ಕುಮಾರೇಶ್ವರ ಆಸ್ಪತ್ರೆಯಲ್ಲಿ ಚೈಲ್ಡ್ ಡೆವಪ್‌ಮೆಂಟ್ ಕ್ಲಿನಿಕ್ ಉದ್ಘಾಟನೆ

Ravi Talawar
ಕುಮಾರೇಶ್ವರ ಆಸ್ಪತ್ರೆಯಲ್ಲಿ ಚೈಲ್ಡ್ ಡೆವಪ್‌ಮೆಂಟ್ ಕ್ಲಿನಿಕ್ ಉದ್ಘಾಟನೆ
WhatsApp Group Join Now
Telegram Group Join Now

ಬಾಗಲಕೋಟೆ:- ಚಿಕ್ಕಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚೈಲ್ಡ್ ಡೆವಪ್‌ಮೆಂಟ್ ಕ್ಲಿನಿಕ್ ಸ್ಥಾಪಿಸಲಾಗಿದೆ. ಈ ಕ್ಲಿನಿಕ್‌ನಲ್ಲಿ ಬೆಳವಣಿಗೆಯ ವಿಳಂಬತೆಯ ಅಪಾಯದಲ್ಲಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಇದೊಂದು ವಿಶಿಷ್ಠ ಆರೋಗ್ಯ ಸೇವೆಯಾಗಿದೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಹೇಳಿದರು.
ನಗರದ ಬಿ.ವಿ.ವಿ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ಮಕ್ಕಳ ಬೆಳವಣಿಗೆ ಕ್ಲಿನಿಕ್ (ಚೈಲ್ಡ್ ಡೆವಪ್‌ಮೆಂಟ್ ಕ್ಲಿನಿಕ್) ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಬೆಳವಣಿಗೆಗೆ ಬೇಕಾಗಿರುವ ವಿಶೇ? ಅಭಿವೃದ್ಧಿಯ ಮೇಲ್ವಿಚಾರಣೆ ಮಾಡುವ ಹಾಗೂ ಅವಶ್ಯಕತೆಗಳನ್ನು ನಿರ್ಣಯಿಸುವ ನಿಟ್ಟಿನಲ್ಲಿ ಈ ಕ್ಲಿನಿಕ್ ವಿಶೇಷ ಸೇವೆ ಸಲ್ಲಿಸಲಿದೆ ಎಂದರು.
ಚಿಕ್ಕಮಕ್ಕಳ ತಜ್ಞರು ಹಾಗೂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ ಮಾತನಾಡಿ ಮಕ್ಕಳ ಕುಂಠಿತ ಬೆಳವಣಿಗೆ, ಅವಧಿಪೂರ್ವ ಜನಿಸಿದ ಮಗು ಅಥವಾ ಕಡಿಮೆ ತೂಕದ ಶಿಶು, ಜನನದ ವೇಳೆ ತೊಂದರೆಗಳನ್ನು ಅನುಭವಿಸಿದ ಮಗು, ತಡವಾದ ಬೆಳವಣಿಗೆ, ಕಲಿಕೆ ಅಥವಾ ಸಂವಹನದ ಸಮಸ್ಯೆಗಳು, ಹುಟ್ಟಿನಿಂದ ಇರುವ ದೈಹಿಕ ಅಥವಾ ಅಂಗಾಂಗಗಳ ದೋಷಗಳು, ಮಗುವಿನಲ್ಲಿನ ಅನುವಂಶಿಕ ಕಾಯಿಲೆಗಳು, ದೀರ್ಘಕಾಲೀನ ಕಾಯಿಲೆಗಳು, ಮಾತು ಅಥವಾ ಭಾ? ವಿಳಂಬ, ಆಟಿಸಮ್ ಅಥವಾ ಇತರ ಮೆದುಳಿನ ಬೆಳವಣಿಗೆಯ ಸiಸ್ಯೆಗಳನ್ನು ಹೊಂದಿರುವ ಮಕ್ಕಳಿಗೆ ಈ ಕ್ಲಿನಿಕ್‌ನಲ್ಲಿ ಉಪಯುಕ್ತ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು. ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಈ ಕೇಂದ್ರದಲ್ಲಿ ಮಕ್ಕಳ ತಜ್ಞರು ಹಾಗೂ ಮೆದುಳಿನ ಬೆಳವಣಿಗೆ ಮೌಲ್ಯಮಾಪಕರು, ಮಕ್ಕಳ ನರರೋಗ ತಜ್ಞರು, ಮನೋವೈದ್ಯರು, ಭಾಷಾ ಮತ್ತು ಸಂವಹನ ತಜ್ಞರು, ಶಾರೀರಿಕ ಚಿಕಿತ್ಸಾ ತಜ್ಞರು ಹಾಗೂ ಮೆದುಳಿನ ಮೌಲ್ಯಮಾಪಕರು, ಮನಃಶಾಸ್ತ್ರಜ್ಞರು, ವೃತ್ತಿಪರ ಚಿಕಿತ್ಸಾ ತಜ್ಞರು ಲಭ್ಯವಿರುವರು ಹಾಗೂ ಅತ್ಯಾಧುನಿಕ ಉಪಕರಣಗಳು ಲಭ್ಯವಿವೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಬೆಂಗಳೂರಿನ ಚಿಕ್ಕಮಕ್ಕಳ ನರರೋಗತಜ್ಞ ಡಾ.ಸುರೇಶ್ ರಾವ್ ಅರೂರ್, ಕರ್ನಾಟಕ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ನ್ಯೂರಾಲಜಿಯ ಅಧ್ಯಕ್ಷ ಡಾ.ಸಿ.ಪಿ.ರವಿಕುಮಾರ, ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ, ಚಿಕ್ಕಮಕ್ಕಳ ತಜ್ಞರಾದ ಡಾ.ರಮೇಶ್ ಪೋಳ, ಡಾ.ತಳವಾರ, ಡಾ.ವನಕಿ, ಡಾ.ಪಲ್ಲವಿ ಚರಂತಿಮಠ, ಡಾ.ಅನಿತಾ, ಡಾ.ಮಿರ್ಜಿ, ಡಾ.ಮನೋಜ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೋಟೋ ೦೧ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚೈಲ್ಡ್ ಡೆವಪ್‌ಮೆಂಟ್ ಕ್ಲಿನಿಕ್ ಉದ್ಘಾಟನೆ

—೦೦೦—

WhatsApp Group Join Now
Telegram Group Join Now
Share This Article