ಇಂಡಿ: ಇಂದು ನಮ್ಮ ಜೀವನ ಶೈಲಿ ಬಹಳಷ್ಟು ಬದಲಾಗಿದೆ. ನಾವು ಬಳಸುವ ಆಹಾರ ಪದಾರ್ಥಗಳಲ್ಲಿಯೂ ಸಾಕಷ್ಟು ಬದಲಾವಣೆಯಾಗಿವೆ. ಹೀಗಾಗಿ ಜನರಲ್ಲಿ ರೋಗಗಳು ಹೆಚ್ಚಾಗುತ್ತಿವೆ. ವೈದ್ಯರಿಲ್ಲದಿದ್ದರೆ ಬದುಕು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿ ನಾವುದ್ದೇವೆ. ಇಂಡಿ ನಗರದಲ್ಲಿ ಇಂತಹ ಆಸ್ಪತ್ರೆಯ ಅವಶ್ಯಕತೆ ಬಹಳಷ್ಟಿತ್ತು. ಡಾ. ಚೇತನ್ ಅವರು ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿದ್ದು ರೋಗಿಗಳ ಬಗ್ಗೆ ತಿಳಿದುಕೊಂಡು ಉತ್ತಮ ಚಿಕಿತ್ಸೆ ನೀಡುತ್ತಾರೆ. ಅವರ ಸೇವೆ ಇಂಡಿ ತಾಲೂಕಿಗೆ ಅವಶ್ಯವಿದೆ ಎಂದು ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಅವರು ಭಾನುವಾರ ನಗರದ ಸಿಂದಗಿ ರಸ್ತೆಯಲ್ಲಿ ಹುಬ್ಬಳ್ಳಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ವಿಜಯಪೂರದ ಡೀಮ್ಡ ವಿಶ್ವವಿದ್ಯಾಲಯದ ಪ್ರೋ, ಡಾ. ಆರ್.ಸಿ. ಬಿದರಿ ಮಾತನಾಡಿ, ಇಂಡಿ ನಗರದಲ್ಲಿ ಹುಬ್ಬಳ್ಳಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ತಲೆ ಎತ್ತಿದ್ದು ಡಾ. ಚೇತನ್ ಹುಬ್ಬಳ್ಳಿ ತಮ್ಮ ವೃತ್ತಿಯನ್ನು ಚಾಚೂ ತಪ್ಪದೆ ಸಮಯ ಪ್ರಜ್ಞೆಯಿಂದ ಮಾಡುತ್ತಾರೆ. ಇಂತಹ ವೈದ್ಯರ ಸೇವೆ ಇಂಡಿ ನಗರ ಹಾಗೂ ತಾಲೂಕಿನ ಜನರಿಗೆ ಅವಶ್ಯವಿತ್ತು ಎಂದರು.
ವೈದ್ಯರು ಕೇವಲ ಹಣ ಗಳಿಸಲು ಚಿಕಿತ್ಸೆ ನೀಡದೆ ರೋಗಿಯ ಸ್ಥಿತಿ ಗತಿಯ ಬಗ್ಗೆ ತಿಳಿದುಕೊಂಡು ಮಾನವೀಯತೆಯ ದೃಷ್ಠಿಕೋನದಿಂದಲೂ ಚಿಕಿತ್ಸೆ ನೀಡಬೇಕಾಗುತ್ತದೆ. ವೈದ್ಯೋ ನಾರಾಯಣ ಹರಿ ಎಂದು ವೈದ್ಯರನ್ನು ದೇವರಿಕೆ ಹೋಲಿಕೆ ಮಾಡಲಾಗಿದೆ. ಹೀಗಾಗಿ ವೈದ್ಯರು ಪ್ರಾಮಾಣಿಕವಾಗಿ ತಮ್ಮ ಕಾಯಕ ಮಾಡಬೇಕೆಂದರು.
ಶಿಕ್ಷಕಿ ಅಕ್ಕಮಹಾದೇವಿ ಮಾಲಿಪಾಟೀಲ ಮಾತನಾಡಿ, ಡಾ. ಚೇತನ್ ಅವರು ವಿದ್ಯಾರ್ಥೀ ಜೀವನದಿಂದಲೂ ವೈದ್ಯನಾಗುವ ಕನಸು ಕಂಡಿದ್ದರು. ಆ ಕನಸು ಈಗ ನನಸಾಗಿದೆ. ಡಾ. ಚೇತನ ಕೇವಲ ಒಬ್ಬ ವೈದ್ಯನಕಲ್ಲ, ಕವಿ, ಬರಹಗಾರ, ಉತ್ತಮ ಮಾತುಗಾರ ಆತ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾನೆ. ಇಂಡಿ ಹಾಗೂ ಗ್ರಾಮೀಣ ಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಲಿದ್ದಾನೆ ಎಂದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ರಾಜೇಶ ಕೋಳೆಕರ್ ಮಾತನಾಡಿದರು.
ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಚೋರಗಿಯ ರಾಚಯ್ಯ ಹಿರೇಮಠ ಸಾನಿಧ್ಯವಹಿಸಿದ್ದರು.
ವೇದಿಕೆಯಲ್ಲಿ ಡಾ. ಶೈಲಜಾ ಬಿದರಿ, ಶಾಂತೇಶ್ವರ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಹಿರಿಯ ಪತ್ರಕರ್ತ ಎ.ಸಿ. ಪಾಟೀಲ, ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಡಾ. ಚೇತನ್ ಹುಬ್ಬಳ್ಳಿ, ಡಾ. ನಿವೇದಿತಾ ಬುರುಕುಲೆ, ಜಕ್ಕಪ್ಪ ಹುಬ್ಬಳ್ಳಿ, ಪುಷ್ಪಾವತಿ ಹುಬ್ಬಳ್ಳಿ, ಈರಣ್ಣ ಬುರುಕುಲೆ, ನಿರ್ಮಲಾ ಬುರುಕುಲೆ,ಅಣ್ಣುಗೌಡ ಬಿರಾದಾರ ಇದ್ದರು.
ಭೀಮನಗೌಡ ಬಗಲಿ ಕಾರ್ಯಕ್ರಮವನ್ನು ನಿರೂಪಿಸಿದರು. ಗಡ್ಡೆಪ್ಪ ಗುಂಜುಟಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು.
ಫೋಟೊ ಕ್ಯಾಪ್ಸನ್ ೦೫ ಇಂಡಿ ೦೨: ನಗರದ ಸಿಂದಗಿ ರಸ್ತೆಯಲ್ಲಿ ಹುಬ್ಬಳ್ಳಿ ಮಲ್ಟಿಸೇಷಾಲಿಟಿ ಆಸ್ಪತ್ರೆಯನ್ನು ಡಾ.ಆರ್.ಸಿ. ಬಿದರಿ ಉದ್ಘಾಟಿಸಿದರು.


