ಇoಡಿ : ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಸುಮಾರು ೧ ಕೋಟಿ ರೂಪಾಯಿ ರಾಷ್ಟೀಯ ಜಾನುವಾರ ಮಿಷನ್ ಅನುದಡಿಯಲ್ಲಿ ಆಡು ಸಾಕಾಣಿಕೆ ಕೇಂದ್ರವನ್ನು ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಅನುದಾನ ಪಡೆದು ನಮ್ಮ ರೈತರು ಆರ್ಥಿಕವಾಗಿ ಪ್ರಭಲಗೊಳ್ಳಬೇಕು ಅಂದಾಗ ಸರ್ಕಾರದ ಹೋಣೆ ಕಡಿಮೆಗೊಳಿಸಲು ಸಾಧ್ಯ ಎಂದರು, ಈ ಯೋಜನೆಯು ಎಲ್ಲಾ ಸಮುದಾಯದವರಿಗು ೧ ಕೋಟಿ ಅನುದಾನದಲ್ಲಿ ೫೦% ಪ್ರತಿಷತ್ ಸಬ್ಸಿಡಿ ನಿಡಿದ್ದು ಇಂತಹ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸುಧಾರಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗಬೇಕು, ಈ ಯೋಜನೆಯ ಮೂಖ್ಯ ಉದ್ದೇಶ ಎಂದರೆ ಥಳಿಯ ಸಂವರ್ಧನೆ ಮತ್ತು ಸಾವಯವ ಗೊಬ್ಬರ ತಯಾರಿಸಬಹುದು, ಇದರಿಂದ ಹಲವಾರು ರೀತಿಯಲ್ಲಿಉತ್ಪಾದನೆ ಸಾಧ್ಯ ಎಂದರು.
ಅoಜುಟಗಿ ಗ್ರಾಮದ ರೈತರಾದ ರಾಯಪ್ಪ ಹರಳಯ್ಯ ಇವರು ಸುಮಾರು ದಿನಗಳಿಂದ ಈ ಯೋಜನೆ ಪಡೆಲು ಅಂತರಜಾಲದಲ್ಲಿ ಅರ್ಜಿ ಸಲ್ಲಿಸಿ, ಎಲ್ಲಾ ರಿತಿಯ ಸರ್ಕಾರಿ ದಸ್ತಾವೇಜುಗಳನ್ನು ಪರಿಶಿಲಿಸಿ ಇವರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಸಹಾಯಕ ನಿರ್ದೆಶಕರು ಪಶು ಸಂಗೋಪನಾ ಇಲಾಖೆಯ ಡಾ. ಬಿ.ಎಚ್.ಕನ್ನೂರ ಈ ಸಂದರ್ಬದಲ್ಲಿ ಮಾತನಾಡಿದರು.
ಸರ್ಕಾರದಿಂದ ಅನುದಾನ ಪಡೆಯಲು ಈ ಯೋಜನೆಗೆ ಸುಮಾರು ೬ ಎಕ್ಕರೆ ಜಮೀನು ಹೊಂದಿರಬೇಕು, ಈ ಯೋಜನೆಯಲ್ಲಿ ೫೦೦ ಹೆಣ್ಣು, ೨೫ ಗಂಡು ಆಡುಗಳನ್ನು ಸಾಕುವಷ್ಟು ಸೆಡ್ಡ ನಿರ್ಮಾಣ ಮಾಡಬೇಕು, ಈ ಯೋಜನೆ ರಾಷ್ಟೀಯ ಜಾನುವಾರ ಮಿಷನ್ ಮೂಲಕ ಯೋಜನೆ ಅನುದಾನ ವಿತರಿಸಲಾಗುವುದು, ತಳಿ ಸುಧಾರಣೆ ಮೂಲಕ ಪ್ರತಿ ಪ್ರಾಣೀ ಉತ್ಪಾದನೆಯ ಹೆಚ್ಚಳ, ಮಾಂಸ, ಮೇಕೆ ಹಾಲು ಉಣ್ಣೆ ಮತ್ತು ಮೇವಿನ ಉತ್ಪಾದನೆ ಹೆಚ್ಚಳ, ಈ ಯೋಜನೆಗಳ ಮುಖ್ಯ ಉದ್ದೇಶ, ಇಂತಹ ಹಲವಾರು ಯೋಜನೆಗಳು ಸರ್ಕಾರ ನಮ್ಮ ರೈತರಿಗೆ ನೀಡಿದ್ದು ಇವುಗಳನ್ನು ಸರಿಯಾದ ರಿತಿಯಲ್ಲಿ ಸದುಪಯೋಗ ಪಡೆದುಕೊಂಡಾಗ ನಮ್ಮ ರೈತರು ಆರ್ಥಿಕವಾಗಿ ಸುಧಾರಣೆ ಹೊಂದುವದರಲ್ಲಿ ಸಂದೇಹವಿಲ್ಲ ಎಂದರು.
ಈ ಸಂದರ್ಬದಲ್ಲಿ ಪಶು ವೈದ್ಯಾಧಿಕಾರಿ ಡಾ. ಸುಧೀರ ನಾಯಕ, ನಾಡ ಕಛೇರಿಯ ಉಪ ತಹಶೀಲ್ದಾರ ಎ.ಎಸ್.ಗೋಫಟ್ಯಾಳ, ರುದ್ರವಾಡಿ ಸರ್, ವಿಜಯಪುರ ಜಿಲ್ಲಾ ಕಾಂಗ್ರೆಸ ಎಸ್.ಟಿ.ಘಟಕದ ಅಧ್ಯಕ್ಷರು ಸಣ್ಣಪ್ಪ ತಳವಾರ, ಶಬಿರ ಮುಲ್ಲಾ, ರಾಜಶೇಖರ ಕಾಂಬಳೆ, ರಯಗೊಂಡ ರಗಟೆ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.