ಭಾರತ ಏಕೀಕರಣ ಶಿಲ್ಪಿ ಸರದಾರ ಪಟೇಲ: ಡಾ. ಸುನಂದಾ ಶಿರೂರ

Ravi Talawar
ಭಾರತ ಏಕೀಕರಣ ಶಿಲ್ಪಿ ಸರದಾರ ಪಟೇಲ: ಡಾ. ಸುನಂದಾ ಶಿರೂರ
WhatsApp Group Join Now
Telegram Group Join Now

ಹಸಿರು ಕ್ರಾಂತಿ ವರದಿ, ಜಮಖಂಡಿ; ವಿವಿಧ ಭಾಷೆ, ಆಚರಣೆ, ಸಂಸ್ಕೃತಿಯಲ್ಲಿ ವಿಭಜೆನೆ ಯಾಗಿದ್ದ ಭಾರತ ದೇಶವನ್ನು ಏಕೀಕರಿಸುವಲ್ಲಿ ಸರದಾರ ವಲ್ಲಭಾಯಿ ಪಟೇಲರ ಪರಿಶ್ರಮ, ತ್ಯಾಗ, ಮನೊಬಲ ದೃಢ ಸಂಕಲ್ಪ ದಿಂದಾಗಿ ಅಖಂಡ ಭಾರತ ದೇಶವನ್ನು ಕಾಣುತ್ತಿದ್ದೇವೆ. ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನಂದಾ ಶಿರೂರ ಹೇಳಿದರು. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸ್ನಾತಕೊತ್ತರ ಕೇಂದ್ರದಲ್ಲಿ ಶುಕ್ರವಾರ ಎನ್‌ಎಸ್‌ಎಸ್‌, ರಾಜ್ಯಶಾಸ್ತ್ರವಿಭಾಗ, ಐಕ್ಯೂಎಸಿ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಸರ್ದಾರ ಪಟೇಲರ ರಾಷ್ಟ್ರಭಕ್ತಿಯ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರನ್ನು ಭಾರತದ ಏಕೀಕರಣ ಶಿಲ್ಪಿ ಎಂದು ಗೌರವಿಸಲಾಗಿದೆ.ಅವರ ಅಚಲ ಮನೋಬಲ ಮತ್ತು ದೃಢ ನಿಷ್ಠೆಗಾಗಿ “ಉಕ್ಕಿನ ಮನುಷ್ಯ” ಎಂದು ಕರೆಯಲಾಗುತ್ತದೆ.ಎಂದು ತಿಳಿಸಿದರು. 2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ನರ್ಮದಾ ನದಿಯ ತೀರದಲ್ಲಿ ವಿಶ್ವದ ಅತ್ಯಂತ ಎತ್ತರದ 182 ಮೀಟರ ಸ್ಟ್ಯಾಚ್ಯೂಆಫ್‌ಯೂನಿಟಿ ನಿರ್ಮಿಸಿ ಪಟೇಲರಿಗೆ ಅತ್ಯುನ್ನತ ಗೌರವ ಸಲ್ಲಿಸಿದ್ದಾರೆ ಎಂದು ಹೇಳಿದರು. ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಡಾ. ವಿ. ಆರ. ದಳವಾಯಿ, ಡಾ. ಎಮ. ಎಮ. ಮಂಟೂರ,ಆರ್. ಬಿ. ಶಿತೋಳೆ, ಡಾ. ಎ. ವಾಯ. ಕಾಂಬಳೆ, ಡಾ. ಎಮ. ಎಮ. ಅಂಬಲಿ, ತೀರ್ಥೇಶ್‌ಎಸ. ಎನ., ಎಸ. ಎಮ. ಗುಡಿ, ಶ್ರೀಮತಿ ಮಹಾದೇವಿ ಬಂಡಿ, ಸಂತೊಷ ಯಡಹಳ್ಳಿ ಇದ್ದರು ಎ. ಎಸ್. ಪೂಜಾರಿ ಪ್ರಾರ್ಥಿಸಿದರು. ಆರ್. ಎಸ್. ಜಾಧವ ನಿರೂಪಿಸಿದರು.

WhatsApp Group Join Now
Telegram Group Join Now
Share This Article