ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಹಮ್ಮಿಕೊಂಡ ‘ಸ್ವಚ್ಛ ಶನಿವಾರ’ ಕರ‍್ಯಕ್ರಮದಲ್ಲಿ ಗ್ರಾಮದ ಸಂತೆಕಟ್ಟೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.

Abushama Hawaldar
ಇಂಡಿ  ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ  ಹಮ್ಮಿಕೊಂಡ ‘ಸ್ವಚ್ಛ ಶನಿವಾರ’  ಕರ‍್ಯಕ್ರಮದಲ್ಲಿ ಗ್ರಾಮದ ಸಂತೆಕಟ್ಟೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.
WhatsApp Group Join Now
Telegram Group Join Now

ಇಂಡಿ : ಊರು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛವಾದ ಹಾಗೆ ಎಂಬ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಗ್ರಾಪಂ ಮಟ್ಟದಲ್ಲಿ ‘ಸ್ವಚ್ಛ ಶನಿವಾರ’ ಕರ‍್ಯಕ್ರಮ ಹಮ್ಮಿಕೊಳಲಾಗುತ್ತಿದ್ದು, ಎಲ್ಲರೂ ಹಳ್ಳಿಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಇಒ ಬಾಬು ರಾಠೋಡ ಹೇಳಿದರು.
ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಿಪಂ, ತಾಪಂ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡ ‘ಸ್ವಚ್ಛ ಶನಿವಾರ’ ಹಾಗೂ ‘ಸಸಿ ನೆಡುವ’ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮವನ್ನು ಸ್ವಚ್ಛವಾಗಿಡುವುದರ ಜೊತೆಗೆ ಶುಚಿತ್ವದ ಬಗ್ಗೆ ಹಳ್ಳಿಗರಿಗೆ ಮತ್ತಷ್ಟು ಅರಿವು ಮೂಡಿಸುವ ಸಂಬAಧ ಸ್ವಚ್ಛ ಶನಿವಾರ ಕರ‍್ಯಕ್ರಮವನ್ನು ಪ್ರತಿ ಗ್ರಾಪಂಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರ ಯಶಸ್ಸಿಗೆ ಸಮುದಾಯದ ಸಹಕಾರ ಬಹುಮುಖ್ಯ ಎಂದರು.
ಪಿಡಿಓ ಬಸವರಾಜ ಬಬಲಾದ ಮಾತನಾಡಿ, ಮಾದರಿ ಗ್ರಾಮ ನಿರ್ಮಾಣಕ್ಕಾಗಿ ಸ್ವಚ್ಚತೆ ಮತ್ತು ಸ್ವಾಸ್ಥಕ್ಕೆ ಮೊದಲ ಆದ್ಯತೆ ಕೊಡಬೇಕು. ಗ್ರಾಮ ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ. ಹಾಗೆಯೇ ಗ್ರಾಮದ ಜನರ ಆರೋಗ್ಯ ಸುಧಾರಿಸಿದರೆ ದೇಶ ಸ್ವಸ್ಥವಾಗುತ್ತದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿದರು.
ಪರಶುರಾಮ ಹೊಸಮನಿ , ಪಿಡಿಓ ಜಬ್ಬಾರಅಲಿ ಹಳ್ಳಿ, ಸದಸ್ಯರಾದ ಶಿವಾನಂದ ಪೂಜಾರಿ, ದ್ಯಾವಪ್ಪ ಮಿರಗಿ, ಗ್ರಾಮಸ್ಥರಾದ ಉಮೇಶ ಹಲಸಂಗಿ, ಸುದರ್ಶನ ಬೇನೂರ ಹಾಗೂ ಪಂಚಾಯಿತಿ ಸಿಬ್ಬಂದಿಗಳಾದ ಮಲ್ಲಮ್ಮ ಚವ್ಹಾಣ, ಶ್ರೀಧರ ಬಾಳಿ, ಅಕ್ಬರ ಕೊರಬು, ಸಚಿನ ಹೊಸೂರ ಮತ್ತಿತರಿದ್ದರು.
ಗ್ರಾಮದ ಸಂತೆಕಟ್ಟೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಜತೆಗೆ ಗಿಡಗಳನ್ನು ನೆಡಲಾಯಿತು.

WhatsApp Group Join Now
Telegram Group Join Now
Share This Article