ನೇಗಿನಹಾಳ :ಹಿಂದೂ-ಮುಸ್ಲಿಂ ಸಮುದಾಯದವರು ಒಟ್ಟಾಗಿ ಸೇರಿ ಆಚರಿಸುವ ಮೊಹರಂ ಹಬ್ಬ ಸೌಹಾರ್ದತೆಯ ಸಾರುತ್ತದೆ. ಗ್ರಾಮದ ಶಿರಹಟ್ಟಿ ಪಕ್ಕೀರೇಶ್ವರ ದೇವಸ್ಥಾನದ ಜೊತೆಗೆ ಗ್ರಾಮದ ನಾಲ್ಕು ವಿವಿಧ ಸ್ಥಳದಲ್ಲಿ ಮೊಹರಂ ಡೊಲಿಗಳನ್ನು ಕುಳ್ಳಿಸುತ್ತಾರೆ. ಎಲ್ಲವೂ ಗ್ರಾಮದ ಬಸವೇಶ್ವರ ಸರ್ಕಲ್ ಮುಂದೆ ಬಂದು ಒಂದಾಗಿ ಸೇರಿ ನಂತರ ಮರಳಿ ತಮ್ಮ ಸ್ಥಳಕ್ಕೆ ತೆರಳಿತ್ತವೆ.
ಈ ಹಬ್ಬದ ನಿಮಿತ್ತ ಮೆರವಣಿಗೆಯಲ್ಲಿ ಕರ್ಬಲ್, ಜಾಂಜ, ಹಾಗೂ ವಿವಿಧ ನೃತ್ಯಗಳು, ಪಕ್ಕೀರೇಶ್ವರ ದೇವಸ್ಥಾನದ ಮುಂದೆ ಕಿಚ್ಚು ಹಾಕಿರುತ್ತಾರೆ ಅದರಲ್ಲಿ ನಡೆದು ತಮ್ಮ ಭಕ್ತಿಯನ್ನು ಸಾರುತ್ತಾರೆ. ಈ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಬ್ಬರೂ ಭಾವೈಕ್ಯತೆಯ ಸಂದೇಶವಾದ ಕೈ ಗಳಿಗೆ ಕೆಂಪ್ಪು ಬಣ್ಣದ ದಾರ(ಲಾಡಿ) ಕಟ್ಟಿಕೊಳ್ಳುತ್ತಾರೆ ಕೊನೆಯ ದಿನ ಅದನ್ನು ಡೊಲಿಗಳಿಗೆ ಒಗೆಯುತ್ತಾರೆ.
ಡೊಲಿಗಳು ತೆರಳುವ ದಾರಿಯುದ್ದಕ್ಕೂ ಪ್ರತಿಯೊಂದು ಮನೆಯಿಂದ ನೀರು ಸುರಿದು ಆಹಾರ ಪದಾರ್ಥಗಳನ್ನು ಪ್ರಸಾದದ ನೈವೇದ್ಯ ಮಾಡುತ್ತಾರೆ. ಈ
ಸಂದರ್ಭದಲ್ಲಿ ಚೊಂಗೆ ಎಂಬ ವಿಭಿನ್ನ ರೀತಿಯ ಆಹಾರವನ್ನು ಮೂರು ದಿನ, ಹನ್ನೊಂದು ದಿನ, ತಿಂಗಳ ಪ್ರಸಾದ ಅಂತ ತಯಾರಿಸಿ ನೈವೇದ್ಯ ಹಿಡಿಯುತ್ತಾರೆ
(೧೭ ಎನ್.ಜಿ.ಪಿ ೦೧) ನೇಗಿನಹಾಳ ಗ್ರಾಮದ ಬಸವ ಸರ್ಕಲ್ ನಲ್ಲಿ ವಿವಿಧ ಡೊಲಿಗಳು ಒಂದಡೆ ಸೇರಿ ಮೊಹರಂ ಹಬ್ಬದ ಆಚರಿಸಿರುವುದು.