ಬಳ್ಳಾರಿ :09.. ತಾಲೂಕಿನ ಸಿರಿವಾರ ಗ್ರಾಮದಲ್ಲಿ ನೂತನ ಅಂಚೆ ಕಚೇರಿಯ ಶಾಖೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೊಡ್ದ ಬಸಮ್ಮ ಹಾಗೂ ಅಂಚೆ ಇಲಾಖೆಯ ಅಧೀಕ್ಷಕರಾದ ಪಿ ಚಿದಾನಂದ ಉದ್ಘಾಟಿಸಿದರು. ಸಿರಿವಾರ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಅಂಚೆ ಕಚೇರಿಯನ್ನು ಆರಂಭಿಸಲು ಗ್ರಾಮದ ಮುಖಂಡರು ಅಂಚೆ ಕಚೇರಿಯ ಮುಖ್ಯ ಅಧಿಕಾರಿಗಳನ್ನು ಮನವಿ ಮಾಡಿದ್ದರು, ಈ ಮನವಿಯನ್ನು ಪುರಸ್ಕರಿಸಿ ಇಂದು ಸಿರವಾರ ಗ್ರಾಮದಲ್ಲಿ ಅಂಚೆ ಕಚೇರಿಯ ಜಿಲ್ಲಾ ಅಧೀಕ್ಷಕರಾದ ಪಿ ಚಿದಾನಂದ ತಿಳಿಸಿದರು. ಇದರಿಂದ ಸಿರವಾರ ಗ್ರಾಮದ ಸಾರ್ವಜನಿಕರು ವಿಕಲಚೇತನರು, ವೃದ್ಧರು ಇನ್ನಿತರರು ಅಂಚೆ ಸೇವೆಯನ್ನು ಮತ್ತು ಪಿಂಚಣಿಯನ್ನು ಪಡೆಯಲು ಪಕ್ಕದ ಕಪ್ಪುಗಲ್ಲು ಗ್ರಾಮಕ್ಕೆ ಹೋಗಬೇಕಾಗಿತ್ತು, ಈ ಗ್ರಾಮದ ಸಾರ್ವಜನಿಕರ ಮನವಿಯ ಮೇರೆಗೆ ಅಂಚೆ ಕಚೇರಿಯನ್ನು ಇಂದು ಸಿರವಾರ ಗ್ರಾಮದಲ್ಲಿ ಆರಂಭಿಸಲಾಗಿದೆ ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಚಿದಾನಂದ ಡಿಜಿಟಲ್ ಅಕೌಂಟ್ ಅನ್ನು ಮೊಬೈಲ್ನಲ್ಲಿ ಆರಂಭಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೊಡ್ಡ ಬಸಮ್ಮ, ಉಪಾಧ್ಯಕ್ಷ ರಮೇಶ್, ಸದಸ್ಯರುಗಳಾದ ಮರಿ ಲಿಂಗಪ್ಪ, ಅದೆಪ್ಪ, ತಳವಾರ ಸುಂಕಯ್ಯ, ಕೋಮಾರಿ, ಅಂಚೆ ಇಲಾಖೆಯ ಅಧಿಕಾರಿಗಳು ಊರಿನ ಮುಖಂಡರು ಶೇಖಹ್ಲಿಂಗ, ತಂಬ್ರಳ್ಳಿ ಶೇಖ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು .