ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಹಂದಿ ಜ್ವರ

Ravi Talawar
ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಹಂದಿ ಜ್ವರ
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್ 10: ವಾತಾವರಣ ವೈಪರೀತ್ಯ ಉಂಟಾದಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಪೈಕಿ ಹಂದಿ ಜ್ವರ ಪ್ರಕರಣಗಳು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಬೆಂಗಳೂರಿನಲ್ಲಿ ಕೇವಲ H1N1 ಅಲ್ಲದೆ, H3N2 ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಹಂದಿಜ್ವರ ಲಕ್ಷಣಗಳು, ತಡೆಗಟ್ಟುವ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅನೇಕರು ಈ ರೋಗಲಕ್ಷಣಗಳು ಕಾಣಿಸಿಕೊಂಡಾಗ ಮನೆಮದ್ದುಗಳ ಮೊರೆ ಹೋಗುತ್ತಾರೆ ಆದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ಸಮಸ್ಯೆಯು ಗಂಭೀರವಾಗಬಹುದು, ಕೆಲವರಲ್ಲಿ ರೋಗಲಕ್ಷಣಗಳು ಕಾಲಕ್ರಮೇಣ ಕಡಿಮೆಯಾಗಬಹುದು. ಉಸಿರಾಟದ ತೊಂದರೆ, ಕಡಿಮೆ ಆಮ್ಲಜನಕದ ಮಟ್ಟ ಮತ್ತು ಉಬ್ಬಸ (wheezing) ಗಂಭೀರವಾದ ಸಮಸ್ಯೆಯ ಲಕ್ಷಣಗಳಾಗಿವೆ. ಒಣ ಕೆಮ್ಮು ಕಾಣಿಸಿಕೊಳ್ಳುವುದರಿಂದ ರೋಗಿಯಲ್ಲಿ ಹೆಚ್ಚು ಆಯಾಸ ಉಂಟು ಮಾಡುತ್ತದೆ ಹಾಗಾಗಿ ಅನೇಕರು ಆಹಾರ ಸೇವಿಸುವುದನ್ನು ನಿಲ್ಲಿಸುತ್ತಾರೆ, ವಯಸ್ಕರಲ್ಲಿ ಈ ರೀತಿಯ ತೀವ್ರ ರೋಗಲಕ್ಷಣಗಳು ಕಂಡುಬರುತ್ತವೆ. 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಜ್ವರ ಕಾಣಿಸಿಕೊಳ್ಳಬಹುದು ಜೊತೆಗೆ ದೀರ್ಘಕಾಲದ ಆಯಾಸ ಕಂಡುಬರುವುದರಿಂದ ಆಹಾರ ತಿನ್ನುವುದನ್ನು ನಿಲ್ಲಿಸುತ್ತಾರೆ. ಒಂದು ವೇಳೆ ಅವರಿಗೆ ಕೆಮ್ಮು ಮತ್ತು ಶೀತದಂತಹ ಲಕ್ಷಣಗಳು ಇಲ್ಲದಿದ್ದರೂ ಸಹ ಹಂದಿ ಜ್ವರ (swine flu) ಲಕ್ಷಣವನ್ನು ಹೋಲುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆ ಮದ್ದು ಬಳಸುವುದಕ್ಕಿಂತ ಆಸ್ಪತ್ರೆಗೆ ಭೇಟಿ ನೀಡುವುದು ಉತ್ತಮ.

WhatsApp Group Join Now
Telegram Group Join Now
Share This Article