ಸಮಾಜಕಾರ್ಯ ಶಿಬಿರದ ಉದ್ಘಾಟನಾ ಸಮಾರಂಭ

Ravi Talawar
ಸಮಾಜಕಾರ್ಯ ಶಿಬಿರದ ಉದ್ಘಾಟನಾ ಸಮಾರಂಭ
WhatsApp Group Join Now
Telegram Group Join Now
ಜಮಖಂಡಿ: ಏಳು ದಿನಗಳ ಶಿಬಿರಕ್ಕೆ ಬೇಕಾಗುವ ಅಗತ್ಯ ರೀತಿಯ ಸಹಾಯ ಮತ್ತು ಸಹಕಾರವನ್ನು ಗ್ರಾಮ ಪಂಚಾಯತ ನೀಡಲಾಗುವದು ಎಂದು ಗ್ರಾ.ಪಂ.ಅಧ್ಯಕ್ಷ ಸತ್ಯವ್ವ ಮಹಾದೇವ ನಾಟಿಕರ ಹೇಳಿದರು.
ತಾಲೂಕಿನ ಸನಾಳ ಗ್ರಾಮದಲ್ಲಿ ಹುನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಮತ್ತು ಗ್ರಾಮ ಪಂಚಾಯತ ಕುಂಬಾರಹಳ್ಳ ಸಹಯೋಗದಿಂದ ಸಮಾಜಕಾರ್ಯ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸನಾಳ ಮತ್ತು ಕುಂಬಾರಹಳ್ಳ ಗ್ರಾಮಸ್ಥರು ಎಲ್ಲರನ್ನು ಅತಿಥಿಗಳಂತೆ ಸತ್ಕರಿಸೋಣ. ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಏಳು ದಿನಗಳಲ್ಲಿ ಗ್ರಾಮದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಂತಹ ಸಲ್ಲಿಸಬೇಕು ಎಂದರು.
ಗ್ರಾ.ಪA.ಸದಸ್ಯ ಮಹಾದೇವ ಗುಗ್ಗರಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ, ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ಇಂತಹ ಶಿಬಿರಗಳು ಅವಶ್ಯಕವಾಗಿವೆ. ಗ್ರಾಮಸ್ತರು ಶಿಬಿರಾರ್ಥಿಗಳಿಗೆ ಸಹಾಯ ಮತ್ತು ಸಹಾಕಾರವನ್ನು ನೀಡುವ ಮೂಲಕ ಗ್ರಾಮದ ಏಳಿಗೆಗೆ ಸಹಕರಿಸಬೇಕು, ಗ್ರಾಮೀಣ ಜನರಿಗೆ ಅನೇಕ ರೀತಿಯ ಸಾಮಾಜಿಕ ಆರ್ಥಿಕ ಸಮಸ್ಯೆಗಳು ಇರುತ್ತವೆ ಅವುಗಳನ್ನು ಅಧ್ಯಯನಕ್ಕೆ ಅನುಕೂಲತೆಗಳನ್ನು ಗ್ರಾಮಸ್ಥರು ಮಾಡಿಕೊಡಬೇಕೆಂದು ಎಂದು ತಿಳಿಹೇಳಿದರು. ನೀವು ವಿದ್ಯಾರ್ಥಿಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಯಶಸ್ವಿಯಾಗಿ ಮಾಡಿ ಎಂದು ಹೇಳಿದರು.
ಸಮಾಜಕಾರ್ಯ ವಿಭಾಗದಮುಖ್ಯಸ್ಥ ಡಾ.ಎಂ.ನಶAಕರಯ್ಯ ಮಾತನಾಡಿ, ಸಾಮಾಜಕಾರ್ಯ ಒಂದು ವೃತ್ತಿಪರ ಶಿಕ್ಷಣವಾಗಿದ್ದು, ವೈದ್ಯಕೀಯ, ಇಂಜಿನಿಯರಿAಗ, ಕಾನೂನ ವಿಷಯಗಳಂತೆ ವೃತ್ತಿಪರತೆ ಹೊಂದಿದೆ. ಸಮಾಜ ಕಾರ್ಯ ಶಿಬಿರದ ಮೂಲಕ ಗ್ರಾಮಗಳ ಅಭಿವೃದ್ಧಿ ಚಟುವಟಿಕೆ ಮಾಡಲಾಗುತ್ತಿದೆ. ಗ್ರಾಮೀಣ ಜನರ ಸಹ ಭಾಗಿತ್ವದಲ್ಲಿ ಶ್ರಮದಾನ, ಸ್ವಚ್ಚತೆ, ಸಮಸ್ಯೆಗಳ ಪರಿಹರಿಸಿಕೊಳ್ಳುವ ಸಾಮರ್ಥ್ಯವನ್ನು ಗ್ರಾಮಗಳು ಹೊಂದುವAತೆ ಜಾಗೃತಿ ಮೂಡಿಸಲಾಗುವದು/ ಭಾರತ ಹಳ್ಳಿಗಳಿಂದ ಕೂಡಿದ ರಾಷ್ಟçವಾಗಿದ್ದು, ಗ್ರಾಮಗಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ವೃದ್ಧರ, ಮಹಿಳೆಯರ ಸಮಸ್ಯೆಗಳು, ಬಾಲಕಾರ್ಮಿಕತೆ, ಬಾಲಾಪರಾಧ, ವರದಕ್ಷಿಣೆಯಂತಹ ಸಮಸ್ಯೆಗಳ ಕುರಿತು ಅಧ್ಯಯನ ಕೈಗೊಳ್ಳಲಾಗುತ್ತದೆ. ಲಯನ್ಸ ಕ್ಲಬ ಸಹಯೋಗದೊಂದಿಗೆ ವಿವಿಧ ಆರೋಗ್ಯ ತಪಾಸಣಾ ಶಿಬಿರಗಳು, ಸಮೀಕ್ಷಾ, ಜಾಥಾ ಕಾರ್ಯಕ್ರಮ, ಕಿರುನಾಟಕದ ಮೂಲಕ ಜಾಗೃತಿ ಮೂಡಿಸಲಾಗುವದು ಎಂದರು.
ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಎನ್.ವಿ.ಅಸ್ಕಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಣಮಂತ ಕುರಣಿ, ಡಾ. ಎಂ.ಸತೀಶಗೌಡ, ಡಾ.ಪಿ.ಜೈಪ್ರಕಾಶ, ಎಂ.ಇ.ಕವಿತಾ ಸಹಿತ ಹಲವರು ಇದ್ದರು.
WhatsApp Group Join Now
Telegram Group Join Now
Share This Article