಾರ ಕೊರತೆಯ ಬಹುದೊಡ್ಡ ಭಾಗವನ್ನು ನೀಗಿಸಿ, ಹಸಿವು ಮುಕ್ತ ಮಾಡುವ ಶಕ್ತಿ ನಮ್ಮ ಕೃಷಿ ಕ್ಷೇತ್ರಕ್ಕಿದೆ. ಕೃಷಿ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿ ಯವರು ಅಧಿಕಾರಕ್ಕೆ ಬಂದ ನಂತರ ಕೃಷಿ ಕ್ಷೇತ್ರವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಖಾತ್ರಿಪಡಿಸುವುದು, ಕೃಷಿ ಆರ್ಥಿಕತೆಯನ್ನು ಬಲಪಡಿಸುವುದು, ಹಾನಿಕಾರಕ ರಾಸಾಯನಿಕಗಳಿಂದ ಮಣ್ಣಿನ ಆರೋಗ್ಯವನ್ನು ರಕ್ಷಿಸುವುದು, ಕೃಷಿ ತಂತ್ರಗಳನ್ನು ಆಧುನೀಕರಿಸುವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೃಷಿ ಕ್ಷೇತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ. ಗ್ರಾಮೀಣ ರೈತರ ಬದುಕು ಹಸನಾದರೆ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ರೈತನ ಬೆವರಿಗೆ ಬಂಗಾರದ ಬೆಲೆ ದಕ್ಕಿದರೆ ಮಾತ್ರ ಸುವರ್ಣ ಭಾರತವಾಗುತ್ತದೆ. ಆದ್ದರಿಂದ ‘ರೈತ ಭಾರತದ ನಿರ್ಮಾಣ’ ನಮ್ಮ ವಿಶೇಷ ಸಂಕಲ್ಪವಾಗಬೇಕಿದೆ ಎಂದು ಕರೆ ನೀಡಿದರು.
ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ಸಹಕಾರಿಯ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ಶಿವಪ್ಪ ಗೋಸಬಾಳ, ಅಡಿವೆಪ್ಪ ಕುರಬೇಟ, ಪ್ರಭು ಕಡಾಡಿ, ಹಣಮಂತ ಸಂಗಟಿ, ಕಾಡೇಶ ಗೋರೋಶಿ, ಗುರುನಾಥ ಮದಭಾಂವಿ, ತುಕಾರಾಮ ಪಾಲ್ಕಿ, ದಸ್ತಗೀರ ಕಮತನೂರ, ಗೋಪಾಲ ಜಾಲರ, ಉದ್ದಪ್ಪ ಪೂಜೇರಿ, ಅಶೋಕ ತಳವಾರ, ಬಸವರಾಜ ದಾಸನಾಳ, ಈರಣ್ಣ ಮುನ್ನೋಳಿಮಠ, ಪ್ರಧಾನ ವ್ಯವಸ್ಥಾಪಕ ಪ್ರಭಾರ ಪರಪ್ಪ ಗಿರೆಣ್ಣವರ, ಶಾಖಾ ವ್ಯವಸ್ಥಾಪಕರಾದ ಹಣಮಂತ ಕಲಕುಟ್ರಿ, ಶಂಕರ ಕೌಜಲಗಿ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜನಕೊಪ್ಪ, ಶಾಖಾ ವ್ಯವಸ್ಥಾಪಕರಾದ ಪ್ರಶಾಂತ ಪಟ್ಟಣಶೆಟ್ಟಿ, ವಿಠ್ಠಲ ಜಟ್ಟೆನ್ನವರ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.