ಇಂಚಲ ಡಾ.ಶಿವಾನಂದ ಭಾರತಿ ಸ್ವಾಮೀಜಿ 86ನೇ ಜಯಂತ್ಯೊತ್ಸವ : ಡಿ.29 ರಿಂದ 56ನೇ ಅಖಿಲ ಭಾರತ ವೇದಾಂತ ಪರಿಷತ್ ಆರಂಭ

Hasiru Kranti
ಇಂಚಲ ಡಾ.ಶಿವಾನಂದ ಭಾರತಿ ಸ್ವಾಮೀಜಿ 86ನೇ ಜಯಂತ್ಯೊತ್ಸವ : ಡಿ.29 ರಿಂದ 56ನೇ ಅಖಿಲ ಭಾರತ ವೇದಾಂತ ಪರಿಷತ್ ಆರಂಭ
WhatsApp Group Join Now
Telegram Group Join Now

ಬೈಲಹೊಂಗಲ: ಸಮೀಪದ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿಗಳವರ ೮೬ನೇ ಜಯಂತ್ಯೋತ್ಸವ ಹಾಗೂ ವಿಶ್ವಶಾಂತಿಗಾಗಿ ೫೬ನೇ ಅಖಿಲ ಭಾರತ ವೇದಾಂತ್ ಪರಿಷತ್, ರಜತ ರಥೋತ್ಸವ ಹಾಗೂ ಮಹಾರಥೋತ್ಸವ ಸಮಾರಂಭ ಡಿ.೨೯ರಿಂದ ಜ.೨ರವರೆಗೆ ನಡೆಯಲಿದೆ ಎಂದು ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದಭಾರತಿ ಸ್ವಾಮಿಜಿ ಹೇಳಿದರು.
ಅವರು ಮಂಗಳವಾರ ಸುಕ್ಷೇತ್ರ ಇಂಚಲದಲ್ಲಿ ಜಾತ್ರಾ ಮಹೋತ್ಸವದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಪ್ರತಿದಿನ ಬೆಳಿಗ್ಗೆ ೫ ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ೬.೩೦ರಿಂದ ೭.೩೦ರವರೆಗೆ ಮಹಾತ್ಮರಿಂದ ಪಾರಾಯಣ, ೮.೩೦ರಿಂದ ೯.೩೦ರವರೆಗೆ ಸಂಗೀತ ಸೇವೆ, ೯.೩೦ರಿಂದ ೧೨.೩೦ರವರೆಗೆ ಆಧ್ಯಾತ್ಮ ಪ್ರವಚನ, ಸಂಜೆ ೫ ರಿಂದ ೬.೩೦ರವರೆಗೆ ಸಂಗೀತ ಸೇವೆ, ೬.೩೦ರಿಂದ ೯.೩೦ರವರೆಗೆ ಪ್ರವಚನ, ೯.೩೦ಇಂದ ೧೦.೩೦ರವರೆಗೆ ಶ್ರೀಗಳ ತುಲಾಭಾರ, ಮಹಾಪೂಜೆ, ಡಿ.೨೯ರಂದು ಬೆಳಿಗ್ಗೆ ೭ಕ್ಕೆ ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ ಅವರಿಂದ ಪ್ರಣವ ಧ್ವಜಾರೋಹಣ, ನಂತರ ಕಳಶ ಸ್ಥಾಪನೆ, ಬೆಳಿಗ್ಗೆ ೯.೩೦ಕ್ಕೆ ಭಕ್ತಾತ್ವನನ್ಯಯಾಶಕ: ಅಹಮೇವಂ ವಿದೋರ್ಜುನ ವಿಷಯ ಕುರಿತು ವೇದಾಂತ ಪರಿಷತ್ ನಡೆಯಲಿದೆ. ಬೀದರ ಶಿವಕುಮಾರೇಶ್ವರ ಸ್ವಾಮೀಜಿ ನೇತೃತ್ವವಹಿಸುವರು. ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು. ಪೂರ್ಣಾನಂದ ಭಾರತಿ ಸ್ವಾಮಿಜಿ, ಸಚ್ಚಿದಾನಂದ ಸ್ವಾಮಿಜಿ, ಮಾತಾ ಅನಸೂಯಾ ತಾಯಿ, ಶಿವದೇವಿತಾಯಿ ಅತಿಥಿಗಳಾಗಿ ಆಗಮಿಸುವರು.
ಸಂಜೆ ೬.೩೦ಕ್ಕೆ ಸುಧಾರಸ ಧಾರೆಯಾಗುವುದು ಮಿಗೆ ಮೃದುವಚನ ಕುರಿತು ವೇದಾಂತ್ ಪರಿಷತ್ ನಡೆಯಲಿದೆ. ಬೀದರ ಶಿವಕುಮಾರೇಶ್ವರ ಸ್ವಾಮಿಜಿ ನೇತೃತ್ವ, ಯಡಳ್ಳಿ ಬಸವಾನಂದ ಸ್ವಾಮಿಜಿ, ಖುರ್ದಕಂಚನಳ್ಳಿ ಸುಬ್ರಮಣ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು.
