ಇಂಡಿ : ದೇಶದ ಅಭಿವೃದ್ದಿಗೆ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವದಾಗಿದ್ದು ಅವರು ಕೆಲಸ ಮಾಡದಿದ್ದರೆ ದೇಶದ ಅಭಿವೃದ್ದಿಯ ಮೇಲೆ ವ್ಯತರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಶ್ರೀ ಕೋಟೆಪ್ಪ ಕಾಂಬಳೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಗುರುಭವನ ಸಬಾಭವನದಲ್ಲಿ ಹಮ್ಮಿಕೊಂಡ ಕಾರ್ಮಿಕರಿಗೆ ಸಂಬAದಿಸಿದ ವಿವಿಧ ಕಾಯ್ದೆಗಳು ಹಾಗೂ ಸರಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಏರ್ಪಡಿಸಿದ ತಾಲೂಕಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಎಲ್ಲ ರಾಷ್ಟçಗಳು ಕಾರ್ಮಿಕರ ಸುರಕ್ಷತೆ ಕುರಿತು ಕಾಯ್ದೆ ರೂಪಿಸಿವೆ. ದಿನನಿತ್ಯದಲ್ಲಿ ಸಾಮಾನ್ಯ ಜನರಿಗೆ ಕಾನೂನುಗಳ ಬಗ್ಗೆ ಮಾಹಿತಿ ನೀಡುವದು ನಮ್ಮ ಕರ್ತವ್ಯ. ಕೆಲಸ ಕೀಳು ಎಂದು ತಿಳಿದುಕೊಳ್ಳದೆ ಶ್ರದ್ದೆಯಿಂದ ಮತ್ತು ಸುರಕ್ಷತೆಯಿಂದ ಕೆಲಸ ಮಾಡಲು ಹೆಚ್ಚಿನ ಒತ್ತು ನೀಡಬೇಕು ಎಂದರು.
ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ ಮಾತನಾಡಿ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ಇವೆ. ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ,ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಮದುವೆ ಧನ ಸಹಾಯ, ತಾಯಿ ಮತ್ತು ಸಹಾಯ ಹಸ್ತ ಎನ್ನುವಂತ ವಿವಿಧ ಸೌಲಭ್ಯ ಸಿಗುತ್ತವೆ. ಕಾರ್ಮಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಮಿಕ ಅಧಿಕಾರಿಗಳು ಉಮಾಶ್ರೀ ಕೋಳಿ, ಕಾರ್ಮಿಕ ನಿರೀಕ್ಷಕ ದತ್ತು ದೇವರಮನಿ, ಕಾರ್ಮಿಕ ಸಂಘದ ಅಧ್ಯಕ್ಷ ಎಲ್.ಡಿ.ನದಾಫ ಮಾತನಾಡಿದರು.
ದಿವಾನಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸುನೀಲಕುಮಾರ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕಿ ನೀಲಮ್ಮ ಖೇಡಗಿ , ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಬಿರಾದಾರ, ಮಲ್ಲಿಕಾರ್ಜುನ ಬಗಲಿ, ಸುಭಾಸಚಂದ್ರ ಟೋನಿ, ರೋಹಿತ ಗೊಂದಳಿ,ಪ್ರಶಾAತ ಅರ್ಜನಾಳ ವೇದಿಕೆ ಮೇಲಿದ್ದರು. ಸಿದ್ದು ಹಾವಳಗಿ ಸೇರಿದಂತೆ ಹಲವಾರು ಕಾರ್ಮಿಕರು ಉಪಸ್ಥಿತರಿದ್ದರು.