ಇಂದಿನ ಯುಗದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟು ಮುಂದೆ ಬನ್ನಿ.   ಬಿ ಬಿ. ಗಣಾಚಾರಿ     

Ravi Talawar
ಇಂದಿನ ಯುಗದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟು ಮುಂದೆ ಬನ್ನಿ.   ಬಿ ಬಿ. ಗಣಾಚಾರಿ     
WhatsApp Group Join Now
Telegram Group Join Now

ಬೈಲಹೊಂಗಲ.ಪ್ರಸಕ್ತ ವಿದ್ಯಾರ್ಥಿಗಳಿಗೆ ಶಿಕ್ಷಣ ಅತೀ ಮುಖ್ಯವಾದದ್ದು ಅದಕ್ಕೆ ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಜೀವನದಲ್ಲಿ ಮುಂದೆ ಬರಬೇಕು ಎಂದು ಬಿ ಬಿ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ ಬಿ ಗಣಾಚಾರಿ ಹೇಳಿದರು.

   ಅವರು ಪಟ್ಟಣದ    ಶ್ರೀ ಬಸವೇಶ್ವರ ಸ್ವತಂತ್ರ ಪಪೂ ಮಹಾವಿದ್ಯಾಲಯದಲ್ಲಿ 2008-2009 ನೆ ಸಾಲಿನ ಪಿಯುಸಿ ವ್ಯಾಸಂಗ ಮಾಡಿದ  ವಿದ್ಯಾರ್ಥಿಗಳಿಂದ ನಡೆದ ಗುರುವಂದನೆ ಹಾಗೂ ಸ್ನೇಹ ಸಮ್ಮೆಳನ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿ ಇಂದಿನ  ಯುಗದಲ್ಲಿ ಶಿಕ್ಷಣ ಅತ್ಯಮೂಲ್ಯವಾದದ್ದುಅದಕ್ಕೆ ಒಳ್ಳೆಯ ಗುಣಮಟ್ಟದ    ಶಿಕ್ಷಣ ಪಡೆದು ಎಲ್ಲರೂ ಒಳ್ಳೆಯ ನಾಗರಿಕರಾಗಬೇಕು.
       ಕಾಲೇಜಿನ ಪ್ರಾಚಾರ್ಯರಾದ ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿ  ಮಾತನಾಡಿ ಅಂದು ಕಲಿತು ಇಂದು ಒಳ್ಳೆಯ ನಾಗರಿಕರಾಗಿ ಮುಂದೆ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದಿದ್ದೀರಿ  ನಿಮ್ಮ  ಜೀವನ ಉಜ್ವಲವಾಗಲಿ ನಗುನಗುತಾ ಜೀವನ ಸಾಗಿಸಿ  ಎಂದು ಶುಭ ಹಾರೈಸಿದರು. ಉಪನ್ಯಾಸಕರಿಗೆ ಗುರುವಂದನೆ ಸಲ್ಲಿಸಿದ ಹಳೇ ವಿದ್ಯಾರ್ಥಿಗಳ ಕಾರ್ಯ ವಿಸ್ಮರಣೀಯವಾಗಿದೆ ಎಂದರು.
         ಕಾರ್ಯಕ್ರಮದಲ್ಲಿ  ಉಪನ್ಯಾಸಕರಾದ ಸಾವಿತ್ರಿ ಹಣಮಂತಗಡ,ಎಸ್.ಎಸ್.ಬೆಳ್ಳಿಕಟ್ಟಿ, ಸಿ.ಬಿ.ಚಿಕ್ಕೊಪ್ಪ, ಸವಿತಾ ರೊಟ್ಟಿ, ಎಸ್.ಬಿ.ಪಾಟೀಲ, ಭಾರತಿ ಹಜೇರಿ,ಕೆ.ವಿ.ಯಲಿಗಾರ, ಎಸ್.ಬಿ.ಪುರಾಣಿಕಮಠ,ಎಸ್.ಜೆ.ಬಡಿಗೇರ ಹಾಗೂ 2008-2009  ನೇ ಸಾಲಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು  ಉಪಸ್ಧಿತರಿದ್ದರು.ಎಲ್ಲ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
WhatsApp Group Join Now
Telegram Group Join Now
Share This Article