ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಇ-ಪಿಒಎಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಸಾಧನವು ಪಡಿತರ ಸಂಗ್ರಹವನ್ನು ಶೇ.6.6ರಷ್ಟು ಹೆಚ್ಚಳವಾಗುವಂತೆ ಮಾಡಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ. ಹತ್ತಿರದ ಯಾವುದೇ ಅಂಗಡಿಗಳಲ್ಲಿ ಪಡಿತರ ಸಂಗ್ರಹಿಸುವ ಅವಕಾಶ ನೀಡಲಾಗಿದ್ದು, ಜನರು ಎಲೆಕ್ಟ್ರಾನಿಕ್ ಪಾಯಿಂಟ್-ಆಫ್-ಸೇಲ್ (ಇ-ಪೋಸ್) ಸಾಧನದ ಮೂಲಕ ಯಾವ ಅಂಗಡಿ ತೆರೆದಿವೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಸಾಧನ ಅಳವಡಿಕೆಯಿಂದ ಪಡಿತರ ಸಂಗ್ರವು ಶೇ.6.6ರಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯವು ತಿಳಿಸಿದೆ.
ಈ ಹಿಂದೆ ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸಾಮಾನ್ಯವಾಗಿ ತಮ್ಮ ಮಾಸಿಕ ಧಾನ್ಯ ಪಡಿತರಕ್ಕಾಗಿ ಕೇವಲ ಒಂದು ನ್ಯಾಯಯುತ ಬೆಲೆ ಅಂಗಡಿಗೆ (ಎಫ್‌ಪಿಎಸ್) ತೆರಳಬೇಕಿತ್ತು.