ಇಂಚಲ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸ : ಭಕ್ತರಿಂದ ಮಹಾ ಪ್ರಸಾದಕ್ಕೆ ರೊಟ್ಟಿ ಸೇವೆ

Hasiru Kranti
ಇಂಚಲ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸ : ಭಕ್ತರಿಂದ ಮಹಾ ಪ್ರಸಾದಕ್ಕೆ ರೊಟ್ಟಿ ಸೇವೆ
WhatsApp Group Join Now
Telegram Group Join Now

ಬೈಲಹೊಂಗಲ: ಇಂಚಲ ಗ್ರಾಮದ ಸದ್ಭಕ್ತರು ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಮಹಾ ಪ್ರಸಾದಕ್ಕೆ ರೊಟ್ಟಿ ಸೇವೆ ಸಲ್ಲಿಸುವ ಉದ್ದೇಶದಿಂದ ಭಕ್ತಿ-ಶ್ರದ್ಧೆಯೊಂದಿಗೆ ತೆರಳಿದರು.
ಪ್ರತಿ ವ?ದಂತೆ ಈ ವರ್ಷವೂ ಭಕ್ತರು ಸ್ವಯಂಪ್ರೇರಿತವಾಗಿ ರೊಟ್ಟಿ ತಯಾರಿಸಿ ಮಹಾ ಪ್ರಸಾದ ವ್ಯವಸ್ಥೆಗೆ ಸಹಕಾರ ನೀಡುತ್ತಿರುವುದು ಗಮನಾರ್ಹವಾಗಿದ್ದು, ಇದು ಇಂಚಲ ಗ್ರಾಮದ ಭಕ್ತಿ ಪರಂಪರೆ ಮತ್ತು ಸೇವಾಭಾವಕ್ಕೆ ಸಾಕ್ಷಿಯಾಗಿದೆ. ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ, ಮಹಾ ಪ್ರಸಾದ ಸೇವೆಗೆ ಇಂಚಲದ ಭಕ್ತರ ಈ ಸೇವೆ ಮಹತ್ವ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಹಿರಿಯರು, ಮಹಿಳೆಯರು ಹಾಗೂ ಯುವಕರು ಒಗ್ಗಟ್ಟಾಗಿ ಪಾಲ್ಗೊಂಡು, ಶ್ರೀ ಶಿವಯೋಗೀಶ್ವರರ ಕೃಪೆಗೆ ಪಾತ್ರರಾಗುವ ಆಶಯ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article