ಬಳ್ಳಾರಿ,ಫೆ.09 – ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗ ವತಿಯಿಂದ 2025-26 ನೇ ಶೈಕ್ಷಣಿಕ ಸಾಲಿನ ಅಂತರ ಮಹಾವಿದ್ಯಾಲಯ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಗುಡ್ಡಗಾಡು ಓಟದ ಸ್ಪರ್ಧೆಗೆ ಗಣ್ಯರು ಚಾಲನೆ ನೀಡಿದರು.
ಯುವ ಸಮುದಾಯ ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ತಿಪ್ಪೇರುದ್ರಪ್ಪ ಜೆ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ಅತಿಥಿ ಮುತ್ತೇಗೌಡ ಕೆ.ವಿ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಕ್ರೀಡಾಪಟಟುಗಳು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಭಾಗವಹಿಸುವಿಕೆಗೆ ಆದ್ಯತೆ ನೀಡಬೇಕು ಎಂದರು.
ಪುರುಷರ ಗುಂಪು ವಿಭಾಗದಲ್ಲಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ತಂಡ 42 ಅಂಕಗಳೊAದಿಗೆ 2025-26 ನೇ ಶೈಕ್ಷಣಿಕ ಸಾಲಿಗೆ ಚಾಂಪಿಯನ್ ಆದರು.
ಮಹಿಳೆಯರ ವಿಭಾಗದಲ್ಲಿ 16 ಅಂಕಗಳೊAದಿಗೆ ಸಂಡೂರಿನ ಸರ್ಕಾರಿ ಮಹಾವಿದ್ಯಾಲಯ ತಂಡ ಚಾಂಪಿಯನ್ ಆದರು.
ವಿಜೇತರ ಪಟ್ಟಿ:
ಪುರುಷರ ವಿಭಾಗ: ಪ್ರಥಮ ಸ್ಥಾನ- ಜಿ.ವಿನಯ (ಶ್ರೀ ಹಂಪಿ ವಿರುಪಾಕ್ಷೇಶ್ವರ ಮಹಾವಿದ್ಯಾಲಯ, ಕಮಲಾಪುರ).
ದ್ವಿತೀಯ ಸ್ಥಾನ- ಹೇಮಂತರಾಜ (ಸರ್ಕಾರಿ ವಾಣಿಜ್ಯ ಮಹಾವಿದ್ಯಾಲಯ, ಬಳ್ಳಾರಿ).
ತೃತೀಯ ಸ್ಥಾನ- ಎನ್.ಗೋಣಿ ಬಸವರಾಜ(ಜಿ.ಬಿ.ಆರ್ ಮಹಾವಿದ್ಯಾಲಯ, ಹೂವಿನಹಡಗಲಿ).
ಮಹಿಳೆಯರ ವಿಭಾಗ:ಪ್ರಥಮ ಸ್ಥಾನ- ಜಿ.ಡಿ.ಹಂಪಮ್ಮ (ಸರ್ಕಾರಿ ಮಹಾವಿದ್ಯಾಲಯ, ಸಂಡೂರು).
ದ್ವೀತಿಯ ಸ್ಥಾನ- ಸಂಧ್ಯಾ ಜಿ.ಎಲ್ (ಎಸ್.ಎಸ್.ಎ ಸರ್ಕಾರಿ ಮಹಾವಿದ್ಯಾಲಯ, ಬಳ್ಳಾರಿ).
ತೃತೀಯ ಸ್ಥಾನ- ಕಾವೇರಿ (ಸರ್ಕಾರಿ ಮಹಾವಿದ್ಯಾಲಯ, ಸಂಡೂರು).
ಈ ಸಂದರ್ಭದಲ್ಲಿ ವಿವಿಯ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಶಶಿಧರ ಕೆಲ್ಲೂರ, ಡಾ.ಸಂಪತ ಕುಮಾರ, ಲಿಂಗನಾಯ್ಕ, ಬೀರ ಲಿಂಗಪ್ಪ, ರಾಜೇಶ, ಗೌತಮ, ದುಳ್ಳಯ್ಯ, ರಾಹುಲ, ರಮೇಶ ಕೆ.ಡಿ ಸೇರಿದಂತೆ ವಿವಿಧ ಮಹಾವಿದ್ಯಾಲಯಗಳ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಹಾಗೂ ದೈಹಿಕ ಶಿಕ್ಷಣ ವಿಭಾಗದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಕ್ರೀಡಾ ಚಟುವಟಿಕೆಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ: ಪ್ರೊ.ತಿಪ್ಪೇರುದ್ರಪ್ಪ.ಜೆ


