ದೇಶ ಭಕ್ತರ ತ್ಯಾಗದ ಪ್ರತಿಫಲವೇ ಸ್ವತಂತ್ರ ಭಾರತ: ಆರಾದ್ರಿಮಠ ಶಾಸ್ತ್ರಿಗಳು

Ravi Talawar
ದೇಶ ಭಕ್ತರ ತ್ಯಾಗದ ಪ್ರತಿಫಲವೇ ಸ್ವತಂತ್ರ ಭಾರತ: ಆರಾದ್ರಿಮಠ ಶಾಸ್ತ್ರಿಗಳು
WhatsApp Group Join Now
Telegram Group Join Now
ಬೈಲಹೊಂಗಲ- ಭಾರತ ದೇಶ ಸ್ವತಂತ್ರವಾದದ್ದು ಹಲವು ಕ್ರಾಂತಿಗಳಿಂದ ಹಾಗೂ ದೇಶಭಕ್ತರ ಪ್ರಾಣತ್ಯಾಗ ದಿಂದಾಗಿ ಎಂದು ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕರು, ಶ್ರೀ ಮಾತಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ವೇ. ಮೂ. ಮಹಾಂತಯ್ಯ ಆರಾದ್ರಿಮಠ ಶಾಸ್ತ್ರೀಗಳು ಸ್ಮರಿಸಿದರು.
 79 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತಪಟ್ಟಣದ ಬಸವ ನಗರದಲ್ಲಿನ ಶ್ರೀ ಮಾತಾ ಗುರುಕುಲದಲ್ಲಿ ಸಾಧಕರ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿ ವರ್ತಮಾದಲ್ಲಿ
ಯುವ ಪೀಳಿಗೆ ಪಾಶ್ಚಿಮಾತ್ಯ ಜೀವನ ಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹಾತೋರೆಯುತ್ತಿರುವುದು ದುರಂತದ ಸಂಗತಿ.ಮುಂದೆ ಸುಭದ್ರವಾಗಿ ದೇಶವನ್ನು ಮುನ್ನಡೆಸಬೇಕಿರುವ ಮಕ್ಕಳಲ್ಲಿ ದೇಶಾಭಿಮಾನದ ಕಿಚ್ಚನ್ನು ಹಚ್ಚಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಜೀವ ಬಲಿದಾನ ಮಾಡಿ ಸ್ವತಂತ್ರ ಭಾರತಕ್ಕೆ ಬುನಾದಿ ಹಾಕಿದ ಹುತಾತ್ಮರ ಹಾಗೂ ದೇಶ ಕಾಯುವ ಯೋಧರ, ಅನ್ನ ಹಾಕುವ ರೈತರ ಮಹತ್ವವನ್ನು ತಿಳಿಸಿದಾಗ ಮಾತ್ರ ಸ್ವಾತಂತ್ರ್ಯ ದಿನ ಆಚರಣೆಗೆ ನಿಜವಾದ ಅರ್ಥ ಬರುವುದೆಂದು ಸೂಚಿಸಿದರು.
     ಸಾನಿಧ್ಯ ವಹಿಸಿದ್ದ ವೇ.ಮೂ.ಸದಾಶಿವಯ್ಯ ಪತ್ರಿಮಠ ಶಾಸ್ತ್ರೀಗಳು ಮಾತನಾಡಿ ಶ್ರೀ ಮಾತಾ ಗುರುಕುಲದಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರಕ್ಕೆ ಆದ್ಯತೆ ನೀಡಿರುವುದು ವಿಶೇವಾಗಿದೆ. ನಮ್ಮ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುವುದರ ಮೂಲಕ ಶ್ರೀ ಮಾತಾ ಗುರುಕುಲ ಈ ಭಾಗದಲ್ಲಿ ಮನೆ ಮಾತಾಗಿದೆ. ಮುಂಬರುವ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
     ಅಥಿತಿ ಯಾಗಿ ಆಗಮಿಸಿದ್ದ ನಿವೃತ್ತ ಕಾರ್ಗಿಲ್ ಯೋಧ ಗಂಗಪ್ಪ ಗುಗ್ಗರಿ ಮಾತನಾಡಿ ಯೋಧರು ತಮ್ಮ ಕುಟುಂಬದಿಂದ ದೂರವಾಗಿ ಹಗಲಿರುಳು ದೇಶದ ಗಡಿ ಕಾಯ್ದು ನಮ್ಮನ್ನು ರಕ್ಷಿಸುತ್ತಿದ್ದಾರೆ.
ಯುದ್ಧದಂತಹ ಸಂದರ್ಭದಲ್ಲಿ ಅದೆಷ್ಟೋ ಯೋಧರು ತಮ್ಮ ಪ್ರಾಣವನ್ನು ದೇಶಕ್ಕೆ ಅರ್ಪಿಸಿ ದೇಶಭಕ್ತಿ ಮೆರೆದಿರುವ ಹುತಾತ್ಮರನ್ನು ಸ್ಮರಿಸೋಣ ಎಂದರು.
    ಇದೇ ವೇಳೆ “ವಿಶ್ವ ಜ್ಯೋತಿಷ್ಯ ರಾಜಋಷಿ” ಪ್ರಶಸ್ತಿ ಪುರಸ್ಕೃತರಾದ ವೇ.ಮೂ.ಸದಾಶಿವಯ್ಯ ಪತ್ರಿಮಠ ಶಾಸ್ತ್ರಿಗಳು,ಇತ್ತೀಚಿಗೆ ಸೇನೆಯಿಂದ ನಿವೃತ್ತಿ ಹೊಂದಿದ ಶಂಕರ ಮಲಕನ್ನವರ, “ಮಾಧ್ಯಮ ಸೇವಾ ರತ್ನ” ಪ್ರಶಸ್ತಿ ಪುರಸ್ಕೃತ  ಪತ್ರಕರ್ತ ಈಶ್ವರ ಶಿಲ್ಲೇದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಶ್ರೀ ಮಾತಾ ಗುರುಕುಲದ ಮುಖ್ಯ್ಯೊಪಾಧ್ಯಾಯರಾದ ಶ್ರೀಮತಿ ಗಿರಿಜಾ ಆರಾದ್ರಿಮಠ,ಮಾಜಿ ಸೈನಿಕರಾದ ಸೋಮಯ್ಯ ಕೊಪ್ಪದ, ಉಳವಪ್ಪ ದೇಗಾವಿ,ಈರಪ್ಪ ಗಾಳಿ, ನಾಗಪ್ಪ ಗುಂಡ್ಲುರ ವೇದಿಕೆ ಮೇಲಿದ್ದರು.
ಮುದ್ದು ಮಕ್ಕಳು ಮಹಾತ್ಮರ ವೇಷಭೂಷಣ ಧರಿಸಿ ಗಮನ ಸೆಳೆದರು.ಶ್ರೀ ಮಾತಾ ಗುರುಕುಲದ ಗುರಮಾತೆಯರು,ಪಾಲಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article