ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಉದ್ಘಾಟನೆ

MK HasiruKranti
ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಉದ್ಘಾಟನೆ
WhatsApp Group Join Now
Telegram Group Join Now

ವಿಜಯಪುರ,ಎ,೧೧ : ಬಸವ ನಾಡಿನಲ್ಲಿ ನಿಂತು ಅಂಬೇಡ್ಕರ್ ಜಯಂತಿಯನ್ನು ಪುಸ್ತಕ ಮೇಳದ ಮೂಲಕ ಹಮ್ಮಿಕೊಂಡಿರುವುದು ದೇಶಕ್ಕೆ ಗುಣಾತ್ಮಕ ಸಂದೇಶ ನೀಡುತ್ತಿದೆ ಎಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರಾದ ಕೆ ಎಂ ಜಾನಕಿ ಅವರು ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ ೧೦ರಿಂದ ೧೪ರ ವರೆಗೆ ೫ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಾದರೆ ಸರ್ವರೂ ಸಾಮಾಜಿಕ ಬದ್ಧತೆ ಅಳವಡಿಸಿಕೊಳ್ಳಬೇಕು ಎಲ್ಲರು ಇಂತಹ ಪುಸ್ತಕ ಮೇಳದಲ್ಲಿ ಭಾಗವಹಿಸುವ ಮೂಲಕ ಎಲ್ಲರು ತಮ್ಮ ಜ್ಞಾನದ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಪುಸ್ತಕ ಮೇಳದ ದಿಕ್ಸೂಚಿ ಭಾಷಣ ಮಾಡಿ ಮುಂಬೈನ ದಲಿತ ಪ್ಯಾಂಥ ರ್ಸ್ ಸಂಸ್ಥಾಪಕ ಜೆ ವಿ ಪವಾರ ಅವರು ಮಾತನಾಡಿ ಬುದ್ಧ, ಬಸವ ಬಾಬಾಸಾಹೇಬ ಪುಸ್ತಕ ಮೇಳವು ಇಂದಿನ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಹಮ್ಮಿಕೊಂಡಿರುವುದು ಒಂದು ಐತಿಹಾಸಿಕ ಸಂಗತಿಯಾಗಿದೆ
ಅಂಬೇಡ್ಕರ್ ಅವರು ಪುಸ್ತಕಗಳ ಒಡನಾಟಿಯಾಗಿದ್ದರು ಅವರು ತಮ್ಮ ಇಡಿ ಜೀವನವನ್ನು ಪುಸ್ತಕಗಳೊಂದಿಗೆ ಕಳೆದಿದ್ದಾರೆ ಅಂತಹ ಮಹಾನ್ ವ್ಯಕ್ತಿ ಜಯಂತಿ ಮತ್ತು ಜ್ಯೋತಿಬಾ ಪುಲೆ ಅವರ ೨೦೦ನೇ ಜಯಂತಿ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದ ಅವರು ಬಾಬಾಸಾಹೇಬರ ಪತ್ನಿ ರಾಮಬಾಯಿ ಅವರ ಜೀವನ ಅವರ ಸಾಮಾಜಿಕ ಕೊಡುಗೆ ಬಗ್ಗೆ ಅಧ್ಯಯನ ಮಾಡುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಡಿ ಎಸ್ ಎಸ್ ನ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಅವರು ಮಾತನಾಡಿ ಪುಸ್ತಕಗಳನ್ನು ಜನರ ಬಳಿಗೆ ಹೋಗಬೇಕು ಜನರಿಗೆ ಕೊಳ್ಳುವ ಶಕ್ತಿ ಬರಬೇಕು ಎಂಬ ದೃಷ್ಟಿಕೋನದಲ್ಲಿ ಬುದ್ಧ, ಬಸವ ಬಾಬಾಸಾಹೇಬರ ಪುಸ್ತಕ ಮೇಳವನ್ನು ಬಸವರಾಜ ಸೂಳಿಬಾವಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವುದು ಸಾಂದರ್ಭಿಕ ಸೂಕ್ತವಾಗಿದೆ ಎಂದು ಹೇಳಿದ ಅವರು ಬಾಬಾಸಾಹೇಬರ ಜನ್ಮದಿನದ ಸಂದರ್ಭದಲ್ಲಿ ಪುಸ್ತಕ ಮೇಳವನ್ನು ಹಮ್ಮಿಕೊಂಡಿರುವುದು ದೇಶಕ್ಕೆ ವೈಚಾರಿಕತೆಯ ಸಂದೇಶ ಕೊಡುತ್ತಿದೆ ಎಂದು ಹೇಳಿದ ಅವರು ಅಂಬೇಡ್ಕರ್ ಅವರ ಜೀವನ ಪುಸ್ತಕಗಳಿಂದ ರುಪುಗೊಂಡಿದೆ, ಇತಿಹಾಸದಲ್ಲಿ ಪ್ರಭುತ್ವಕ್ಕೆ ಪುಸ್ತಕಗಳ ಭಯ ಕಾಡುತ್ತಿದೆ. ಅದು ಇವತ್ತಿನ ವಿಷಯವಲ್ಲ ಬಸವಾದಿ ಶರಣರ ಕಾಲದಿಂದಲೂ ಪ್ರಭುತ್ವವು ಪುಸ್ತಕಗಳ ವೈಚಾರಿಕತೆಗೆ ಅಂಜುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಅನಿಲ ಹೊಸಮನಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಅರುಣಕುಮಾರ ಇಂಗಳೆ, ಹಾಸಿಂಪೀರ ವಾಲಿಕಾರ, ಆರತಿ ಶಹಾಪುರ, ಸುಭಾಸ ಬೆಳ್ಳುಳ್ಳಿ, ಶ್ರೀನಿವಾಸ ಜಾಲವಾದಿ ಹೇಮಂತ ಭೂತನಾಳ, ಸುರೇಶ ಗೆಜ್ಜಿ, ಹೇಮಂತ ಭೂತನಾಳ, ಸಿದ್ದರಾಮ ಉಪ್ಪಿನ ಅಡಿವೆಪ್ಪ ಸಾಲಗಲ್ಲ ಬಸವರಾಜ ಸೂಳಿಬಾವಿ ಉಪಸ್ಥಿತರಿದ್ದರು. ಸುರೇಶ ಬಿಜಾಪುರ ನಿರೂಪಿಸಿದರು, ಸಂಜು ಕಂಬಾಗಿ ವಂದಿಸಿದರು.

WhatsApp Group Join Now
Telegram Group Join Now
Share This Article