ಡಿ.೩೦ರಂದು ಬೆಳಿಗ್ಗೆ ೯.೩೦ಕ್ಕೆ ಯಜ್ಞದಾನತಪ: ಕರ್ಮಪಾವನಾನಿ ಮನಿಷಿಣಾಮ ವೇದಾಂತ್ ಪರಿಷ್ ನಡೆಯಲಿದೆ. ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ ನೇತೃತ್ವದಲ್ಲಿ ಹರಳಕಟ್ಟಿ ನಿಜಗುಣ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು. ಸಂಜೆ ೬.೩೦ಕ್ಕೆ ಕ್ಷಣಮಪಿ ಸಜ್ಜನ ಸಂಗತಿರೇಖಾ ಭವತಿ ಭವಾರ್ಣವ ತರಣಿನೌಕಾ ವೇದಾಂತ್ ಪರಿಷತ್ ನಡೆಯಲಿದೆ. ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ನೇತೃತ್ವದಲ್ಲಿ ವಿಜಯಪುರದ ಅಭಿನವ ಸಿದ್ದಾರೂಡ ಸ್ವಾಮಿಜಿ, ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಅಧ್ಯಕ್ಷತ ವಹಿಸುವರು.
ಡಿ.೩೧ ಬೆಳಿಗ್ಗೆ ೯.೩೦ ರಂದು ಕರುಣವಿದ್ಯೆಗಳುಳ್ಳ ಗುರುಭಜನೆಯನು ವೇದಾಂತ್ ಪರಿಷತ ನಡೆಯಲಿದೆ. ಯಡಳ್ಳಿ ಬಸವಾನಂದ ಸ್ವಾಮಿಜಿ ನೇತ್ರತ್ವ , ಹಂಪಿ ಹೇಮಕೂಟ ವಿದ್ಯಾನಂದ ಭಾರತಿ ಸ್ವಾಮೀಜಿ ಅಧ್ಯಕ್ಷತೆವಹಿಸುವರು. ಸಂಜೆ ೬.೩೦ಕ್ಕೆ ಹಿತವಾವುದಿಹಪರದೊಳು ಧರ್‍ಮರತಿ ವೇದಾಂತ್ ಪರಿಷತ್ ನಡೆಯಲಿದೆ. ಬೀದರ ಶಿವಾದ್ವೈತ ಬೂಷಣ ಶಿವಕುಮಾರೇಶ್ವರ ಸ್ವಾಮಿಜಿ ನೇತೃತ್ವ, ಮುರಗೋಡ ನೀಲಕಂಠ ಸ್ವಾಮಿಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು.
ಜ.೧ರಂದು ಬೆಳಿಗ್ಗೆ ೯.೩೦ಕ್ಕೆ ಮಾಡಲಿಲ್ಲವೆ ತಪವನು ವೇದಾಂತ ಪರಿಷತ ಜರುಗಲಿದೆ. ಬೀದರ ಶಿವಾದ್ವೈತ ಬೂಷಣ ಶಿವಕುಮಾರೇಶ್ವರ ಸ್ವಾಮಿಜಿ ನೇತೃತ್ವ ವಹಿಸುವರು. ಕನೇರಿಮಠದ ಅದೃಶ್ಯಕಾಡಸಿದ್ದೇಶ್ವರ ಸ್ವಾಮಿಜಿ, ಹಂಪಿ ಹೇಂಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ, ಶೇಗುಣಸಿ ಡಾ ಮಹಾಂತಪ್ರಭು ಸ್ವಾಮಿಜಿ ಅಧ್ಯಕ್ಷತೆ ವಹಿಸುವರು.
