ಜಮಖಂಡಿ ಅರ್ಬನ್‌ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನೆ

Pratibha Boi
ಜಮಖಂಡಿ ಅರ್ಬನ್‌ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನೆ
WhatsApp Group Join Now
Telegram Group Join Now

ಜಮಖಂಡಿ;ಜಮಖಂಡಿ ನಗರದ ಅರ್ಬನ್‌ ಬ್ಯಾಂಕ್‌ನ ನೂತನ ಶಾಖೆಯನ್ನು ಜಿಲ್ಲಾ ಕೇಂದ್ರ ಸ್ಥಳ ಬಾಗಲಕೋಟೆಯಲ್ಲಿ ದಿ.27 ಭಾನುವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಾಗುವದು ಎಂದು ಅರ್ಬನ್‌ ಬ್ಯಾಂಕ್‌ನ ಅಧ್ಯಕ್ಷ ರಾಹುಲ ಕಲೂತಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು 14ನೇಯ ಶಾಖೆ ಯಾಗಲಿದೆ. ಕಳೆದ 5-6 ತಿಂಗಳು ಗಳಲ್ಲಿ 5 ಹೊಸ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಜನರಲ್ಲಿ ಅರ್ಬನ್‌ ಬ್ಯಾಂಕ್‌ನ ಮೇಲೆ ವಿಶ್ವಾಸ ವಿದ್ದು ಪ್ರತಿ ವರ್ಷಕ್ಕೆ10 ರಿಂದ 15 ಕೋಟಿ ರೂಗಳ ವರೆಗೆ ಠೇವಣಿ ಹಣ ಸಂಗ್ರಹ ವಾಗುತ್ತಿದೆ. ಬ್ಯಾಂಕ್‌ ಲಾಭದಲ್ಲಿ ನಡೆದಿದೆ ಆದ್ದರಿಂದ ಹೊಸ ಶಾಖೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಅರ್ಬನ್‌ ಬ್ಯಾಂಕ್‌ನಲ್ಲಿ ಲಭ್ಯವಿದೆ. ಇನ್ನೆರಡು ತಿಂಗಳುಗಳಲ್ಲಿ ರಿಜರ್ವ ಬ್ಯಾಂಕ್‌ನ ಸದಸ್ಯತ್ವವು ನಮ್ಮ ಬ್ಯಾಂಕ್‌ಗೆ ದೊರೆಯಲಿದೆ ಎಂದು ತಿಳಿಸಿದರು. ಬ್ಯಾಂಕ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಗಲಕೋಟೆ ಚರಂತಿ ಮಠದ ಪ್ರಭುಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ, ಉದ್ಘಾಟನೆ ನೆರವೇರಿಸಲಿದ್ದಾರೆ. ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ, ಶಾಸಕ ಎಚ್‌.ವೈ.ಮೇಟಿ, ಪಿ.ಎಚ್‌.ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿ ಮಠ ಸೇರಿದಂತೆ ಜಿಲ್ಲೆಯ ಹಲವು ನಾಯಕರು ಗಣ್ಯರು, ವ್ಯಾಪಾರಸ್ಥರು ಭಾಗವಹಿಸಲಿದ್ದಾರೆ ಎಂದು ವಿವರಣೆ ನೀಡಿದರು.

ನಿರ್ದೇಶಕ ಜಿ.ಎಸ್‌.ನ್ಯಾಮಗೌಡ ಮಾತನಾಡಿ. ಜಮಖಂಡಿ ಸರ್ಕಾರ ಪಟವರ್ಧನ ಮಹರಾಜರ ಕಾಲದಿಂದ ಸಂಸ್ಥಾಪನೆ ಗೊಂಡಿರುವ ಜಮಖಂಡಿ ಅರ್ಬನ್‌ ಬ್ಯಾಂಕ್‌ ತನ್ನದೇ ಆದ ನಂಬಿಕೆ ವಿಶ್ವಾಸಕ್ಕೆ ಪಾತ್ರವಾಗಿದೆ. ಅಂದಿನಿಂದ ಇಂದಿನ ವರೆಗೆ ಸಾರ್ವ ಜನಿಕರಲ್ಲಿ ನಂಬಿಕೆ ಉಳಿಸಿಕೊಂಡು ಬಂದಿದೆ. ಸೌಹಾರ್ದ ಸಹಕಾರಿ ಬ್ಯಾಂಕ್‌ಗಳ ಪೈಪೋಟಿಯ ಮದ್ಯದಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ರಾಜ್ಯದ ಪ್ರಮುಖ 10 ಅರ್ಬನ್‌ ಬ್ಯಾಂಕ್‌ಗಳಲ್ಲಿ ಜಮಖಂಡಿಯ ಬ್ಯಾಂಕ್‌ಕೂಡಾ ಒಂದಾಗಿದೆ ಎಂದು ಹೇಳಿದರು. ಭಾನುವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ನಿರ್ದೇಶಕರಾದ ಗುರುಲಿಂಗಪ್ಪ ನ್ಯಾಮಗೌಡ, ಫಕ್ಕೀರಸಾಬ ಬಾಗವಾನ, ಕಾಡಪ್ಪಮಾಳಿ, ವಿರುಪಾಕ್ಷಯ್ಯ ಕಂಬಿ, ಅಪ್ಪಾಸಾಬ ಮನಗೂಳಿ, ಅಪ್ಪಾಸಾಹೇಬ ಸಿಂಧೇ, ದರೆಪ್ಪತೇಲಿ, ಬಸವರಾಜ ಕಲೂತಿ, ಬಸವರಾಜ ಮಠಪತಿ, ಕಿರಣ ಪಿಸಾಳೆ, ಪ್ರಭುಲಿಂಗ ಜನವಾಡ, ನಂದೆಪ್ಪ ತಳವಾರ, ವೈಶಾಲಿ ಗೊಂದಿ, ಶೋಭಾ ಅರಕೇರಿ, ವೇದಿಕೆಯಲ್ಲಿದ್ದರು.

WhatsApp Group Join Now
Telegram Group Join Now
Share This Article