ನ.30 ರಂದು ಬೈಲಹೊಂಗಲ ಪಟ್ಟಣದಲ್ಲಿ ಕಿತ್ತೂರು ಕರ್ನಾಟಕ ಸೇನೆ ಉದ್ಘಾಟನೆ: ಉತ್ತರದ ಅಭಿವೃದ್ಧಿಗೆ ದಕ್ಷಿಣ ನಾಯಕರ ನಿರ್ಲಕ್ಷ : ಮಹಾದೇವ ತಳವಾರ ಕಿಡಿ

Ravi Talawar
ನ.30 ರಂದು ಬೈಲಹೊಂಗಲ ಪಟ್ಟಣದಲ್ಲಿ ಕಿತ್ತೂರು ಕರ್ನಾಟಕ ಸೇನೆ ಉದ್ಘಾಟನೆ: ಉತ್ತರದ ಅಭಿವೃದ್ಧಿಗೆ ದಕ್ಷಿಣ ನಾಯಕರ ನಿರ್ಲಕ್ಷ : ಮಹಾದೇವ ತಳವಾರ ಕಿಡಿ
WhatsApp Group Join Now
Telegram Group Join Now

 

ಬೈಲಹೊಂಗಲ- ರಾಜ್ಯದ ದಕ್ಷಿಣ ಭಾಗದ ಸಂಘಟನೆಗಳು
ಉತ್ತರ ಕರ್ನಾಟಕದ ಜ್ವಲoತ ಸಮಸ್ಯೆಗಳಿಗೆ ಗಮನ ಹರಿಸದೆ ಇರುವುದು ವಿಪರ್ಯಾಸದ ಸಂಗತಿ.ಈ ಭಾಗದ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಕಿತ್ತೂರು ಕರ್ನಾಟಕ ಸೇನೆ ಸದಾ ಸಿದ್ಧವೆಂದು ಸಂಘಟನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಗುಡುಗಿದರು.

ಪಟ್ಟಣದ ನಿರೀಕ್ಷಿಣಾ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿ ಇಚ್ಛಾಶಕ್ತಿ ಹೊಂದಿದ ಉತ್ತರ ಕರ್ನಾಟಕದ ಸ್ವಾಭಿಮಾನಿ ಕೆಚ್ಚೆದೆಯ ಕನ್ನಡಿರನ್ನು ಬಳಸಿಕೊಂಡು ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತನ್ನು ಕೊಡದೆ ಇರುವುದು ಬೇಸರದ ಸಂಗತಿ.

ಗ್ರಾಮೀಣ ಭಾಗದಿಂದ ಸಂಘಟನೆ ಕಟ್ಟಲು ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ,ನಾಡು ನುಡಿಗೆ ತಮ್ಮ ಜೀವನ ಮುಡಿಪಾಗಿಟ್ಟು ಹಲವು ಪ್ರಕರಣಗಳಿಗೆ ಗುರಿಯಾಗಿ, ಕೊನೆಗೆ ತಿರಸ್ಕಾರಕ್ಕೆ ಒಳಗಾದ ಉತ್ತರ ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರು ಹುಟ್ಟುಹಾಕಿದ ಕಿತ್ತೂರು ಕರ್ನಾಟಕ ಸೇನೆಯ ಉದ್ಘಾಟನೆ ಸಮಾರಂಭ ನ. 30 ರಂದು ಬೈಲಹೊಂಗಲ ಪಟ್ಟಣದ ವೀರಮಾತೆ ಕಿತ್ತೂರು ಚನ್ನಮ್ಮಾಜಿ ಐಕ್ಯ ಸ್ಥಳದಲ್ಲಿ ನೆರವೇರಲಿದೆ.
ಉದ್ಘಾಟನೆ ಕಾರ್ಯಕ್ರಮದ ಪ್ರಯುಕ್ತ ನ. 30 ರಂದು ಸಾಯಂಕಾಲ 5 ಗಂಟೆಗೆ ನಡೆಯಲಿರುವ ರಸಮಂಜರಿ ಹಾಗೂ ನಗೆಹಬ್ಬ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ,ಸಾನಿಧ್ಯವನ್ನು ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕರಾದ ಡಾ. ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು ವಹಿಸಲಿದ್ದು, ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ನೆರವೇರಿಸುವರು.

ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿಗಳಾದ ಶ್ರೀಶೈಲ ಬೋಳನ್ನವರ ವಹಿಸಲಿದ್ದು, ಶಾಸಕರುಗಳಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ ಸೇರಿದಂತೆ ಗಣ್ಯಮಾನ್ಯರು ಭಾಗಿಯಾಗಲಿದ್ದಾರೆ.

ಡಿ. 1 ರಂದು ಸಾಯಂಕಾಲ 5 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಡಾ. ಅಮರ ಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಈಶ್ವರ ಹೋಟಿ, ಉದ್ಘಾಟಕರಾಗಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮುಖ್ಯ ಅತಿಥಿಗಳಾಗಿ ಉದ್ಯಮಿ ವಿಜಯ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ನಗರದ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಮಾತನಾಡಿ ಇತಿಹಾಸದ ಪುಟಗಳಲ್ಲಿ ಕ್ರಾಂತಿಯ ಕಿಚ್ಚು ಹಚ್ಚಿದ ಕೀರ್ತಿಗೆ ಪಾತ್ರವಾಗಿರುವ ಬೈಲಹೊಂಗಲ ನಾಡಿನ ಚನ್ನಮ್ಮಾಜಿ ಐಕ್ಯ ಸ್ಥಳದಿಂದ ಕಿತ್ತೂರು ಕರ್ನಾಟಕ ಸೇನೆ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಘಟನೆ ಕಾರ್ಯ ಚಟುವಟಿಕೆ ಪ್ರಗತಿಯಲ್ಲಿದೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯoತ ಸಂಘಟನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಘಟನೆ ಕೇಂದ್ರ ಸಮಿತಿ ಸದಸ್ಯರಾದ ದೇವೇಂದ್ರ ತಳವಾರ, ರಮೇಶ ತಳವಾರ
ತಾಲೂಕು ಅಧ್ಯಕ್ಷ ರಾಜು ಬೋಳನ್ನವರ, ಸಿದ್ಧಾರೂಢ ಹೊಂಡಪ್ಪನವರ, ಶಿವಾನಂದ ಕುರಬೇಟ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article