ಬಳ್ಳಾರಿ,ಆ.೦೨: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೫ ದಿನಗಳ ಕಾಲ ಜರಗುವ “ಎಐ & ಮಷಿನ್ ಲರ್‌ನಿಂಗ್ ಫಾರ್ ರಿಯಲ್ ರ‍್ಡ್ ಪ್ರಾಬಲಮ್ ಸಾಲ್‌ವಿಂಗ್” ಕಾರ್ಯಗಾರಕ್ಕೆ ಡಾ|| ಟಿ. ಹನುಮಂತರೆಡ್ಡಿ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ|| ರಾಜೇಶ್ವರಿ ಜಂತಕಲ್ ಪ್ರಾಧ್ಯಪಕರು ಐ.ಎಸ್.ಇ ವಿಭಾಗ, ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ಮಾತನಾಡುತ್ತಾ “ಈ ರೀತಿಯ ಕಾರ್ಯಗಾರಗಳು ಶಿಕ್ಷಣ ಸಂಸ್ಥೆಗಳ ಅಧ್ಯಾಪಕ ವೃಂದಕ್ಕೆ ಸಂಶೋದನೆಗೆ ಉಪಯುಕ್ತವಾಗಲಿದೆ. ಈ ರೀತಿಯ ಕಾರ್ಯಗಾರಗಳು ಶಿಕ್ಷಣದಲ್ಲಿ ಮುಖ್ಯಪಾತ್ರವನ್ನು ವಹಿಸಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಗಾರದಲ್ಲಿ ಎಲ್ಲಾ ವಿಭಾಗದ ಪ್ರಾಧ್ಯಪಕರು ಹಾಗೂ ಬೇರೆ ಕಾಲೇಜಿನ ಪ್ರಾಧ್ಯಪಕರುಗಳು ಭಾಗವಹಿಸಿದ್ದರು.
ಉಪಪ್ರಾಂಶುಪಾಲರಾದ ಡಾ|| ಸವಿತ ಸೂನೊಳಿ ಮಾತಾನಾಡುತ್ತಾ ಅಧ್ಯಾಪಕರಿಗೆ ಮಾರ್ಗದರ್ಶನ ನೀಡುವಲ್ಲಿ ಈ ರೀತಿಯ ಕಾರ್ಯಗಾರಗಳು ಮುಖ್ಯಪಾತ್ರವನ್ನು ವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಾ|| ಪ್ರಭಾವತಿ .ಎಸ್ Pಡಿoಜಿ. & ಊಔಆ ಆeಠಿಣ. oಜಿ ಇಅಇ, ಇವರು ಮಾತನಾಡಿ ಅಧ್ಯಾಪಕರು ಸಂಶೋದನೆ ರಂಗದಲ್ಲಿ ಕ್ರಿಯಾ ಶೀಲರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಬಳ್ಳಾರಿಯ ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ, ವಿ.ವೀ.ಸಂಘದ ಅಧ್ಯಕ್ಷರಾದ ಡಾ|| ಕಣೆಕಲ್ ಮಹಾತೇಂಶ್, ವಿ.ವೀ.ಸಂಘದ ಕಾರ್ಯದರ್ಶಿಗಳಾದ ಡಾ|| ಅರವಿಂದ್ ಪಾಟೀಲ್, ವಿ.ವೀ.ಸಂಘದ ಸಹ-ಕಾರ್ಯದರ್ಶಿಗಳಾದ ಯಾಲ್ಪಿ ಮೇಟಿ ಪೊಂಪನಗೌಡ, ಖಜಾಂಚಿಗಳಾದ ಬೈಲುವದ್ದಿಗೇರಿ ರ‍್ರಿಸ್ವಾಮಿ, ಈ ಕ್ರಾರ್ಯಕ್ರಮಕ್ಕೆ ಶುಭಕೋರಿದರು. ಆಡಳಿತ ಮಂಡಳಿಯ ಸದಸ್ಯರಾದ ಪ್ರಭು ಸ್ವಾಮಿ ಬಿ.ಎಂ, ಮತ್ತು ಬಾಡದ ಪ್ರಕಾಶ್ ಈ ಕಾರ್ಯಗಾರವನ್ನು ಆಯೋಜಿಸಿದ್ದಾಕ್ಕಾಗಿ ಅಭಿನಂದಿಸಿದರು.
ಉಪಪ್ರಾಂಶುಪಾಲರಾದ ಡಾ|| ಸವಿತ ಸೊನೊಳಿ, ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ|| ಪ್ರಭಾವತಿ .ಎಸ್, ವಿವಿಧ ವಿಭಾಗದ ಮುಖ್ಯಸ್ಥರುಗಳು, ಪ್ರಾಧ್ಯಪಕ ವೃಂದ, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಅಶ್ವಿನಿ .ಕೆ ಮತ್ತು ಸಂತೋಷ್ ಮುಗಳಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಮತ್ತು ಇನ್ನಿತರರು ಭಾಗವಹಿಸಿದ್ದರು.