ಮದ್ಯಾಹ್ನ ೨ ಕ್ಕೆ ಶ್ರೀ ಶಿವಯೋಗೀಶ್ವರ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ, ಶ್ರೀ ಸರಸ್ವತಿ ಮಾತೆಯ ಅಮೃತ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಟಾಪನೆ, ವಿವಿಧ ಪ್ರಯೋಗಾಲಯಗಳ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸುವರು. ಡಾ.ಶಿವಾನಂದ ಭಾರತಿ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸುವರು. ಬೀದರ ಶಿವಾದ್ವೈತ ಬೂಷಣ ಶಿವಕುಮಾರೇಶ್ವರ ಸ್ವಾಮಿಜಿ, ಶೇಗುಣಸಿ ಮಹಾಂತಪ್ರಭು ಸ್ವಾಮಿಜಿ, ಪೂರ್ಣಾನಂದ ಭಾರತಿ ಸ್ವಾಮಿಜಿ ಪಾವನ ಸಾನಿಧ್ಯ ವಹಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಹಾಗೂ ಜಿಲ್ಲೆಯ ಸಂಸದರು, ಶಾಸಕರು ಆಗಮಿಸುವರು. ಸಂಜೆ ೬.೩೦ ಕ್ಕೆ ತೇಷಾಮಹಂ ಸಮುದ್ದರ್ಥಾಮೃತ್ಯುಸಂಸಾರ ಸಾಗರಾತ್ ವಿಷಯದ ವೇದಾಂತ ಪರಿಷತ ಜರುಗಲಿದೆ. ಬೀದರ ಶಿವಾದ್ವೈತ ಬೂಷಣ ಶಿವಕುಮಾರೇಶ್ವರ ಸ್ವಾಮಿಜಿ ನೇತೃತ್ವ, ಯಡಳ್ಳಿ ಬಸವಾನಂದಭಾರತಿ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು. ರಾತ್ರಿ ೯ ಕ್ಕೆ ಶ್ರೀಗಳವರ ೮೬ ನೇ ಜಯಂತ್ಯೋತ್ಸವ ಅಂಗವಾಗಿ ತೊಟ್ಟಿಲೋತ್ಸವ, ಕನಕ ಕಿರೀಟಧಾರಣೆ, ಸುವರ್ಣ ಸಿಂಹಾಸನಾರೋಹಣ ಮತ್ತು ಶ್ರೀಗಳ ಮಹಾಪೂಜೆ ಹಾಗೂ ಮಹಾಮಂಗಲ ಕಾರ್ಯಕ್ರಮ ಜರುಗಲಿದೆ. ರಾತ್ರಿ ೧೦ ಗಂಟೆಗೆ ರಾಜ್ಯ ಪ್ರಶಸ್ತಿ ವಿಜೇತೆ ಮಲ್ಲವ್ವ ಮ್ಯಾಗೇರಿ ಸಂಗಡಿಗರಿಂದ ಶ್ರೀ ಕೃಷ್ಣ ಪಾರಿಜಾತ ಜರುಗುವುದು.
ದಿ.೨ ರಂದು ಬೆಳಿಗ್ಗೆ ೯.೩೦ ಕ್ಕೆ ಹರನಾಮವನು ಬಿಡದೆ ಜಪಿಸಬಲ್ಲವರ ವಿಷಯದ ವೇದಾಂತ ಪರಿಷತ ಜರುಗಲಿದೆ. ಬೀದರ ಶಿವಾದ್ವೈತ ಬೂಷಣ ಶಿವಕುಮಾರೇಶ್ವರ ಸ್ವಾಮಿಜಿ ನೇತೃತ್ವ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ, ಯಡಳ್ಳಿ ಬಸವಾನಂದ ಭಾರತಿ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು.
ಮದ್ಯಾಹ್ನ ೧೧. ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗುವವು. ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮಿಜಿ ಸಾನಿಧ್ಯ ವಹಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಬಾಬಾಸಾಹೇಬ ಪಾಟೀಲ,ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡಗೌಡರ ಆಗಮಿಸುವರು. ಮದ್ಯಾಹ್ನ ಶ್ರೀಗಳ ಪಲ್ಲಕ್ಕಿ ಉತ್ಸವ, ಸಂಜೆ ಶ್ರೀಗಳ ರಜತ ರಥೋತ್ಸವ ಹಾಗೂ ಶ್ರೀ ಶಿವಯೋಗೀಶ್ವರರ ಮಹಾ ರಥೋತ್ಸವ ಜರುಗುವುದು ಎಂದರು.
ಪೀಠಾಧಿಪತಿ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಗೌರವ ಕಾರ್ಯದರ್ಶಿ ಎಸ್ ಎನ್ ಕೊಳವಿ, ಶಿವಾನಂದ ಬೆಳಗಾವಿ, ಸುನೀಲ ಮರಕುಂಬಿ ಹಾಗೂ ಭಕ್ತರು ಇದ್ದರು. ಶಿಕ್ಷಕ ಚಂದ್ರು ಹೈಬತ್ತಿ ನಿರೂಪಿಸಿದರು.
೨೩ಬಿಎಲ್‌ಎಚ್೧
ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿಗಳ ೮೬ ನೇ ವರ್ಧಂತಿ ಮಹೋತ್ಸವ, ೫೬ ನೇ ವೇದಾಂತ ಪರಿಷತ, ರಜತ ರಥೋತ್ಸವ, ಮಹಾರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಹಾಗೂ ಗಣ್ಯರು ಬಿಡುಗಡೆಗೊಳಿಸಿದರು.

 

WhatsApp Group Join Now
Telegram Group Join Now
Share This Article