ದೇವದಾಸಿ ಮಹಿಳೆಯರ ಮರು ಸಮೀಕ್ಷೆಯಲ್ಲಿ ಅನಧಿಕೃತ ಮಹಿಳೆಯರು ದಾಖಲು : ಈರಪ್ಪ ಢವಳೇಶ್ವರ

Pratibha Boi
ದೇವದಾಸಿ ಮಹಿಳೆಯರ ಮರು ಸಮೀಕ್ಷೆಯಲ್ಲಿ ಅನಧಿಕೃತ ಮಹಿಳೆಯರು ದಾಖಲು : ಈರಪ್ಪ ಢವಳೇಶ್ವರ
Oplus_16908288
WhatsApp Group Join Now
Telegram Group Join Now

ಮೂಡಲಗಿ : ದೇವದಾಸಿ ಮಹಿಳೆಯರ ಮರು ಸಮೀಕ್ಷೆಯಲ್ಲಿ ಅನಧಿಕೃತವಾಗಿ ದಾಖಲಾಗುತ್ತಿರುವ ಕಾರಣ ನಿಜವಾದ ದೇವದಾಸಿಯರು ಸರಕಾರದಿಂದ ಸಿಗಬೇಕಾಗಿದ್ದ ಹಕ್ಕು ಹಾಗೂ ಸವಲತ್ತುಗಳಿಂದ ವಂಚಿತರಾಗುತ್ತಾರೆ ಎಂದು ಆರೋಪಿಸಿ ನಿಸರ್ಗ ಫೌಂಡೇಶನ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಈರಪ್ಪ ಢವಳೇಶ್ವರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರರ ಕಚೇರಿ ಆವರಣದಲ್ಲಿ ಮಾನ್ಯ ತಹಶೀಲ್ದಾರ ಹಾಗೂ ಶಿಶು ಅಭಿವೃದ್ದಿ ಅಧಿಕಾರಿಕಾರಿಗಳ ಮುಖಾಂತರ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯಲ್ಲಿ ಅನಧಿಕೃತವಾಗಿ ದಾಖಲಾಗುತ್ತಿರುವ ಕುರಿತು ನಿಸರ್ಗ ಫೌಂಡೇಶನ್ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು, ದೇವದಾಸಿಯರ ಪರವಾಗಿ ಅನೇಕ ಸಂಘ ಸಂಸ್ಥೆಗಳು ಹಾಗೂ ನಮ್ಮ ವೈಯಕ್ತಿಕ ಹೋರಾಟಗಳ ಫಲವಾಗಿ ಸಚಿವರು ಕಳೆದ ಮುಂಗಾರು ಅದಿವೇಶನದಲ್ಲಿ ದೇವದಾಸಿಯರ ಮರು ಸಮೀಕ್ಷೆ ನಡೆಸಲು ಪೂರಕ ಮಾಹಿತಿಗಳನ್ನು ಒದಗಿಸಲು ವಿಲ್ ಮಂಡನೆ ಮಾಡಿದ್ದು ಸ್ವಾಗತಾರ್ಹ ವಿ?ಯವಾಗಿದೆ. ಆದರೆ ಮರು ಸಮೀಕ್ಷೆಯಲ್ಲಿ ಕೆಲ ವಿಚ್ಚೇದಿತ ಹಾಗೂ ವಿಧವಾ ಮಹಿಳೆಯರು ಕೂಡ ಅನಧೀಕೃತವಾಗಿ ತಾವು ದೇವದಾಸಿಯರು ಎಂದು ಅರ್ಜಿ ಸಲ್ಲಿಸಿರುವುದು ಖಂಡನಾರ್ಹವಾಗಿದೆ ಎಂದರು.
ಇದು ಕೇವಲ ನಮ್ಮ ಮೂಡಲಗಿ ತಾಲೂಕು ಕೇಂದ್ರದ ಮಾತ್ರ ಸಮಸ್ಯೆಯಾಗಿರದೆ, ಉತ್ತರ ಕರ್ನಾಟಕದ ೧೫ ಜಿಲ್ಲೆಗಳ ಸಮಸ್ಯೆಯಾಗಿದೆ. ಆದಕಾರಣ ಈ ಜಿಲ್ಲೆಗಳಲ್ಲಿ ಈಗಾಗಲೇ ಹಲವು ವ?ಗಳಿಂದ ಇರುವ ಅಧಿಕೃತ ದೇವದಾಸಿ ಮಹಿಳೆಯರನ್ನು ಒಬ್ಬೊಬ್ಬರನ್ನಾಗಿ ಆಯಾ ತಾಲೂಕು ಕೇಂದ್ರಗಳಲ್ಲಿ ಕರೆದು ಹಾಲಿ ಅರ್ಜಿ ಸಲ್ಲಿಸಿರುವ ಮಹಿಳೆಯರ ಹೆಸರನ್ನು ಪ್ರಸ್ತಾಪಿಸಿ ಅವರು ನಿಜವಾದ ದೇವದಾಸಿ ಹೌದೋ ಅಲ್ಲವೋ ಅಂತ ಸಮಾಲೋಚನೆ ಮಾಡುವ ಮುಖಾಂತರ ಸಲಹೆ ಪಡೆದು ಆಯ್ಕೆ ಪ್ರಕ್ರೀಯೆ ಮಾಡಬೇಕು. ಇದರಿಂದ ಕರ್ನಾಟಕದಲ್ಲಿ ಇನ್ನೂ ಉಳಿದಿರುವ ನಿಜವಾದ ದೇವದಾಸಿಯರನ್ನು ಗುರುತಿಸಿ ಅವರಿಗೆ ಸಿಗಬೇಕಾಗ ಹಕ್ಕು ಹಾಗೂ ಸವಲತ್ತುಗಳನ್ನು ಒದಗಿಸಿಕೊಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುನೀಲ್ ಗಸ್ತಿ, ವಿಲ್ಸನ್ ಢವಳೇಶ್ವರ, ಅನಿಲ ಗಸ್ತಿ, ಯಮನಪ್ಪ ಮೇಸ್ತ್ರಿ, ಮಂಜು ದಂಗಗೋಳ, ಯಶೋದಾ ಗಸ್ತಿ, ದೀಪಾ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article