ಭಾರತದೊಂದಿಗಿನ ಮಹತ್ವದ ವ್ಯಾಪಾರ ಅವಕಾಶಗಳನ್ನು ಹೇಳಲು ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಭಾರತಕ್ಕೆ ಭೇಟಿ ನೀಡಿದ್ದರೆ. ಜುಲೈನಲ್ಲಿ ಸಹಿ ಹಾಕಲಾದ ಪ್ರಮುಖ ಒಪ್ಪಂದದ ನಂತರ ಭಾರತದೊಂದಿಗೆ ಮಹತ್ವದ ವ್ಯಾಪಾರ ಅವಕಾಶಗಳನ್ನು ಒತ್ತಿ ಹೇಳಲು ಮುಂಬೈಗೆ ಆಗಮಿಸಿದ್ದಾರೆ. ಅವರ ಭೇಟಿಯು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಬ್ರಿಟಿಷ್ ವ್ಯವಹಾರಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅಧಿಕೃತವಾಗಿ ತಮ್ಮ ಮೊದಲ ಭೇಟಿಯಾಗಿ ಅಕ್ಟೋಬರ್ 8 ಮತ್ತು 9ರಂದು ಎರಡು ದಿನಗಳ ಪ್ರವಾಸದಂತೆ ಭಾರತಕ್ಕೆ ಆಗಮಿಸಿದ್ದಾರೆ. ಜುಲೈ 2025ರಲ್ಲಿ ಜರುಗಿದ ಭಾರತ-ಕೆ ಸಮಗ್ರ ವ್ಯಾಪಾರ ಒಪ್ಪಂದದ ನಂತರ ಈ ಎರಡು ದಿನಗಳ ಪ್ರವಾಸವು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಬ್ರಿಟಿಷ್ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಭಾರತಕ್ಕೆ ಬಂದ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಭಾರತವನ್ನು “ಅಪ್ರತಿಮ ಅವಕಾಶಗಳ ನಾಡು” ಎಂದು ಹೊಗಳಿದ್ದಾರೆ. ಸ್ಟಾರ್ಮರ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಂಬೈನಲ್ಲಿ ನಡೆಸುವ ಮಾತುಕತೆಯ ಮೂಲಕ ಎರಡೂ ದೇಶಗಳ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಬಲಗೊಳಿಸುವ ಯೋಜನೆಯಲ್ಲಿದ್ದಾರೆ. ಜೊತೆಗೆ ಭಾರತ ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದಿದ್ದಾರೆ.