ಮೂಡಲಗಿ : ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಲಕ್ಷ್ಮೀ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸಾಯಿ ಮಂದಿರದ ಉದ್ಘಾಟನೆ ಹಾಗೂ ಸಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ಬಿಡುಗಡೆ ಮಾಡಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಕೃಷ್ಣಾ ನಾವಳ್ಳಿ, ರಮೇಶ ಬಟಕುರ್ಕಿ, ಐ.ಎ.ಪಾಟೀಲ, ಎನ್.ಐ ಯಕ್ಕುಂಡಿ, ಡಿ.ಬಿ.ಮುತ್ನಾಳ, ಎಲ್.ಸಿ.ಗಾಡವಿ ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ವಿವರ : ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಲಕ್ಷ್ಮೀ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸಾಯಿ ಮಂದಿರದ ಉದ್ಘಾಟನೆ ಹಾಗೂ ಸಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಆ.೧೧ರಿಂದ ಆ. ೧೪ರ ವರೆಗೆ ಜರುಗಲಿವೆ ಎಂದು ಶ್ರೀ ಸತ್ಯಸಾಯಿ ಸೇವಾ ಸಮಿತಿಯವರು ತಿಳಿಸಿದ್ದಾರೆ. ಆ.೧೧ರಂದು ಮುಂಜಾನೆ ೯ಗಂಟೆಗೆ ಶ್ರೀ ಶಿವಬೋಧರಂಗ ಮಠದಿಂದ ಕುಂಭಮೇಳ, ಆರತಿ ಸಕಲ ವಾಧ್ಯಗಳೊಂದಿಗೆ ಮೂರ್ತಿ ಹಾಗೂ ಕಳಸದ ಮೆರವಣಿಗೆಯೊಮದಿಗೆ ಸಾಯಿ ಮಂದಿರಕ್ಕೆ ಕರೆತರಲಾಗುವದು. ಆ.೧೨ ರಂದು ಮುಂಜಾನೆ ೯ಗಂಟೆಗೆ ಮೂರ್ತಿಗಳ ಪೀಠಾರೋಹಣ ನಡೆಯುವದು. ಆ.೧೩ರಂದು ಸಂಜೆ ೫ಗಂಟೆಗೆ ರಾಕ್ಷೆಘ್ನ ಹೋಮ ಹವನ ನಡೆಯುವದು.
ಆ.೧೪ ರಂದು ಮುಂಜಾನೆ ೭ಗಂಟೆಗೆ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಸಂಜೆ ಮಂದಿರ ಉದ್ಘಾಟನೆ, ಸತ್ಯನಾರಾಯಣ ಪೂಜೆ, ದಾನಿಗಳಿಗೆ ಸನ್ಮಾನ ಕಾರ್ಯಕ್ರಮಗಳು ಜರುಗುವವು. ಆ.೧೪ ರಂದು ನಡೆಯುವ ಕಾರ್ಯಕ್ರಮಗಳ ಸಾನಿಧ್ಯವನ್ನು ಮೂಡಲಗಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಮುನ್ಯಾಳ-ರಂಗಾಪೂರ, ಬಾಗೋಜಿಕೊಪ್ಪ ಮಠದ ಶ್ರೀ ಡಾ. ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಶಿರೂಂಜ-ಕುಳಲಿಯ ಶ್ರೀ ಬಸವ ಸಮರ್ಥ ಸ್ವಾಮಿಗಳು ವಹಿಸುವರು. ಶ್ರೀ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಹನುಮಂತ ಸೋರಗಾಂವಿ ಅಧ್ಯಕ್ಷತೆ ವಹಿಸುವರು.
ಅರಬಾವಿ ಮತಕ್ಷೇತ್ರದ ಶಾಸಕ ಹಾಗೂ ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ಶ್ರೀ ಸತ್ಯಸಾಯಿ ಸೇವಾ ಸಮಿತಿ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷ ಪದ್ಮನಾಭ ಪ್ಯೆ, ಜಿಲ್ಲಾಧ್ಯಕ್ಷ ವಸಂತ ಬಾಳಿಗಾ, ಹಿರಿಯ ಸಂಪನ್ಮೂಲ ವ್ಯಕ್ತಿ ಸುರೇಶ ಕಬ್ಬೂರ ಮುಕ್ಯ ಅತಿಥಿಗಳಾಗಿ ಆಗಮಿಸುವರು. ಎಸ್.ಆರ್.ಸೋನವಾಲಕರ, ಸುಭಾಸ ಢವಳೇಶ್ವರ, ಬಸವರಾಜ ಗುಲಗಾಜಂಬಗಿ, ಸಂತೋಷ ಸೋನವಾಲಕರ, ಡಾ.ಶಿವು ಹೊಸೂರ, ಪುರಸಭೆ ಅಧ್ಯಕ್ಷೆ ಖುರ್ಷಾದ ನದಾಫ, ತಹಶೀಲ್ದಾರ ಶ್ರೀಶ್ಯಲ್ ಗುಡುಮೆ, ಮುಖ್ಯಾಧಿಕಾರಿ ತುಕಾರಾಮ ಮಾದರ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಮಂದಿರ ಅಭಿಯಂತರ ಎಮ್.ಎಮ್.ಮುತಗೇಕರ, ಮಹೇಶ ಭಾರಧ್ವಾಜ್, ಎಮ್.ಎಸ್.ನಾಗನ್ನವರ ಉಪಸ್ಥಿತರಿರುವರು.
ಆ.೧೧ರಂದು ಸಾಯಿ ಮಂದಿರ ಉದ್ಘಾಟನೆ ಹಾಗೂ ವಿವಿಧ ಕಾರ್ಯಕ್ರಮ
