ಅಥಣಿ: ಪಟ್ಟಣದ ಕನಕ ನಗರದಲ್ಲಿ ಸ್ಥಾಪನೆಯಾಗಿರುವ ಬುದ್ಧ ವಿಹಾರ ಉದ್ಯಾನವನ ಹಾಗೂ ಭಗವಾನ್ ಬುದ್ಧ ಮೂರ್ತಿ ಲೋಕಾರ್ಪಣೆ ಸಮಾರಂಭವನ್ನು ಬರುವ ರವಿವಾರ ದಿ. 21ರಂದು ಮುಂಜಾನೆ 10 :00ಗೆ ಹಮ್ಮಿಕೊಳ್ಳಲಾಗಿದೆ ಎಂದು ಬುದ್ಧ ವಿಹಾರ ಸೇವಾ ಸಂಘದ ಅಧ್ಯಕ್ಷ ಎಸ್. ಬಿ ದೊಡ್ಡಮನಿ ಹೇಳಿದರು.
ಅವರು ಅಥಣಿ ಪಟ್ಟಣದ ಬುದ್ಧ ವಿಹಾರ ಉದ್ಯಾನವನದಲ್ಲಿ ಸೇವಾ ಸಂಘದ ಸದಸ್ಯರ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೀದರ ಬೌದ್ಧ ಬಿಕ್ಕುಸಂಘದ ಪೂಜ್ಯ ಬಂತೆ ವೀರಜ್ಯೋತಿ ಮಹಾಥೇರೋ ವಹಿಸಲಿದ್ದಾರೆ.
ಉದ್ಘಾಟಕರಾಗಿ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ, ಮುಖ್ಯ ಅತಿಥಿಗಳಾಗಿ ಕಾಗವಾಡ ಶಾಸಕ ರಾಜು ಕಾಗೆ, ಕುಡಚಿ ಶಾಸಕ ಮಹೇಶ ತಮ್ಮಣ್ಣನವರ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ, ಪುರಸಭಾ ಸದಸ್ಯ ರಾವಸಾಬ ಐಹೊಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಹುಸಾಹೇಬ ದೊಡಮನಿ, ಸೋಮಲಿಂಗ ನಿಡೋಣಿ, ಪರಶುರಾಮ ಚುಬಚಿ, ರಾಮಚಂದ್ರ ದೊಡಮನಿ, ತುಕಾರಾಮ ಕಾಂಬಳೆ, ಜ್ಞಾನದೇವ ದರೂರ, ತುಕಾರಾಮ ಸೂರ್ಯವಂಶಿ, ದಿಲೀಪ ನಡೋಣಿ, ಅಶೋಕ ಕೋರಿ, ರಾಜಕುಮಾರ ಬಡಿಗೇರ, ಶಾಮರಾವ ಕಾಂಬಳೆ.ಮಲ್ಲಪ್ಪಾ ಕಾಂಬಳೆ ಮತ್ತು ರೇಖಾ ಘಟಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.