ಯರಗಟ್ಟಿ : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮಾಡಿಕೊಳ್ಳಬೇಕು. ಉತ್ತಮ ಆರೋಗ್ಯ ಹೊಂದಲು ಕ್ರೀಡೆಗಳು ಸಹಕಾರಿ ಎಂದು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಹೇಳಿದರು.
ಸಮೀಪದ ಮುನವಳ್ಳಿ ಪಟ್ಟಣದ ಎಂ.ಎಲ್.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಸವದತ್ತಿ ತಾಲೂಕಾ ಮಟ್ಟದ ಒಳಾಂಗಣ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಸಂಸ್ಥೆಯ ಅಧ್ಯಕ್ಷ ಉಮೇಶ ಬಾಳಿ ಅಧ್ಯಕ್ಷತೆ ವಹಿಸಿದ್ದರು. ಜೈಂಟ್ಸ್ ಗ್ರೂಪ್ ಅಧ್ಯಕ್ಷ ಭುಜಂಗರಾವ್ ನಿಕ್ಕಂ, ಎಂ.ಬಿ.ಕೊಪ್ಪದ, ಶಿಕ್ಷಣ ಸಂಯೋಜಕ ಸುಧೀರ ವಾಘೇರಿ, ಮೀನಾಕ್ಷಿ ಮುರನಾಳ, ನಾಗೇಶ ಹೊನ್ನಳ್ಳಿ, ಜಿ.ಎಸ್.ಚಿಪ್ಪಲಕಟ್ಟಿ, ಎಚ್.ಎಚ್.ನದಾಫ, ಮಲ್ಲಿಕಾರ್ಜುನ ದಸ್ತಿ, ಎಂ.ಎಚ್.ಕಾಮಣ್ಣವರ, ಬಿ.ಎಚ್.ಖೊಂದುನಾಯ್ಕ, ವೈ.ಟಿ.ತಂಗೋಜಿ, ಎ.ವಿ.ರೋಣದ, ಎಂ.ಎ.ಕಮತಗಿ, ಬಾಳು ಹೊಸಮನಿ, ಸದಾನಂದ ತುಡುವೇಕರ, ಅನ್ವರ ಮುಲ್ಲಾ, ಜೈಂಟ್ಸ್ ಗ್ರೂಪ್ ಪದಾಧಿಕಾರಿಗಳು, ಶಿಕ್ಷಕ ವೃಂದ ಸೇರಿದಂತೆ ಇತರರು ಇದ್ದರು.


