ಬಾಗಲಕೋಟೆ: ಭಾರತದ ಸರ್ವಾಂಗಿಣ ಅಭಿವೃದ್ಧಿಯೊಂದಿಗೆ ವಿಶ್ವದಲ್ಲಿಯೆ ಭಾರತ ಮೂರನೇ ಆರ್ಥಿಕ ರಾಷ್ಟ್ರವನ್ನಾಗಿಸುವ ಸಂಕಲ್ಪ ಬಿಜೆಪಿ ಹೊಂದಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಸೋಮವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರ
ಭಾರತ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವದಲ್ಲೆ ಗುರುತಿಸಿಕೊಂಡಿದೆ, ಭಾರತವು ಮಹಿಳಾ ನೇತೃತವದ ಅಭಿವೃದ್ಧಿಯಲ್ಲಿ ವಿಶ್ವಕ್ಕೆ
ದಿಕ್ಕನ್ನು ತೋರಿಸುವ ನಿಟ್ಟಿನಲ್ಲಿ ನಾರಿ ಶಕ್ತಿಗೆ ಹೊಸ ಚೈತನ್ಯ ತುಂಬಿದ್ದು ಬಿಜೆಪಿ, ನೂತನ ಭಾರತಕ್ಕಾ ನಮ್ಮ ಪ್ರಣಾಳಿಕೆ ಸಿದ್ದವಾಗಿದ್ದು ದೇಶದಲ್ಲಿ ಏಕರೂಪ ನಾಗರಿಕ ಸಂಹಿತ ಜಾರಿ, ಒಂದು ದೇಶ ಒಂದು ಚುನಾವಣೆ, ಮುಂದಿನ ೫ ವರ್ಷ ಬಡವರಿಗೆ ಉಚಿತ ಅಕ್ಕಿ ವಿತರಣೆ, ದೇಶದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವಿಸ್ತರಣೆ.ವಿಶ್ವದಲ್ಲಿ ಭಾರತ ಮೂರನೇ ಆರ್ಥಿಕ ರಾಷ್ಟ್ರ ಸಂಕಲ್ಪ, ೭೦ ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ ಅಡಿ ಉಚಿತ ಸೇವೆ. ಸೂರ್ಯ ಘರ ಮೂಲಕ ಉಚಿತ ವಿದ್ಯತ್, ಮುದ್ರಾ ಸಾಲ ೨೦ ಲಕ್ಷಕ್ಕೆ ಹೆಚ್ಚಳ,ದೇಶದ ಮೂಲೆ ಮೂಲೆಗೆ ವಂದೇ ಭಾರತ ರೈಲು ವಿಸ್ತರಣೆ,ತೃತೀಯ
ಲಿಂಗಿಗಳಿಗೆ ಆಯುಷ್ಮಾನ್ ಯೋಜನೆಯ ಸೌಲಭ್ಯ, ಪಿಎಂ ಆವಾಸ್ ಯೋಜನೆಯಡಿ ೩ ಲಕ್ಷ ಮನೆ ನಿರ್ಮಾಣ ದಂತ ಅನೇಕ ಪ್ರಗತಿಪರ
ಯೋಜನೆಗಳನ್ನು ಬಿಜೆಪಿ ತನ್ನ ಸಂಕಲ್ಪ ಪತ್ರದಲ್ಲಿ ರೂಪಿಸಿಕೊಂಡಿದ್ದು ಇದರಿಂದ ಭಾರತದ ಎಲ್ಲ ಸಮುದಾಯಗಳ ಹಾಗೂ ದೇಶದ ಸರ್ವಾಂಗಿಣ ಅಭಿವೃದ್ಧಿ ಸಾಧ್ಯವಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಮೋದಿಯ ಕೈ ಬಲಪಡಿಸಿ ಎಂದರು.
ನಗರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ನಗರದ ೧೦ ಮತ್ತು ೧೪ ನೇ ವಾರ್ಡಗಳಲ್ಲಿ ಸಂಚರಿಸಿ ಮಾರವಾಡಿ ಗಲ್ಲಿ, ಕಳ್ಳಿಗುಡ್ಡ ಓಣಿ,ಸ್ಟೇಶನ್ ರಸ್ತೆ, ವಲ್ಲಬಾಯಿ ಚೌಕ ನಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೇರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು.
ಪಾದಯಾತ್ರೆಯಲ್ಲಿ ನಗರಸಭೆ ಸದಸ್ಯ ಹೀರಾಲಾಲ ಗೌಡ, ಶ್ಮೀತಾ ಪವಾರ, ಜ್ಯೋತಿ ಭಜಂತ್ರಿ,ಕುಮಾರ ಯಳ್ಳಿಗುತ್ತಿ, ರಾಜು ಸಿಂತ್ರೆ, ವಿಶ್ವನಾಥ ಕೋಲ್ಹಾರ, ಗುರುರಾಜ ಸಂಬಣ್ಣವರ್,ಜಯಂತ ಕುರಂದವಾಡ್, ಘನಶ್ಯಾಮ ಧರಕ, ಶಿವಲೀಲಾ ಸಂಬಣ್ಣವರ, ಜಗದಿಶ ಚೆನ್ನಗಾವಿ, ದೀಪಕ ಕಲಾದಗಿ, ಬಸವರಾಜ ಪರ್ವತಿಮಠ,ಸಂಗಣ್ಣ ಕಾರಪುಡಿ, ಸಂಗಮೇಶ ಹಿತ್ತಲಮನಿ,ಬಸವರಾಜ ನಾಶಿ,ಮಂಜುನಾಥ ಕಳ್ಳಿಗುಡ್ಡ,ಬಸವರಾಜ ಸಾಸನೂರ, ಶಿವಪ್ಪ ಜಮಖಂಡಿ, ಬೀಮು ಬಿಳಗಿ ಸೇರಿದಂತೆ ನಗರಸಭೇ ಸದ್ಯರು, ಪದಾಧೀಕಾರಿಗಳು, ಕಾರ್ಯಕರ್ತರು ಭಾಗವಹಸಿದ್ದರು.