೩೧ ನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನೆ

Ravi Talawar
೩೧ ನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನೆ
WhatsApp Group Join Now
Telegram Group Join Now

ಗದಗ : ನಗರದ ಜೋಡ ಮಾರುತಿ ದೇವಸ್ಥಾನ ಹತ್ತಿರ ಬಾಜಪ ಕಾರ್ಯಾಲಯವನ್ನು ಹನಮ ಜಯಂತಿ ಆಚರಿಸುವ ಮೂಲಕ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಉದ್ಘಾಟಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಪುತ್ರ ಭರತ ಬೊಮ್ಮಾಯಿ ಮಾತನಾಡಿ, ದೇಶದ ಅಭಿವೃದ್ದಿಗೆ ಪ್ರದಾನಿ ನರೇಂದ್ರ ಮೋದಿಜಿ ಅವರ ನೇತೃತ್ವ ಅವಶ್ಯವಾಗಿರುವದರಿಂದ ಅವರ ಕೈ ಬಲ ಪಡೆಸಲು ಮತ್ತೊಮ್ಮೆ ಅವರನ್ನು ಪ್ರದಾನಿ ಮಾಡಲು ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನನ್ನ ತಂದೆಯವರಾದ ಬಸವರಾಜ ಬೊಮ್ಮಾಯಿ ಅವರಿಗೆ ಮತನೀಡುವ ಮೂಲಕ ಕೈಜೋಡಿಸಬೇಕೆಂದು ಗದಗ-ಬೆಟಗೇರಿ ಅವಳಿ ನಗರದ ೩೧ ನೇ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸುವ ಮೂಲಕ ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಶೈಲಾ ಬಾಕಳೆ, ಹಿರಿಯರಾದ ಲೋಕನಾಥಸಾ ಬದಿ, ರಾಜ್ಯ ಓಬಿಸಿ ಕಾರ್ಯದರ್ಶಿ ಸುಧೀರ ಕಾಟಿಗರ, ಯುವ ಮುಖಂಡ ಶ್ರೀಕಾಂತ ಬಾಕಳೆ, ನಾಗರಾಜ ಖೋಡೆ, ನಾಸೀರ ನರೇಗಲ್, ಕುಮಾರ ಮಾರನಬಸರಿ, ಭೂತ
ಅಧ್ಯಕ್ಷರುಗಳಾದ ಪರಶುರಾಮ ಮಿಸ್ಕಿನ್, ಕೃಷ್ಣಸಾ ಲದವಾ, ಸಂತೋಷ ಮೇಲಗಿರಿ, ಪ್ರಕಾಶ ಕಾಟಿಗರ, ರವಿ ಹಡಪದ, ರಾಜೇಶ ಖೋಡೆ, ತುಕಾರಾಮ ನಾಕೋಡ, ಮಯೂರ ಕಾಟಿಗರ, ಅನಿಲ್ ಬಸವಾ, ಮಹಿಳಾ ಮುಖಂಡರುಗಳಾದ ಕೌಶಲ್ಯಾಬಾಯಿ ಬದಿ,
ಶೋಭಾ ಬಾಂಡಗೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article