ನ್ಯೂಯಾರ್ಕ್, ಮೇ 14: ಆಪರೇಷನ್ ಸಿಂಧೂರ್ನಲ್ಲಿ ಭಾರತಕ್ಕೆ ನಿರ್ಣಾಯಕ ಗೆಲುವು ಸಿಕ್ಕಿದೆ ಎಂದು ನ್ಯೂಯಾರ್ಕ್ನ ಮಾಡರ್ನ್ ವಾರ್ ಇನ್ಸ್ಟಿಟ್ಯೂಟ್ನಲ್ಲಿ ಅರ್ಬನ್ ವಾರ್ಫೇರ್ ಸ್ಟಡೀಸ್ ಮುಖ್ಯಸ್ಥ, ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್ ಹೇಳಿದ್ದಾರೆ. ಸ್ಪೆನ್ಸರ್ ಅವರ ಲೇಖನದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಲಾಗಿದೆ ಮತ್ತು ಹಿಂದಿನ ದಾಳಿಗಳಿಗಿಂತ ಭಿನ್ನವಾಗಿ, ಈ ಬಾರಿ ಭಾರತ ಕಾಯಲಿಲ್ಲ. ಅದು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಮನವಿ ಮಾಡಲಿಲ್ಲ ಅಥವಾ ರಾಜತಾಂತ್ರಿಕ ನಿರ್ಧಾರ ತೆಗೆದುಕೊಳ್ಳಲಿಲ್ಲ ಬದಲಾಗಿ ಯುದ್ಧ ವಿಮಾನಗಳನ್ನು ಹಾರಿಸಿತು ಎಂದು ಹೇಳಿದ್ದಾರೆ. ವಿಶ್ಲೇಷನ್ ಟಾಮ್ ಕೂಪರ್ ಹೇಳಿಕೆ ಬೆನ್ನಲ್ಲೇ ಈ ಹೇಳಿಕೆ ಕೂಡ ಬಂದಿದೆ.
ಏತನ್ಮಧ್ಯೆ, ಅಮೆರಿಕದ ಮಾಜಿ ಅಧಿಕಾರಿಯೊಬ್ಬರು ಭಾರತೀಯ ಸೇನೆ ಮತ್ತು ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಬಹಳವಾಗಿ ಶ್ಲಾಘಿಸಿದ್ದಾರೆ. ಪಾಕಿಸ್ತಾನ ಹೊಂದಿರುವ ಚೀನಾದ ಶಸ್ತ್ರಾಸ್ತ್ರಗಳಿಗಿಂತ ಭಾರತೀಯ ಶಸ್ತ್ರಾಸ್ತ್ರಗಳು ಉತ್ತಮವಾಗಿವೆ ಎಂದು ಅಮೆರಿಕದ ನಿವೃತ್ತ ಸೇನಾಧಿಕಾರಿ ಮತ್ತು ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್ ಹೇಳಿದ್ದಾರೆ.
ಭಾರತದ ಧೈರ್ಯ ಮತ್ತು ಶೌರ್ಯವನ್ನು ಜಗತ್ತು ನಿರಂತರವಾಗಿ ಹೊಗಳುತ್ತಿದೆ. ಪಾಕಿಸ್ತಾನಕ್ಕೆ ಕನ್ನಡಿ ತೋರಿಸುತ್ತಾ, ಅಮೆರಿಕದ ರಕ್ಷಣಾ ತಜ್ಞರು ಕಳೆದ ಕೆಲವು ದಿನಗಳಲ್ಲಿ ಭಾರತದ ಸ್ಥಳೀಯ ಶಸ್ತ್ರಾಸ್ತ್ರಗಳು ಪಾಕಿಸ್ತಾನ ಮತ್ತು ಚೀನಾದ ಶಸ್ತ್ರಾಸ್ತ್ರಗಳಿಗಿಂತ ಉತ್ತಮ ಪ್ರದರ್ಶನ ನೀಡಿವೆ ಎಂದು ಹೇಳಿದ್ದಾರೆ. ಚೀನಾದ ವಾಯು ರಕ್ಷಣಾ ವ್ಯವಸ್ಥೆಯು ಭಾರತದ ಮುಂದೆ ಕುಬ್ಜವಾಗಿದೆ.