ಬಳ್ಳಾರಿ. ಫೆ. 17: ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ವಿವಿಧ ವೃಂದ ಮತ್ತು ನೇಮಕಾತಿಯಲ್ಲಿ ಸ್ಥಳೀಯರಿಗೆ ಮೀಸಲಾತಿಯಲ್ಲಿ ಶೇ.75ರಷ್ಟು ಮತ್ತು ಶೇ.25ರಷ್ಟು ಕಲ್ಯಾಣ ಕರ್ನಾಟಕ (371ಜೆ) ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳನ್ನು ಹೊರತು ಪಡಿಸಿ ಇತರೆ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಅಧಿಸೂಚನೆಯಲ್ಲಿ ಹೊರಡಿಸಲಾಗಿರುತ್ತದೆ ಈ ಅಧಿಸೂಚನೆಯಿಂದ (371ಜೆ) ಹೈದರಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದರಿಂದ ನೇಮಕಾತಿಯಲ್ಲಿ ಶೇ.100ರಷ್ಟು ಸ್ಥಳೀಯರಿಗೇ ಉದ್ಯೋಗ ಅವಕಾಶವನ್ನು ಕಲ್ಪಿಸಿ ಈ ಭಾಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಊಳೂರು ಸಿದ್ದೇಶ್ ಒತ್ತಾಯಿಸಿದ್ದಾರೆ.
ಅವರು ಇಂದು ವಿ ಎಸ್ ಕೆ ವಿವಿಯ ಉಪ ಕುಲಪತಿಗಳಿಗೆ ಮನವಿ ಪತ್ರವನ್ನು ನೀಡಿ, ದಿನಾಂಕ 30 ಜನೆವರಿ 2026 ಅಧಿಸೂಚನೆ ಹೊರಡಿಸಿದ್ದು (ಸಂಖ್ಯೆ:ವಿಶ್ರೀಕೃಬ/ಆಡಳಿತ/ಡಿಪಿ ಎಆರ್-ಭೋಧಕ/2025-26/3238 ) ಈ ಅಧಿಸೂಚನೆಯ ಪತ್ರಿಕಾ ಪ್ರಕಟಣೆಯಲ್ಲಿ ನೇಮಕಾತಿಯ ಕುರಿತಂತೆ ವಿಷಯವಾರು ಹುದ್ದೆಗಳು, ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಈ ಎಲ್ಲಾ ಹುದ್ದೆಗಳಿಗೆ ನಿಗಧಿತ ವಿದ್ಯಾರ್ಹತೆ ಮತ್ತು ವಯಸ್ಸು, ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇವುಗಳ ಕುರಿತು ಸ್ಪಷ್ಟ ಮಾಹಿತಿ ಇಲ್ಲದಿರುವುದು ಅಭ್ಯರ್ಥಿಗಳಿಗೆ ನೇಮಕಾತಿ ವಿಷಯದಲ್ಲಿ ಅನುಮಾನದ ಶಂಕೆ ಮತ್ತು ಗೊಂದಲವನ್ನು ಉಂಟು ಮಾಡಿರುತ್ತದೆ, ಆದ್ದುದರಿಂದ ಪ್ರಸ್ತುತ ತಾವುಗಳು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸಿ ಸ್ಟಷ್ಟ ಮಾಹಿತಿಗಳೊಂದಿಗೆ ಹೊಸ ಅಧಿಸೂಚನೆಯನ್ನು ಹೊರಡಿಸಿ ನೇಮಕಾತಿಯಲ್ಲಿ ಸ್ಥಳೀಯರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕೆಂದು ಮತ್ತು ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಯಾವುದೇ ಅನುಮಾನಗಳಿಗೆ ಅಸ್ಪದ ನೀಡದಂತೆ ಸ್ಥಳೀಯ ಅಭ್ಯರ್ಥಿಗಳಿಗೆ ನ್ಯಾಯವನ್ನು ಒದಗಿಸಬೇಕೆಂದು ವಿ ವಿ ಕುಲಪತಿಗಳಿಗೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಿದ್ದಾರೆ.


